ನವದೆಹಲಿ: ಕಾಂಗ್ರೆಸ್ ನ ಹಿರಿಯ ಮುಖಂಡ ಶಶಿ ತರೂರ್-ಸೋನಿಯಾ ಗಾಂಧಿ ಭೇಟಿ ತೀವ್ರ ಕುತೂಹಲ ಮೂಡಿಸಿತ್ತು. ಈ ಭೇಟಿಯ ವೇಳೆ ಶಶಿ ತರೂರ್ ಎಐಸಿಸಿ ಅಧ್ಯಕ್ಷರ ಚುನಾವಣೆಗೆ ಸ್ಪರ್ಧಿಸುವ ಇಂಗಿತವನ್ನು ಸೋನಿಯಾ ಗಾಂಧಿ ಅವರ ಬಳಿ ವ್ಯಕ್ತಪಡಿಸಿದ್ದಾರೆ.
ಶಶಿ ತರೂರ್ ಇಂಗಿತಕ್ಕೆ ಸೋನಿಯಾ ಗಾಂಧಿ ಪ್ರತಿಕ್ರಿಯೆ ನೀಡಿದ್ದು, ಚುನಾವಣೆಯಲ್ಲಿ ತಾವು ತಟಸ್ಥರಾಗಿ ಉಳಿಯುವುದಾಗಿ ತಿಳಿಸಿದ್ದಾರೆ.
ಚುನಾವಣೆಗೆ ಹೆಚ್ಚು ಮಂದಿ ಸ್ಪರ್ಧಿಸುವ ಐಡಿಯಾವನ್ನು ಸೋನಿಯಾ ಗಾಂಧಿ ಸ್ವಾಗತಿಸಿದ್ದು, ಅಧಿಕೃತ ಅ
ಸೋನಿಯಾ ಗಾಂಧಿ ಅವರ ಪ್ರತಿಕ್ರಿಯೆ ಶಶಿ ತರೂರ್ ಅವರನ್ನು ಚುನಾವಣೆಗೆ ಸ್ಪರ್ಧಿಸುವುದಕ್ಕೆ ಉತ್ತೇಜಿಸುವಂತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಶಶಿ ತರೂರ್ ತಮ್ಮ ಉಮೇದುವಾರಿಕೆಯನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.
ಶಶಿ ತರೂರ್- ಸೋನಿಯಾ ಗಾಂಧಿ ಭೇಟಿ ಹಾಗೂ ಅದರ ಊಹಾಪೋಹಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದ್ದು, ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಲು ಯಾರಿಂದಲೂ ಅನುಮತಿ ಪಡೆಯಬೇಕಿಲ್ಲ. ಚುನಾವಣೆ ಮುಕ್ತ, ಪ್ರಜಾಸತ್ತಾತ್ಮಕ ಮತ್ತು ಪಾರದರ್ಶಕ ಪ್ರಕ್ರಿಯೆಯಲ್ಲಿ ನಡೆಯಲಿದೆ ಎಂದು ಹೇಳಿದೆ.
I welcome this petition that is being circulated by a group of young @INCIndia members, seeking constructive reforms in the Party. It has gathered over 650 signatures so far. I am happy to endorse it & to go beyond it. memo.withinc.in
ಭ್ಯರ್ಥಿ ಇರಲಿದ್ದಾರೆ ಎಂಬ ಕಲ್ಪನೆಯನ್ನು ಹೋಗಲಾಡಿಸಿದ್ದಾರೆ.