ತಿರುವನಂತಪುರ: ಪಾಪ್ಯುಲರ್ ಫ್ರಂಟ್ ಕೇಂದ್ರಗಳ ಮೇಲೆ ಎನ್ ಐಎ ರಾಷ್ಟ್ರವ್ಯಾಪಿ ದಾಳಿ ನಡೆಸಿರುವುದನ್ನು ವಿರೋಧಿಸಿ ಸಿಪಿಎಂ ಸಂಸದ ಎಎಂ ಆರಿಫ್ ಪ್ರತಿಭಟನೆ ನಡೆಸಿದ್ದಾರೆ.
ಪಾಪ್ಯುಲರ್ ಫ್ರಂಟ್ ವಿರುದ್ಧ ತನಿಖಾ ಸಂಸ್ಥೆಗಳು ನಡೆಸುತ್ತಿರುವ ದಾಳಿ ಏಕಪಕ್ಷೀಯವಾಗಿದ್ದು, ಕೇವಲ ಈ ಸಂಘಟನೆಯನ್ನು ಗುರಿಯಾಗಿಸುವುದು ಉತ್ತಮ ಕ್ರಮವಲ್ಲ ಎಂದು ಸಂಸದರು ಹೇಳಿದ್ದಾರೆ. ಪಾಪ್ಯುಲರ್ ಫ್ರಂಟ್ ಗೆ ಭಯೋತ್ಪಾದಕ ಸ್ವರೂಪವಿದೆ ಎಂಬ ಆರೋಪ ಮಾಡಲಾಗುತ್ತಿದೆ ಎಂಬುದು ಸಿಪಿಎಂ ಸಂಸದರ ವಾದ.
ಪಾಪ್ಯುಲರ್ ಫ್ರಂಟ್ ವಿರುದ್ಧದ ದಾಳಿ ಏಕಪಕ್ಷೀಯವಾಗಿದೆ. ಭಯೋತ್ಪಾದನಾ ಚಟುವಟಿಕೆಯ ಹಲವು ಘಟನೆಗಳಲ್ಲಿ ಭಾಗಿಯಾಗಿರುವ ವಿವಿಧ ಸಂಘಟನೆಗಳ ಪಾತ್ರವನ್ನು ಎತ್ತಿ ತೋರಿಸಲಾಗಿದೆ. ಆದರೆ ಇಲ್ಲಿ ರೈಡ್ ಮಾಡದೆ ಪಾಪ್ಯುಲರ್ ಫ್ರಂಟ್ ಅನ್ನು ಮಾತ್ರ ಟಾರ್ಗೆಟ್ ಮಾಡುವುದು ಸರಿಯಲ್ಲ ಎಂದು ಎಎಂ ಆರಿಫ್ ಹೇಳಿದ್ದಾರೆ.
ಕೇರಳ ಸೇರಿದಂತೆ 13 ರಾಜ್ಯಗಳಲ್ಲಿ ಪ್ರಾಪ್ಯುಲರ್ ಪ್ರಂಟ್ ಕೇಂದ್ರಗಳ ಮೇಲೆ ಎನ್‍ಐಎ ವ್ಯಾಪಕ ದಾಳಿ ನಡೆಸಿದೆ. ಭಯೋತ್ಪಾದಕರಿಗೆ ಲಭಿಸುವ ನಿಧಿ, ತರಬೇತಿ ಶಿಬಿರಗಳನ್ನು ಆಯೋಜನೆ ಮತ್ತು ನಿμÉೀಧಿತ ಸಂಘಟನೆಗಳಿಗೆ ಸೇರಲು ಜನರನ್ನು ನೇಮಿಸಿಕೊಳ್ಳುವ ಕೇಂದ್ರಗಳಲ್ಲಿ ಶೋಧ ನಡೆಸಲಾಗಿದೆ. ಕೇರಳದ ವಿವಿಧ ಕೇಂದ್ರಗಳು ಹಾಗೂ ಮುಖಂಡರ ಮನೆಗಳಲ್ಲಿ ತಪಾಸಣೆ ನಡೆಸಲಾಗಿದೆ. ರಾಜ್ಯದ 22 ನಾಯಕರನ್ನೂ ಬಂಧಿಸಲಾಗಿದೆ. ದೇಶಾದ್ಯಂತ 100 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.
ಪಾಪ್ಯುಲರ್ ಫ್ರಂಟ್ ವಿರುದ್ಧ ದಾಳಿ ಖಂಡಿಸಿದ ಸಿಪಿಎಂ ಸಂಸದ
0
ಸೆಪ್ಟೆಂಬರ್ 22, 2022