ನವದೆಹಲಿ: ತೆಲುಗು ದಿನಪತ್ರಿಕೆ 'ಸಾಕ್ಷಿ'ಯ ಕೆ.ರಾಜಪ್ರಸಾದ್ ರೆಡ್ಡಿ ಅವರು ಇಂಡಿಯನ್ ನ್ಯೂಸ್‌ಪೇಪರ್ ಸೊಸೈಟಿಯ (ಐಎನ್‌ಎಸ್) 2022-23ನೇ ಸಾಲಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆದ ಸಂಸ್ಥೆಯ 83ನೇ ವಾರ್ಷಿಕ ಸಾಮಾನ್ಯಸಭೆಯಲ್ಲಿ ಈ ಆಯ್ಕೆ ನಡೆಯಿತು ಎಂದು ಐಎನ್‌ಎಸ್ ಪ್ರಕಟಣೆ ತಿಳಿಸಿದೆ.
ಹಿಂದಿ ದೈನಿಕ 'ಆಜ್ ಸಮಾಜ್'ದ ರಾಕೇಶ್ ಶರ್ಮಾ ಅವರು ಡೆಪ್ಯುಟಿ ಪ್ರೆಸಿಡೆಂಟ್, 'ಮಾತೃಭೂಮಿ ಆರೋಗ್ಯ ಮಾಸಿಕ'ದ ಎಂ.ವಿ.ಶ್ರೇಯಾಂಶ್ ಕುಮಾರ್ ಉಪಾಧ್ಯಕ್ಷರಾಗಿ ಹಾಗೂ ತನ್ಮಯ್ ಮಾಹೇಶ್ವರಿ (ಹಿಂದಿ ದೈನಿಕ ಅಮರ್ ಉಜಾಲ) ಅವರು ಖಜಾಂಚಿಯಾಗಿ ಆಯ್ಕೆಯಾದರು.
ದಿ ಪ್ರಿಂಟರ್ಸ್ ಮೈಸೂರು ಪ್ರೈವೇಟ್ ಲಿಮಿಟೆಡ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎನ್.ತಿಲಕ್ ಕುಮಾರ್ ಅವರು ಸೇರಿದಂತೆ 41 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.