ಕಾಸರಗೋಡು: ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ವತಿಯಿಂದ ನಡೆಯುತ್ತಿರುವ ಓಣಂ ಆಚರಣೆ ಜನಾಕರ್ಷಣೆಗೆ ಕಾರಣವಾಗುತ್ತಿದೆ. ದೇಶದ ನಾನಾ ರಾಜ್ಯಗಳ ಕಲಾಪ್ರಕಾರಗಳು ಕಾಸರಗೋಡು ನಗರಸಭಾ ಸ್ಟೇಡಿಯಂ ಸ್ಕ್ವೇರ್‍ನಲಕ್ಲಿ ಪ್ರದರ್ಶನಗೊಳ್ಳುತ್ತಿದ್ದು, ಪ್ರತಿ ದಿನ ಕಾರ್ಯಕ್ರಮ ವೀಕ್ಷಣೆಗೆ ಜನದಟ್ಟಣೆ ಹೆಚ್ಚುತ್ತಿದೆ. ವಿದ್ಯಾನಗರ ಸ್ಟೇಡಿಯಂ ಕಾರ್ನರ್ ನಲ್ಲಿ ಆರಂಭವಾದ ಸಂಭ್ರಮಾಚರಣೆಯಲ್ಲಿ ತಿರುವಾತಿರ, ಒಪ್ಪನ ಪ್ರದರ್ಶನಗೊಂಡಿತು. ಹಾಗೂ ಎಲ್ಲರ ಮನ ಕದ್ದ ಭಾರತ ಭವನದ ಕಲಾವಿದರಿಂದ ನಡೆಯುತ್ತಿರುವ ಪ್ರದರ್ಶನ ಜನ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಉತ್ತರ ಮತ್ತು ದ. ಭಾರತೀಯ ಸಂಸ್ಕøತಿಯ ಪ್ರತೀಕವಾಗಿ ವಿವಿಧ ರಾಜ್ಯಗಳ ಕಲಾವಿದರಿಂದ ನಡೆಯುತ್ತಿರುವ ಕಲಾಪ್ರದರ್ಶನಗಳು ಜನಮನ್ನಣೆಗೆ ಕಾರಣವಾಗುತ್ತಿದೆ. ಶನಿವಾರದಂದು ಉತ್ಸವಗಳು ಮುಕ್ತಾಯಗೊಳ್ಳಲಿವೆ.
ಡಿಟಿಪಿಸಿಯಿಂದ ಓಣಂ ಉತ್ಸವ: ಜನಾಕರ್ಷಣೆಗೆ ಕಾರಣವಗುತ್ತಿರುವ ಕಲಾ ಪ್ರದರ್ಶನಗಳು
0
ಸೆಪ್ಟೆಂಬರ್ 08, 2022