ಕಾಸರಗೋಡು: ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಮಾಹಿತಿ ಕಛೇರಿ, "ಮಾದಕ ದ್ರವ್ಯಕ್ಕೆದುರು ಕೈಜೋಡಿಸೋಣ '' ಎಂಬ ಸಂದೇಶದೊಂದಿಗೆ ಅಕ್ಟೋಬರ್ 3 ರಂದು ವಿದ್ಯಾರ್ಥಿಗಳಿಗೆ ಸ್ಪರ್ಧೆಗಳನ್ನು ಹಮ್ಮಿಕೊಂಡಿದೆ. ಯು.ಪಿ. ವಿದ್ಯಾರ್ಥಿಗಳಿಗೆ ಜಲ ವರ್ಣ (ವಾಟರ್ ಕಲರ್) ಸ್ಪರ್ಧೆಗಳು, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪೆÇೀಸ್ಟರ್ ರಚನೆ ಮತ್ತು ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳಿಗೆ ವ್ಯಂಗ್ಯ ಚಿತ್ರ (ಕಾರ್ಟೂನ್) ರಚನಾ ಸ್ಪರ್ಧೆಗಳು ನಡೆಯಲಿದೆ. ಭಾಗವಹಿಸಲು ಇಚ್ಛಿಸುವ ಮಕ್ಕಳು ಅಕ್ಟೋಬರ್ 3ರಂದು ಬೆಳಗ್ಗೆ 9.30ಕ್ಕೆ ವಿದ್ಯಾನಗರ ಜಿಲ್ಲಾ ಕಛೇರಿ ಬಳಿ ಇರುವ ಜಿಲ್ಲಾ ಮಾಹಿತಿ ಕಚೇರಿಗೆ ತಲುಪಬೇಕು. ವಿಜೇತರಿಗೆ ಪ್ರಮಾಣಪತ್ರ ಮತ್ತು ಸ್ಮರಣಿಕೆ ನೀಡಲಾಗುವುದು. ಆಸಕ್ತರು ಸೆಪ್ಟೆಂಬರ್ 30 ರೊಳಗೆ dioksgd@gmail.comಎಂಬ ಇ-ಮೇಲ್ ಮೂಲಕ ನೋಂದಾಯಿಸಿಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.
"ಮಾದಕ ದ್ರವ್ಯಕ್ಕೆದುರು ಕೈಜೋಡಿಸೋಣ ''-ಜಿಲ್ಲಾ ಮಾಹಿತಿ ಕಛೇರಿ ವಿದ್ಯಾರ್ಥಿಗಳಿಗೆ ಸ್ಪರ್ಧೆ
0
ಸೆಪ್ಟೆಂಬರ್ 24, 2022