ಕುಂಬಳೆ: ಅಂಗಡಿಮೊಗರು ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಳ್ಳುವ ಬಡಗು ಗೋಪುರದ ಶಿಲಾನ್ಯಾಸ ಜರಗಿತು. ಕ್ಷೇತ್ರ ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳು ಶಿಲಾನ್ಯಾಸ ನೆರವೇರಿಸಿ ಅನುಗ್ರಹ ಭಾಷಣ ಮಾಡಿದರು. ಆಡಳಿತ ಮೊಕ್ತೇಸರÀ ಐ.ಸುಬ್ಬಯ್ಯ ರೈ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಧಾರ್ಮಿಕ ಮುಂದಾಳು ಬಿ.ವಸಂತ ಪೈ ಬದಿಯಡ್ಕ, ಎಂ.ಸಿ.ಎ¥sóï.ಮಂಗಳೂರು ಚೀ¥sóï ಜನರಲ್ ಮ್ಯಾನೇಜರ್ ಜಯಶಂಕರ ರೈ ಪುತ್ತಿಗೆ, ಪುತ್ತಿಗೆ ಗ್ರಾಮಪಂಚಾಯಿತಿ ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ ಅತಿಥಿಗಳಾಗಿ ಭಾಗವಹಿಸಿದರು. ಎಂ ಶಂಕರ ರೈ ಮಾಸ್ತರ್, ಶ್ಯಾಮರಾಯ ಹೊಳ್ಳ, ಅಮರ್‍ನಾಥ ರೈ, ಡಿ.ಎನ್ ರಾಧಾಕೃಷ್ಣ, ಎಂ.ಕೆ. ಆನಂದ ಮೊದಲಾದವರು ಉಪಸ್ಥಿತರಿದ್ಧರು. ಸೇವಾಸಮಿತಿ ಅಧ್ಯಕ್ಷ ಡಿ ದಾಮೋದರನ್ ಸ್ವಾಗತಿಸಿ, ಕಾರ್ಯದರ್ಶಿ ಕೇಶವ ಡಿ ವಂದಿಸಿದರು. ಡಿ ರಾಜೇಂದ್ರ ರೈ ಕಾರ್ಯಕ್ರಮ ನಿರೂಪಿಸಿದರು.