ಕಾಸರಗೋಡು :ರಾಜ್ಯಾದ್ಯಂತ ಓಣಂ ಹಬ್ಬದ ಸಂಭ್ರಮದ ನಡುವೆ ಕಾಸರಗೋಡು ನಗರಸಭೆ ಹಾಗೂ ಕೇರಳದ ಸಾಮಾಜಿಕ ಭದ್ರತಾ ಮಿಷನ್ ವಯೋಮಿತ್ರಂ ಯೋಜನೆ ವತಿಯಿಂದ ಜೀವನದಲ್ಲಿ ಒಂಟಿಯಾಗಿರುವ ಪೋಷಕರ ಸಂತಸ ಮತ್ತು ಮೋಜಿಗಾಗಿ ಒಂದು ದಿನವನ್ನು ಮೀಸಲಿರಿಸಿತು.
ನಗರಸಭೆ ಸಮ್ಮೇಳನ ಸಭಾಂಗಣದಲ್ಲಿ ವಿಭಿನ್ನ ಪರಿಕಲ್ಪನೆಯೊಂದಿಗೆ ಓಣಂ ಹಬ್ಬವನ್ನು ಆಚರಿಸಲಾಯಿತು. ಶಾಸಕ ಎನ್.ಎ.ನೆಲ್ಲಿಕುನ್ ಸಮಾರಂಭ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷ, ವಕೀಲ ವಿ.ಎಂಮುನೀರ್ ಅಧ್ಯಕ್ಷ ತೆ ವಹಿಸಿದ್ದರು. ವಿಜಿಲೆನ್ಸ್ ಇನ್ಸ್ ಪೆಕ್ಟರ್ ಹಾಗೂ ಚಿತ್ರನಟ ಸಿಬಿ ಥಾಮಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ನಗರಸಭೆ ಕಾರ್ಯದರ್ಶಿ ಎಸ್.ಬಿಜು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದರು. ನಂತರ ಸಾಂಸ್ಕøತಿಕ ಕಾರ್ಯಕರ್ತ ಬಾಲಚಂದ್ರನ್ ಕೋಟೋಡಿ ಸ್ನೇಹ ಸಲ್ಲಾಪ ಕಲಾ ಕಾರ್ಯಕ್ರಮ ನಡೆಸಿಕೊಟ್ಟರು. ನಗರಸಭಾ ಉಪಾಧ್ಯಕ್ಷೆ ಶಂಸಿದಾ ಫಿರೋಜ್, ಸ್ಥಾಯಿ ಸಮಿತಿ ಅಧ್ಯಕ್ಷೆ ಸಿಯಾನಾ ಹನೀಫ್, ಕೆ.ರಜನಿ, ಖಾಲಿದ್ ಪಚ್ಚಕ್ಕಾಡ್, ನಗರಸಭಾ ಸದಸ್ಯರಾದ ಸವಿತಾ, ಲಲಿತಾ, ರಜಿತಾ, ಕೇರಳ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ವಿ.ಎಂ.ಪ್ರಭಾಕರನ್, ಅಶ್ವಂತ್, ಕೇರಳ ಸಾಮಾಜಿಕ ಭದ್ರತಾ ಸಂಯೋಜಕ ಜಿಶೋ ಜೇಮ್ಸ್ ಉಪಸ್ಥಿತರಿದ್ದರು.
'ಪೋಷಕರ ಸಂಭ್ರಮಕ್ಕಾಗಿ ಒಂದು ದಿನ': ನಗರಸಭೆಯಲ್ಲಿ ಓಣಂ ವಿಶಿಷ್ಟ ಅಚರಣೆ
0
ಸೆಪ್ಟೆಂಬರ್ 08, 2022