ನವದೆಹಲಿ: ಚಂಡೀಗಢ ಯೂನಿವರ್ಸಿಟಿಯ ಹಾಸ್ಟೆಲ್ ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೋ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರುಣಾಚಲ ಪ್ರದೇಶದಲ್ಲಿ ಯೋಧನೊಬ್ಬನನ್ನು ಬಂಧಿಸಲಾಗಿದೆ.
ಬಂಧಿತ ಯೋಧನನ್ನು ಸಂಜೀವ್ ಸಿಂಗ್ ಎಂದು ಗುರುತಿಸಲಾಗಿದೆ.
ರಹಸ್ಯವಾಗಿ ಹಾಸ್ಟೆಲ್ ವಿದ್ಯಾರ್ಥಿನಿಯರ ಸ್ನಾನದ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಆರೋಪದಲ್ಲಿ ಈಗಾಗಲೇ ಬಂಧನವಾಗಿರುವ ಆರೋಪಿ ವಿದ್ಯಾರ್ಥಿನಿಯ ಲವರ್ ಎಂದು ತಿಳಿದುಬಂದಿದೆ. ಆರೋಪಿ ವಿದ್ಯಾರ್ಥಿನಿ ಜೊತೆ ತನಗಿರುವ ಸಂಬಂಧ ಏನು ಎಂಬುದನ್ನು ಆರೋಪಿ ಸಿಂಗ್ ಮೊಹಾಲಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.
ಯೋಧ ಸಿಂಗ್ ಮತ್ತು ಆರೋಪಿ ವಿದ್ಯಾರ್ಥಿನಿ ಇಬ್ಬರು ಸಾಮಾಜಿಕ ಜಾಲತಾಣ ಮೂಲಕ ಮೊದಲು ಪರಿಚಿತರಾದರು. ಬಳಿಕ ಇಬ್ಬರು ತಂತಮ್ಮ ಮೊಬೈಲ್ ನಂಬರ್ಗಳನ್ನು ವಿನಿಮಯ ಮಾಡಿಕೊಂಡರು. ಅಶ್ಲೀಲ ವಿಡಿಯೋಗಳನ್ನು ಸಿಂಗ್ ಜೊತೆಗೂ ಆರೋಪಿ ವಿದ್ಯಾರ್ಥಿನಿ ಹಂಚಿಕೊಂಡಿರುವ ಬಗ್ಗೆ ಯಾವುದೇ ಮಾಹಿತಿ ಇನ್ನು ತಿಳಿದುಬಂದಿಲ್ಲ. ಸದ್ಯ ಪೊಲೀಸರು ಸಿಂಗ್ ಬಳಿಯಿದ್ದ ಎರಡು ಮೊಬೈಲ್ಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.
ಸಂಜೀವ್ ಸಿಂಗ್ ಬಲೆಗೆ ಬಿದ್ದಿದ್ಹೇಗೆ?
ಎಂಬಿಎ ವಿದ್ಯಾರ್ಥಿನಿಯಾಗಿರುವ ಆರೋಪಿಯನ್ನು ಹಾಸ್ಟೆಲ್ ಮ್ಯಾನೇಜರ್ ವಿಚಾರಣೆ
ನಡೆಸಿದಾಗ ಆಕೆಗೆ ಯಾರೋ ನಿರಂತರವಾಗಿ ಸಂದೇಶ ಕಳುಹಿಸುತ್ತಿರುವುದು ಪತ್ತೆಯಾಯಿತು.
ನಂತರ, ವಾಟ್ಸ್ಆಯಪ್ ಚಾಟ್‌ನಲ್ಲಿ ಅವಳು ಸಂಜೀವ್ ಸಿಂಗ್ ಎಂಬುವನೊಂದಿಗೆ ಚಾಟ್
ಮಾಡುತ್ತಿದ್ದಳು ಎಂದು ತಿಳಿಯಿತು. ಸಿಂಗ್, ವಿಡಿಯೋಗಳು ಮತ್ತು ಫೋಟೋಗಳನ್ನು
ಕಳುಹಿಸುವಂತೆ ಕೇಳುತ್ತಿದ್ದರು. ವಿಡಿಯೋಗಳನ್ನು ಚಿತ್ರೀಕರಿಸಲು ಆರೋಪಿ
ಒತ್ತಡದಲ್ಲಿದ್ದಳು ಎಂಬುದು ಚಾಟ್‌ನ ಪ್ರತಿಲೇಖನವು ಬಹಿರಂಗಪಡಿಸಿದೆ. ಫೋಟೋ ಮತ್ತು
ವಿಡಿಯೋಗಳನ್ನು ಸೆರೆಹಿಡಿದಾಗಿನಿಂದ ಅವುಗಳನ್ನು ಕೇಳುವ ಮೂಲಕ ಸಂಜೀವ್ ಸಿಂಗ್
ತನ್ನನ್ನು ಮುಜುಗರದ ಪರಿಸ್ಥಿತಿಗೆ ತಂದಿದ್ದಾನೆ ಎಂದು ಆರೋಪಿ ವಿದ್ಯಾರ್ಥಿನಿ ಪೊಲೀಸರು
ಮುಂದೆ ಬಾಯ್ಬಿಟ್ಟಿದ್ದಾಳೆ.
