ತಿರುವನಂತಪುರ: ಕೊರೋನಾ ಕಾಲಘಟ್ಟದಲ್ಲಿ ದಾಖಲಾದ ಅಹಿಂಸಾತ್ಮಕ ಪ್ರಕರಣಗಳನ್ನು ಹಿಂಪಡೆಯಲು ಒಪ್ಪಿಗೆ ನೀಡಲಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ಉನ್ನತ ಮಟ್ಟದ ಸಭೆಯು ಈ ಬಗ್ಗೆ ನಿರ್ಧರಿಸಿದೆ.
ಕೊರೋನಾ ಸಮಯದಲ್ಲಿ ರಾಜ್ಯದಲ್ಲಿ ಸುಮಾರು 140,000 ಪ್ರಕರಣಗಳು ದಾಖಲಾಗಿದ್ದವು. ಸಾಮಾಜಿಕ ಅಂತರವನ್ನು ಪಾಲಿಸದಿರುವುದು, ಮಾಸ್ಕ್ ಧರಿಸದಿರುವುದು ಇತ್ಯಾದಿ ಪ್ರಕರಣಗಳನ್ನು ಹಿಂಪಡೆಯಲು ನಿರ್ಧರಿಸಲಾಗಿದೆ.
ಸಾರ್ವಜನಿಕ ವಿಧ್ವಂಸಕ ಮತ್ತು ಹಿಂಸಾಚಾರವಿಲ್ಲದೆ ಜನಪರ ಸ್ವರೂಪದ ಪ್ರತಿಭಟನೆಗಳಲ್ಲಿ ದಾಖಲಾದ ಪ್ರಕರಣಗಳನ್ನು ಸಹ ಹಿಂಪಡೆಯಲಾಗುತ್ತದೆ.
ಯಾವ ಪ್ರಕರಣಗಳನ್ನು ಹಿಂಪಡೆಯಬೇಕು ಎಂಬ ವರದಿಯನ್ನು ಸಲ್ಲಿಸಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೃಹ ಇಲಾಖೆ, ರಾಜ್ಯ ಪೋಲೀಸ್ ಮುಖ್ಯಸ್ಥ ಮತ್ತು ಕಾನೂನು ಇಲಾಖೆಯ ಕಾರ್ಯದರ್ಶಿಯನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗುವುದು. ಮುಖ್ಯ ಕಾರ್ಯದರ್ಶಿ ಡಾ. ವಿ.ಪಿ.ಜಾಯ್, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ವಿ ವೇಣು, ರಾಜ್ಯ ಪೆÇಲೀಸ್ ವರಿಷ್ಠ ಅನಿಲ್ ಕಾಂತ್, ಕಾನೂನು ಕಾರ್ಯದರ್ಶಿ ವಿ. ಹರಿ ನಾಯರ್ ಮತ್ತಿತರರು ಭಾಗವಹಿಸಿದ್ದರು.
ಕೊರೋನಾ ಸಂದರ್ಭದ ಅಹಿಂಸಾತ್ಮಕ ಪ್ರಕರಣಗಳನ್ನು ಹಿಂಪಡೆಯಲು ತೀರ್ಮಾನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ನಿರ್ಧಾರ
0
ಸೆಪ್ಟೆಂಬರ್ 29, 2022