HEALTH TIPS

ಮಾನ್ಯತೆ ರಹಿತ ರಾಜಕೀಯ ಪಕ್ಷಗಳ ವಿರುದ್ಧ ತನಿಖೆ: ದೇಶದಾದ್ಯಂತ ಐ.ಟಿ ದಾಳಿ

 

           ನವದೆಹಲಿ: 'ನೋಂದಾಯಿತ, ಮಾನ್ಯತೆ ಇಲ್ಲದ ರಾಜಕೀಯ ಪಕ್ಷ'ಗಳ (ಆರ್‌ಯುಪಿಪಿ) ವಿರುದ್ಧದ ತೆರಿಗೆ ವಂಚನೆ ಆರೋಪ ಹಾಗೂ ಅವುಗಳು ನಡೆಸಿವೆ ಎನ್ನಲಾದ ಸಂಶಯಾಸ್ಪದ ಹಣಕಾಸು ವ್ಯವಹಾರಗಳ ಕುರಿತ ತನಿಖೆಗೆ ಸಂಬಂಧಿಸಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಿವಿಧ ರಾಜ್ಯಗಳಲ್ಲಿ ಬುಧವಾರ ದಾಳಿ ನಡೆಸಿದ್ದಾರೆ.

           ಗುಜರಾತ್, ದೆಹಲಿ, ಉತ್ತರ ಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸಗಡ, ಹರಿಯಾಣ ಸೇರಿದಂತೆ ಕನಿಷ್ಠ 110 ಸ್ಥಳಗಳಲ್ಲಿ ದಾಳಿಗಳನ್ನು ನಡೆಸಲಾಗಿದೆ ಎಂದು ಇಲಾಖೆ ಮೂಲಗಳು ಹೇಳಿವೆ.

          'ಆರ್‌ಯುಪಿಪಿಗಳು ಹಾಗೂ ಅವರು ಪ್ರವರ್ತಕರ ಆದಾಯದ ಮೂಲ ಹಾಗೂ ವೆಚ್ಚ ಕುರಿತು ಇಲಾಖೆಯು ತನಿಖೆ ಕೈಗೊಂಡಿದೆ. ಕಾನೂನು ಬಾಹಿರವಾಗಿ ಈ ಪಕ್ಷಗಳು ದೇಣಿಗೆ ಪಡೆಯುತ್ತಿವೆ ಎಂಬ ಆರೋಪಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ' ಎಂದು ಅಧಿಕಾರಿಗಳು ಹೇಳಿದ್ದಾರೆ.

             ಆರ್‌ಯುಪಿಪಿಗಳಿಗೆ ಸಂಬಂಧಿಸಿ ಇತ್ತೀಚೆಗೆ ಚುನಾವಣಾ ಆಯೋಗವು ಮಾಡಿದ್ದ ಶಿಫಾರಸಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

              ಆರ್‌ಯುಪಿಪಿಗಳಿಗೆ ಸಂಬಂಧಿಸಿ ಇತ್ತೀಚೆಗೆ ಆಯೋಗವು ಭೌತಿಕ ಪರಿಶೀಲನೆ ಕೈಗೊಂಡಿತ್ತು. ಈ ಪೈಕಿ ಅಸ್ತಿತ್ವದಲ್ಲಿಯೇ ಇರದ 198 ಪಕ್ಷಗಳನ್ನು ಆರ್‌ಯುಪಿಪಿ ಪಟ್ಟಿಯಿಂದ ಆಯೋಗವು ತೆಗೆದುಹಾಕಿತ್ತು.

               ಕಾಯ್ದೆ ಹಾಗೂ ಚುನಾವಣಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದಡಿ 2,100ಕ್ಕೂ ಅಧಿಕ ಆರ್‌ಯುಪಿಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿಯೂ ಆಯೋಗ ಹೇಳಿತ್ತು. ಅಧಿಕೃತ ಮೂಲಗಳ ಪ್ರಕಾರ, ದೇಶದಲ್ಲಿ 2,800 ನೋಂದಾಯಿತ, ಮಾನ್ಯತೆರಹಿತ ಪಕ್ಷಗಳಿವೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries