ಕಾಸರಗೋಡು: ಓಣಂ ಹಬ್ಬದ ಹಿನ್ನೆಲೆಯಲ್ಲಿ ಸಾಲು ರಜೆ ಬರುತ್ತಿದ್ದು, ಈ ಸಂದರ್ಭ ಕಾಸರಗೋಡು ನಗರಸಭಾ ವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಕಾರ್ಯ ನಡೆದುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಕಾರ್ಯದರ್ಶಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅನಧಿಕೃತ ನಿರ್ಮಾಣ ಗಮನಕ್ಕೆ ಬಂದಲ್ಲಿ ಈ ಬಗ್ಗೆ ಮಾಹಿತಿ ನೀಡುವಂತೆಯೂ ಸಾರ್ವಜನಿಕರಿಗೆ ತಿಳಿಸಲಾಗಿದೆ. ಇದಕ್ಕಾಗಿ ವಿವಿಧ ದಿನಗಳಲ್ಲಿ ಪ್ರತ್ಯೇಕವಾಗಿ ಅಧಿಕಾರಿಗಳನ್ನೂ ನೇಮಿಸಲಾಗಿದೆ. ಸೆಪ್ಟೆಂಬರ್ 9ರಂದು ಪಿ.ಶ್ರೀಜಿತ್ (8547207601), 10ರಂದು ಸ್ವಪ್ನಾ ಶ್ರೀಧರನ್(8921126096), 11ರಂದು ಬಿ.ಶ್ರೀರಾಜ್ (8075459104), 18ರಂದು ಜೈನಿ(9605803860), ಸೆಪ್ಟೆಂಬರ್ 21ರಂದು ಮಹೇಶ್‍ಕುಮಾರ್ (9446016661) ಮತ್ತು ಸೆಪ್ಟೆಂಬರ್ 25ರಂದು ಸಿ. ಸುನಿತಾ (9746692641)ಅವರನ್ನು ನಿಯೋಜಿಸಲಾಗಿದ್ದು, ಇಂತಹ ಚಟುವಟಿಕೆಗಳು ಗಮನಕ್ಕೆ ಬಂದಲ್ಲಿ ಅವರ ಆಯಾ ಸಂಖ್ಯೆಗಳಿಗೆ ಕರೆ ಮಾಡುವ ಮೂಲಕ ತಿಳಿಸಬಹುದಾಗಿದೆ.
ನೀಲೇಶ್ವರದಲ್ಲಿ ವಿಶೇಷ ದಳ:
ಓಣಂ ರಜೆಯ ನಿಮಿತ್ತ ಸೆ.7ರಿಂದ 11ರವರೆಗೆ ನಿರಂತರ ರಜೆ ಇರುವ ಹಿನ್ನೆಲೆಯಲ್ಲಿ ನೀಲೇಶ್ವರ ನಗರಸಭೆ ವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವ ಬಗ್ಗೆ ವಿಶೇಷ ದಳ ರಚಿಸಲಾಗಿದೆ ಅನಧಿಕೃತ ಕಟ್ಟಡಗಳನ್ನು ಗಮನಿಸಿದ ಸಾರ್ವಜನಿಕರು 9037810715 ಗೆ ಮಾಹಿತಿ ನೀಡಬಹುದು ಎಂದು ನಗರಸಭೆ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಜಾ ದಿನಗಳಲ್ಲಿ ಅಕ್ರಮ ನಿರ್ಮಾಣ: ತಡೆಗೆ ವಿಶೇಷ ತಂಡ ಕಾರ್ಯಾಚರಣೆ
0
ಸೆಪ್ಟೆಂಬರ್ 08, 2022