ಆರೋಪಿ ವಿದ್ಯಾರ್ಥಿನಿ ತನ್ನ ಫೋನ್ ಸಂಪರ್ಕದಲ್ಲಿ ಸಂಜೀವ್ ಸಿಂಗ್ ಮೊಬೈಲ್ ಸಂಖ್ಯೆಯನ್ನು ಸೇವ್ ಮಾಡಲು, ಸಿಂಗ್ ಫೋಟೋ ಬದಲಾಗಿ ರಂಕಜ್ ವರ್ಮಾ ಎಂಬಾತನ ಫೋಟೋ ಬಳಸಿದ್ದಳು.
ಅಂದಹಾಗೆ ರಂಕಜ್ ವರ್ಮ, ಈ ಪ್ರಕರಣದ ಮತ್ತೊಬ್ಬ ಆರೋಪಿ. ಈತ ತಾನು ನಿರಪರಾಧಿ ಮತ್ತು ಆರೋಪಿ ವಿದ್ಯಾರ್ಥಿನಿ ಮತ್ತು ಶಿಮ್ಲಾದ ಆಕೆಯ ಗೆಳೆಯ ಸನ್ನಿ ಮೆಹ್ತಾ ಅವರಿಗೂ ನನಗೂ ಯಾವುದೇ ಪರಿಚಯವಿಲ್ಲ ಎಂದು ಹೇಳಿಕೊಂಡಿದ್ದಾರೆ ಮತ್ತು ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ವಾಟ್ಸ್ಆಯಪ್ ಡಿಪಿಯಿಂದಾಗಿ ಪೊಲೀಸರು ನನ್ನನ್ನು ಹಿಡಿದಿದ್ದು, ಈ ಪ್ರಕರಣದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ರಂಕಜ್ ಪೊಲೀಸರಿಗೆ ತಿಳಿಸಿದ್ದಾರೆ ಎಂದು ಅವರ ಸಹೋದರ ಪಂಕಜ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಆರೋಪಿ ವಿದ್ಯಾರ್ಥಿನಿ, ಆಕೆಯ ಪ್ರಿಯಕರ ಹಾಗೂ ಆತನ ಸ್ನೇಹಿತ ರಂಕಜ್ನ ಪೊಲೀಸ್ ರಿಮ್ಯಾಂಡ್ ಮುಗಿಯಲಿದೆ. ಮೊಬೈಲ್ ಫೋನ್‌ಗಳು ಮತ್ತು ಆರೋಪಿ ವಿದ್ಯಾರ್ಥಿನಿಯ ಲ್ಯಾಪ್‌ಟಾಪ್‌ನ ಫೊರೆನ್ಸಿಕ್ ವರದಿಗಾಗಿ ಪೊಲೀಸರು ಕುತೂಹಲದಿಂದ ಕಾಯುತ್ತಿದ್ದಾರೆ. ಇಡೀ ಪ್ರಕರಣಕ್ಕೆ ಫೊರೆನ್ಸಿಕ್ ವರದಿ ಪ್ರಮುಖ ತಿರುವನ್ನು ನೀಡಲಿದೆ. ವಿದ್ಯಾರ್ಥಿನಿ ವಿಡಿಯೋಗಳನ್ನು ಚಿತ್ರೀಕರಣ ಮಾಡಿದ್ದಾಳೋ? ಇಲ್ಲವೋ? ಎಂಬುದು ಬಯಲಾಗಲಿದೆ.
ಪ್ರಕರಣದ ಹಿನ್ನೋಟ
ಅಶ್ಲೀಲ ವಿಡಿಯೋ ಸೋರಿಕೆಯಾಗಿರುವ ಆರೋಪ ಕೇಳಿಬಂದ ಬೆನ್ನಲ್ಲೇ ಸಾಕಷ್ಟು ಸಂಖ್ಯೆಯಲ್ಲಿ
ವಿದ್ಯಾರ್ಥಿಗಳು ಮೊಹಾಲಿಯಲ್ಲಿರುವ ಖಾಸಗಿ ವಿವಿ ಕ್ಯಾಂಪಸ್ಗೆ ಸೆ.17ರ ರಾತ್ರಿ
ಜಮಾಯಿಸಿ, ಘಟನೆಯ ವಿರುದ್ಧ ಪ್ರತಿಭಟನೆಯನ್ನು ನಡೆಸಿದರು. ವಿದ್ಯಾರ್ಥಿನಿಯರು
ಹಾಸ್ಟೆಲ್ನಲ್ಲಿ ಸ್ನಾನ ಮಾಡುವಾಗ ಆರೋಪಿ ವಿದ್ಯಾರ್ಥಿನಿ ರಹಸ್ಯವಾಗಿ ಚಿತ್ರೀಕರಣ
ಮಾಡಿದ್ದಾಳೆ ಎಂದು ಆರೋಪಿಸಿ, ಆಕ್ರೋಶ ಹೊರಹಾಕಿದರು. ಪ್ರತಿಭಟನೆಯ ಕಾವು
ಜೋರಾಗುತ್ತಿದ್ದಂತೆ ಎಫ್ಐಆರ್ ದಾಖಲಿಸಿದ ಪೊಲೀಸರು ಆರೋಪಿ ವಿದ್ಯಾರ್ಥಿನಿಯನ್ನು
ಬಂಧಿಸಿದರು. ಇದಾದ ಬೆನ್ನಲ್ಲೇ ಉಳಿದ ಇನ್ನಿಬ್ಬರು ಆರೋಪಿಗಳನ್ನು ಸಹ ಬಂಧಿಸಲಾಯಿತು.
