HEALTH TIPS

'ಕರ್ತವ್ಯಪಥ್‌'ಗೆ ಪ್ರಧಾನಿ ಮೋದಿ ಚಾಲನೆ

 

            ನವದೆಹಲಿ: ದೆಹಲಿಯ ಐತಿಹಾಸಿಕ 'ರಾಜ್‌ಪಥ್‌'ಗೆ 'ಕರ್ತವ್ಯಪಥ್‌' ಎಂದು ಮರುನಾಮಕರಣ ಮಾಡಲಾಗಿದ್ದು, ಈ ರಸ್ತೆಯನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಉದ್ಘಾಟಿಸಲಿದ್ದಾರೆ. ಇದೇ ವೇಳೆ ಅವರು ಇಂಡಿಯಾ ಗೇಟ್‌ ಬಳಿ ನಿರ್ಮಿಸಲಾಗಿರುವ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಪ್ರತಿಮೆಯನ್ನೂ ಅನಾವರಣಗೊಳಿಸಲಿದ್ದಾರೆ.

              ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗಿನ ಮಾರ್ಗಕ್ಕೆ ಈ ಮೊದಲು 'ರಾಜ್‌ಪಥ್‌' ಎಂದು ಹೆಸರಿಡಲಾಗಿತ್ತು. ಇದಕ್ಕೆ 'ಕರ್ತವ್ಯಪಥ್‌' ಎಂದು ಮರುನಾಮಕರಣ ಮಾಡುವ ಕುರಿತು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಪ್ರಸ್ತಾವನೆ ಸಲ್ಲಿಸಿತ್ತು. ಕೇಂದ್ರದ ವಿದೇಶಾಂಗ ವ್ಯವಹಾರ ಮತ್ತು ಸಂಸ್ಕೃತಿ ಖಾತೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ನ್ಯೂ ಡೆಲ್ಲಿ ಮುನ್ಸಿಪಲ್‌ ಕೌನ್ಸಿಲ್‌ನ (ಎನ್‌ಡಿಎಂಸಿ) ವಿಶೇಷ ಸಭೆಯಲ್ಲಿ ಈ ಪ್ರಸ್ತಾವನೆ ಅಂಗೀಕರಿಸಲಾಯಿತು.

             'ಕರ್ತವ್ಯಪಥ್‌' ರಸ್ತೆಯಲ್ಲಿನ ಪಾದಚಾರಿ ಮಾರ್ಗಗಳಿಗೆ ಕೆಂಪು ವರ್ಣದ ಗ್ರಾನೈಟ್‌ ಅಳವಡಿಸಲಾಗಿದ್ದು, ಕಾಲುವೆಗಳನ್ನು ನವೀಕರಿಸಲಾಗಿದೆ. ಈ ಹಾದಿಯಲ್ಲಿ ರಾಜ್ಯವಾರು ಆಹಾರದ ಮಳಿಗೆಗಳು ಹಾಗೂ ವಾಹನ ನಿಲುಗಡೆ ವ್ಯವ‌ಸ್ಥೆ ಇದೆ. ಗಡಿಯಾರದ ಮಾದರಿಯಲ್ಲಿ ಭದ್ರತಾ ವ್ಯವಸ್ಥೆಯನ್ನೂ ಮಾಡಲಾಗಿದೆ. ರಸ್ತೆ ಸುತ್ತಲಿನ ಪ್ರದೇಶವು ಹಸಿರಿನಿಂದ ಕೂಡಿದೆ.

                ಸಿಪಿಡಬ್ಲ್ಯುಡಿ ಈ ಮಾರ್ಗದಲ್ಲಿ ಐದು ಮಾರಾಟ ವಲಯಗಳನ್ನು ಸ್ಥಾಪಿಸಿದ್ದು, ಇಲ್ಲಿ ಮಳಿಗೆಗಳನ್ನು ಇಡಲು ತಲಾ 40 ಮಂದಿಗೆ ಅವಕಾಶ ನೀಡಲಾಗುತ್ತದೆ. ಇಂಡಿಯಾ ಗೇಟ್‌ ಬಳಿಯ ಎರಡು ಬ್ಲಾಕ್‌ಗಳಲ್ಲಿ ತಲಾ ಎಂಟು ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ. ಸೆಂಟ್ರಲ್‌ ವಿಸ್ತಾ ಅಭಿವೃದ್ಧಿ ಯೋಜನೆಯಡಿ ಇಡೀ ಮಾರ್ಗಕ್ಕೆ ಹೊಸ ರೂಪ ನೀಡಲಾಗಿದೆ.

                  'ರಾಜ್‌ಪಥ್‌ ಶಕ್ತಿಯ ಸಂಕೇತವಾಗಿತ್ತು. ಆದರೆ ಕರ್ತವ್ಯಪಥ್‌ ಸಾರ್ವಜನಿಕರ ಒಡೆತನ ಮತ್ತು ಸಬಲೀಕರಣಕ್ಕೆ ಉದಾಹರಣೆಯಾಗಿದೆ' ಎಂದು ಕೇಂದ್ರ ಸರ್ಕಾರ ಹೇಳಿದೆ.

              '


ಕರ್ತವ್ಯಪಥ್‌ ಪ್ರದೇಶದಲ್ಲಿ ಒಟ್ಟು 1,125 ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಇಂಡಿಯಾ ಗೇಟ್‌ ಬಳಿ 35 ಬಸ್‌ಗಳನ್ನು ನಿಲುಗಡೆ ಮಾಡಬಹುದಾಗಿದೆ. ಹೊಸದಾಗಿ 900ಕ್ಕೂ ಅಧಿಕ ವಿದ್ಯುತ್‌ ಕಂಬಗಳನ್ನು ಅಳವಡಿಸಲಾಗಿದೆ' ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries