ಕುಂಬಳೆ: ಪೆರ್ಮುದೆ ಸೈಂಟ್ ಲಾರೆನ್ಸ್ ಅಸೋಸಿಯೇಶನ್‍ನ ಆಶ್ರಯದಲ್ಲಿ ಕಾಸರಗೋಡು ಕಿಮ್ಸ್ ಸನ್‍ರೈಸ್ ಆಸ್ಪತ್ರೆಯ ಸಹಕಾರದೊಂದಿಗೆ ಭಾನುವಾರ ಪೆರ್ಮುದೆ ಲಾರೆನ್ಸ್ ನಗರದ ಸೈಂಟ್ ಲಾರೆನ್ಸ್ ದಿ ಮಾರ್ಟಿರ್ ಇಗರ್ಜಿ ಪರಿಸರದಲ್ಲಿ ಉಚಿತ ವೈದ್ಯಕೀಯ ಶಿಬಿರ ನಡೆಯಿತು. ಜನರಲ್ ಸರ್ಜನ್ ಡಾ. ಮೃನಾಲ್ ವಿಶ್ವನಾಥ್, ಓರ್ಥೋಪೆಡಿಕ್ಸ್ ಡಾ. ಅಖಿಲ್ ಪಿ., ಡಾ. ಬಿಪಿನ್ ಸೇತುಮಾಧವನ್, ಡಾ. ಮ್ಯಾಥ್ಯೂ ಅಬ್ರಹಾಂ ರೋಗಿಗಳ ತಪಾಸಣೆ ನಡೆಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಇಗರ್ಜಿಯ ಧರ್ಮಗುರು ಫಾ. ಮೆಲ್ವಿನ್ ಫೆರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು. ಇಗರ್ಜಿಯ ಪಾಲನಾ ಸಮಿತಿ ಉಪಾಧ್ಯಕ್ಷೆ ಡೋರಿನ್ ಪಿರೇರಾ, ಸೈಂಟ್ ಲಾರೆನ್ಸ್ ಅಸೋಸಿಯೇಶನ್ ಅಧ್ಯಕ್ಷ ರೋಶನ್ ಡಿಸೋಜ ಉಪಸ್ಥಿತರಿದ್ದರು. ಲ್ಯಾನ್ಸಿ ಡಿಸೋಜ ಸ್ವಾಗತಿಸಿ, ಸಿಪ್ರಿಯನ್ ಡಿಸೋಜ ವಂದಿಸಿದರು. ಮೆಲ್ವಿನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
ನೂರ ಹದಿನೈದು ಮಂದಿ ಶಿಬಿರದ ಪ್ರಯೋಜನ ಪಡೆದರು.
ಉಚಿತ ವೈದ್ಯಕೀಯ ಶಿಬಿರ
0
ಸೆಪ್ಟೆಂಬರ್ 07, 2022