ಮೂವರು ಆರೋಪಿಗಳ ಫೋನ್‌ಗಳನ್ನೂ ಪೊಲೀಸರು ವಶಪಡಿಸಿಕೊಂಡು ವಿಧಿವಿಜ್ಞಾನ ಪರೀಕ್ಷೆಗೆ
ಕಳುಹಿಸಿದರು.
ವಿದ್ಯಾರ್ಥಿನಿಯು ಹಾಸ್ಟೆಲ್ನಲ್ಲಿ ತನ್ನೊಂದಿಗೆ ಇದ್ದ ಸಹಪಾಠಿಗಳ ಎಂಎಂಎಸ್ ಕ್ಲಿಪ್‌ಗಳನ್ನು ರಹಸ್ಯವಾಗಿ ಚಿತ್ರೀಕರಿಸಿದ್ದು, ಅವುಗಳನ್ನು ಹಿಮಾಚಲ ಪ್ರದೇಶದ ಶಿಮ್ಲಾದ ಬಾಯ್ಫ್ರೆಂಡ್ಗೆ ಕಳುಹಿಸುತ್ತಿದ್ದಳು ಎಂದು ತಿಳಿದುಬಂದಿದೆ. ಆರೋಪಿ ಕಳುಹಿಸುತ್ತಿದ್ದ ಎಂಎಂಎಸ್ ಕ್ಲಿಪ್‌ಗಳನ್ನು ಪಡೆದ ವ್ಯಕ್ತಿ ಅಂತರ್ಜಾಲದಲ್ಲಿ ಅಪ್‌ಲೋಡ್ ಮಾಡಿರುವುದಾಗಿ ತಿಳಿದುಬಂದಿದೆ. ಅವುಗಳನ್ನು ನೋಡಿ ವಿದ್ಯಾರ್ಥಿನಿಯರು ಶಾಕ್ ಆಗಿದ್ದು, ಪ್ರತಿಭಟನೆಯನ್ನು ನಡೆಸಿದ್ದಾರೆ. ಹಾಸ್ಟೆಲ್ ವಿದ್ಯಾರ್ಥಿನಿಯರ 50 ರಿಂದ 60 ವೀಡಿಯೋಗಳಿವೆ. ಆಕೆ ಅದನ್ನು ತನ್ನ ಸ್ನೇಹಿತರಿಗೆ ಕಳುಹಿಸಿದ್ದಾಳೆ. ನಾವು ಘಟನೆಯ ಬಗ್ಗೆ ಪ್ರಶ್ನಿಸಿದಾಗ, ವಿಡಿಯೋ ಮಾಡಿರುವುದಾಗಿ ಒಪ್ಪಿಕೊಂಡಳು ಮತ್ತು ವಿಡಿಯೋಗಳನ್ನು ಡಿಲೀಟ್ ಮಾಡಿದಳು ಎಂದು ವಿದ್ಯಾರ್ಥಿನಿಯೊಬ್ಬಳು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾಳೆ.
ರಹಸ್ಯವಾಗಿ ವಿಡಿಯೋ ಚಿತ್ರೀಕರಣ ನಡೆದಿರುವುದು ಸತ್ಯ. ವಿವಿಗೆ ಕೆಟ್ಟ ಹೆಸರು ಬರುತ್ತದೆ ಅಂತಾ ಕಾಲೇಜು ಆಡಳಿತವು ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂದು ಹಾಸ್ಟೆಲ್ ವಿದ್ಯಾರ್ಥಿನಿಯರು ಮಾಧ್ಯಮದ ಮುಂದೆ ಗಂಭೀರ ಆರೋಪ ಮಾಡಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ನಿರ್ದೇಶನದ ಮೇರೆಗೆ, ಪ್ರಕರಣದ ತನಿಖೆಗಾಗಿ ಮಹಿಳಾ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ಮೂವರು ಸದಸ್ಯರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ. ವಿಶ್ವವಿದ್ಯಾನಿಲಯವು ಸಹ ಒಂಬತ್ತು ಸದಸ್ಯರ ಸಮಿತಿಯನ್ನು ಸಹ ರಚಿಸಿದೆ. ಸದ್ಯ ತನಿಖೆ ನಡೆಯುತ್ತಿದೆ.