ಕಾಸರಗೋಡು: ಓಣಂ ಮಾರುಕಟ್ಟೆಯಲ್ಲಿ ಗಗನಕ್ಕೇರುತ್ತಿರುವ ಹಣ್ಣು ಮತ್ತು ತರಕಾರಿ ಬೆಲೆಗಳನ್ನು ಪರಿಶೀಲಿಸಲು ಮೊಬೈಲ್ ತರಕಾರಿ ಸ್ಟಾಲ್‍ನೊಂದಿಗೆ ಹೋರ್ಟಿ ಸ್ಟೋರ್ ವಾಹನ ಪರ್ಯಟನೆ ಆರಂಭಿಸಿದೆ. ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಹೋರ್ಟಿ ಸ್ಟೋರ್ ವಾಹನ ಸಂಚರಿಸಲಿದೆ. ವಿಷರಹಿತ ತರಕಾರಿಯನ್ನು ಗರಿಷ್ಠ ಕಡಿಮೆಬೆಲೆಗೆ ಪೂರೈಸುವುದರ ಜತೆಗೆ ಸಾರ್ವಜನಿಕ ಮಾರುಕಟ್ಟೆಯಲ್ಲಿ ಬೆಲೆಯೇರಿತೆ ನಿಯಂತ್ರಿಸುವ ಉದ್ದೇಶದೊಂದಿಗೆ ಮೊಬೈಲ್ ತರಕಾರಿ ಸ್ಟಾಲ್ ಆರಂಭಿಸಲಾಗಿದೆ. ಸಂಚಾರಿ ತರಕಾರಿ ಮಾರಾಟ ವ್ಯವಸ್ಥೆಯನ್ನು ತೋಟಗಾರಿಕಾ ಇಲಾಖೆಯ ಹೋರ್ಟಿ ಕಾರ್ಪ್ ಅಭಿವೃದ್ಧಿಪಡಿಸಿದೆ.
ಹೋರ್ಟಿ ಸ್ಟೋರ್ ಸೆಪ್ಟೆಂಬರ್ 7 ರವರೆಗೆ ವಿವಿಧ ಸ್ಥಳಗಳಲ್ಲಿ ತರಕಾರಿ, ಹಣ್ಣುಗಳ ಮಾರಾಟದಲ್ಲಿ ತೊಡಗಿಸಿಕೊಳ್ಳಲಿದೆ. ಹೋರ್ಟಿ ಸ್ಟೋರ್‍ನಲ್ಲಿ ಸ್ಥಳೀಯವಾಗಿ ಲಭ್ಯವಾಗುವ ಸೌತೆಕಾಯಿ, ಟೊಮೆಟೊ, ಈರುಳ್ಳಿ, ನುಗ್ಗೆ, ಸ್ಥಳೀಯ ಜೇನುತುಪ್ಪ, ಉಪ್ಪಿನಕಾಯಿ ಮತ್ತು ಕುಟ್ಟಿಯಾಟ್ಟೂರ್ ಮಾವಿನ ಸ್ಕ್ವ್ಯಾಷ್ ಮಾರಾಟಮಡಲಾಗುವುದು. ಜಿಲ್ಲೆಯಲ್ಲಿ ವಿವಿಧ ಪಂಚಾಯಿತಿಗಳಲ್ಲಿ ಕೃಷಿ ಇಲಾಖೆ ನೇತೃತ್ವದಲ್ಲಿ 57 ಓಣ ಮಾರುಕಟ್ಟೆಗಳಿವೆ. ಹೋರ್ಟಿ ಸ್ಟೋರ್ ಹಣ್ಣು, ತರಕಾರಿಯನ್ನೊಳಗೊಮಡ ವಾಹನದಲ್ಲಿ ಮೊದಲ ಮಾರಾಟವನ್ನು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಉದ್ಘಾಟಿಸಿದರು. ಕೃಷಿ ಉಪನಿರ್ದೇಶಕಿ ಕೆ.ಎನ್.ಜ್ಯೋತಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಶಕುಂತಲಾ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಜಮೀಲಾ ಸಿದ್ದಿಕ್, ಬಿ.ಎಚ್.ಫಾತಿಮಾ ಶಮ್ನಾ, ಕೃಷಿ ಉಪ ನಿರ್ದೇಶಕ ಪಿ.ರಾಘವೇಂದ್ರ, ವಿ.ಅನಿತಾ, ಮಿನಿ ಪಿ.ಜಾನ್, ಕೆ.ಅನಂತ, ಎನ್.ಮೀರಾ ಉಪಸ್ಥಿತರಿದ್ದರು.
ಬೆಲೆ ಏರಿಕೆಗೆ ಕಡಿವಾಣ ಉದ್ದೇಶ: ಮೊಬೈಲ್ ತರಕಾರಿ ಸ್ಟಾಲ್‍ಗೆ ಚಾಲನೆ
0
ಸೆಪ್ಟೆಂಬರ್ 03, 2022
Tags