ನವದೆಹಲಿ: ಕೋವಿಡ್ ಮತ್ತು ಸೆಂಟ್ರಲ್ ವಿಸ್ಟಾ ಅವೆನ್ಯೂ ನಿರ್ಮಾಣ ಕಾರ್ಯದಿಂದಾಗಿ ಕುಂಠಿತಗೊಂಡಿದ್ದ ಬೀದಿ ವ್ಯಾಪಾರ ಈಗ ಹೊಸದಾಗಿ ನಾಮಕರಣಗೊಂಡ ಕರ್ತವ್ಯ ಪಥದ ಉದ್ಘಾಟನೆಯೊಂದಿಗೆ ಸಹಜ ಸ್ಥಿತಿಗೆ ಮರಳುತ್ತಿವೆ.
1990 ರಿಂದ ಇಂಡಿಯಾ ಗೇಟ್‌ನಲ್ಲಿ ಐಸ್‌ಕ್ರೀಮ್ ಮಾರಾಟ ಮಾಡುತ್ತಿರುವ ರಾಜಿಂದರ್ ಸಿಂಗ್, ಕಳೆದೆರಡು ವರ್ಷಗಳಲ್ಲಿ ತನ್ನ ಕುಟುಂಬ ನಿರ್ವಹಣೆಗೆ ತೊಂದರೆ ಎದುರಿಸಬೇಕಾಯಿತು ಎಂದು ಹೇಳಿದರು.
'ಕೋವಿಡ್ ನಿರ್ಬಂಧಗಳನ್ನು ತೆಗೆದು ಹಾಕಿದ ನಂತರವೂ ವ್ಯಾಪಾರ ಕುಂಠಿತವಾಗಿತ್ತು. ಕೇವಲ ₹100 ರಿಂದ ₹200 ರ ವರೆಗೆ ಲಾಭ ಇತ್ತು. ಕೋವಿಡ್ ಪೂರ್ವದಲ್ಲಿ ವ್ಯಾಪಾರ ಉತ್ತಮವಾಗಿತ್ತು ಮತ್ತು ಮಧ್ಯರಾತ್ರಿಯಲ್ಲೂ ಜನರು ಬರುತ್ತಿದ್ದರು' ಎಂದು ಹೇಳಿದರು.
'ಪೊಲೀಸರು ಅಳವಡಿಸಿರುವ ಬ್ಯಾರಿಕೇಡ್‌ಗಳವರೆಗೆ ಮಾತ್ರ ವ್ಯಾಪಾರಿಗಳಿಗೆ ಮಾರಾಟ ಮಾಡಲು ಅವಕಾಶವಿದೆ. ಆದರೆ, ಸೋಮವಾರದಿಂದ ಮೊದಲಿನಂತೆಯೇ ವ್ಯಾಪಾರ ಮಾಡಲು ಒಳಗೆ ಅನುಮತಿ ನೀಡಲಾಗುವುದು ಎಂದಿದ್ದಾರೆ' ಎಂದು ಸಿಂಗ್ ಹೇಳಿದರು.
ಸಿಂಗ್ ಸ್ನೇಹಿತ, ದೇವಿ ಸರಣ್, ಅವರ ತಂದೆ ಮತ್ತು ಚಿಕ್ಕಪ್ಪ 1956 ರಿಂದ ಇಂಡಿಯಾ ಗೇಟ್‌ನಲ್ಲಿ ಐಸ್‌ಕ್ರೀಮ್ ಮಾರಾಟ ಮಾಡುತ್ತಿದ್ದಾರೆ. ಕೋವಿಡ್‌ನಿಂದಾಗಿ ಅವರ ಕುಟುಂಬಕ್ಕೂ ಜೀವನ ನಡೆಸುವುದು ಕಷ್ಟವಾಗಿತ್ತು.
'ಎಲ್ಲಾ ಚಟುವಟಿಕೆ ಬಂದ್ ಮಾಡಲಾಗಿತ್ತು. ಆರ್ಥಿಕ ಚಟುವಟಿಕೆಗಳು ಪುನರಾರಂಭಗೊಂಡ ಬಳಿಕವೂ ಸಮಸ್ಯೆ ಉಂಟಾಗಿತ್ತು' ಎಂದು ಅವರು ಹೇಳಿದರು.