ತಿರುವನಂತಪುರ: ನದಿ ನೀರು ಹಂಚಿಕೆ ಸಮಸ್ಯೆಗಳಿಗೆ ಜಂಟಿ ಪರಿಹಾರ ಹುಡುಕುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದಕ್ಷಿಣದ ರಾಜ್ಯಗಳನ್ನು ಒತ್ತಾಯಿಸಿದ್ದಾರೆ.
ಶನಿವಾರ
ನಡೆದ ದಕ್ಷಿಣ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು,
ಲೆಫ್ಟಿನೆಂಟ್ ಗವರ್ನರ್‌ಗಳು ಪಾಲ್ಗೊಂಡಿದ್ದ 30 ನೇ ದಕ್ಷಿಣ ವಲಯ ಕೌನ್ಸಿಲ್ ಸಭೆಯಲ್ಲಿ
ಅವರು ಮಾತನಾಡಿದರು.
'ಬಾಕಿ
ಇರುವ ಸಮಸ್ಯೆಗಳನ್ನು ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವಂತೆ ಅವರು
ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಪ್ರತಿನಿಧಿಗಳಿಗೆ ಸೂಚಿಸಿದರು' ಎಂದು ಪ್ರಕಟಣೆ
ತಿಳಿಸಿದೆ.
ನದಿಗಳ ನೀರಿನ ಹಂಚಿಕೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಜಂಟಿ ಪರಿಹಾರ
ಕಂಡುಕೊಳ್ಳುವಂತೆಯೂ ಅವರು ದಕ್ಷಿಣ ವಲಯ ಎಲ್ಲಾ ರಾಜ್ಯಗಳಿಗೆ ಸಲಹೆ ನೀಡಿದರು ಎಂದೂ
ಪ್ರಕಟಣೆ ತಿಳಿಸಿದೆ.