ಕಾಸರಗೋಡು: ಪ್ರವಾಸಿ ತಾಣ ರಾಣಿಪುರದಲ್ಲಿ ಬೈಕ್ ಮಗುಚಿಬಿದ್ದು, ದೇಲಂಪಾಡಿ ಸನಿಹದ ಪರಪ್ಪ ನೂಜಿಬೆಟ್ಟು ನಿವಾಸಿ ಶ್ರೀಧರನ್ ಎಂಬವರ ಪುತ್ರ ಶ್ರೀಕೇಶ್(19)ಮೃತಪಟ್ಟಿದ್ದು, ಹಿಂಬದಿ ಸವಾರ, ಇವರ ಸ್ನೇಹಿತ ಇಬ್ರಹಿಂ ಅನಸೀಫ್ ಗಾಐಗೊಂಡಿದ್ದಾರೆ.
ಇತರ ಇಬ್ಬರು ಸ್ನೇಹಿತರೊಂದಿಗೆ ಎರಡು ಬೈಕ್‍ಗಳಲ್ಲಿ ರಾಣಿಪುರಕ್ಕೆ ಪ್ರವಾಸ ತೆರಳಿದ್ದು, ವಾಪಸಾಗುವ ಮಧ್ಯೆ ಶ್ರೀಕೇಶ್ ಚಲಾಯಿಸುತ್ತಿದ್ದ ಬೈಕ್ ಪಲ್ಟಿಯಾಗಿತ್ತು. ಗಂಭೀರ ಗಾಯಗೊಂಡ ಇಬ್ಬರನ್ನೂ ಪೂಡಂಕಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶ್ರೀಕೇಶ್ ಜೀವ ಉಳಿಸಲು ಸಾಧ್ಯವಾಗಿರಲಿಲ್ಲ.
ರಾಣಿಪುರದಲ್ಲಿ ಬೈಕ್ ಪಲ್ಟಿ: ದೇಲಂಪಾಡಿ ನಿವಾಸಿ ಯುವಕ ಮೃತ್ಯು, ಇನ್ನೊಬ್ಬ ಗಂಭೀರ
0
ಸೆಪ್ಟೆಂಬರ್ 27, 2022
Tags