ಕಾಸರಗೋಡು:ಸಂಜ್ಞಾ ಭಾಷಾ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಸಾಮಾಜಿಕ ನ್ಯಾಯ ಇಲಾಖೆ ಹಾಗೂ ಬೆಟರ್ ಲೈಫ್ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಸಂಜ್ಞಾ ಭಾಷೆ ಕುರಿತು ಕಿರು ತರಬೇತಿ ಕಾರ್ಯಕ್ರಮ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿತು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಸಮಾರಂಭ ಉದ್ಘಾಟಿಸಿದರು.
ತಲಶ್ಶೇರಿ ಆದಮ್ ಅಕಾಡೆಮಿಯ ನಿರ್ದೇಶಕ ಫಾದರ್ ಪ್ರಿಯೇಶ್ ತರಗತಿ ನಡೆಸಿದರು. ಈ ಸಂದರ್ಭ ವರ್ಣಮಾಲೆ, ಸಂಬಂಧಗಳು, ವಾರಗಳು ಮತ್ತು ತಿಂಗಳುಗಳಂತಹ ಭಾರತೀಯ ಸಂಕೇತ ಭಾಷೆಯ ವಿವಿಧ ಬಳಕೆಗಳನ್ನು ವಿವರಿಸಲಾಗಿದೆ. ವಿವಿಧ ಉದ್ದೇಶಗಳಿಗಾಗಿ ಕಚೇರಿಗಳಿಗೆ ಬರುವ ವಿಕಲಚೇತನರಿಗೆ ನೆರವಾಗುವ ರೀತಿಯಲ್ಲಿ ತರಬೇತಿ ನಡೆಸಲಾಯಿತು. ತರಬೇತಿ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಜಿಲ್ಲಾ ಸಾಮಾಜಿಕ ನ್ಯಾಯ ಇಲಾಖೆ ಅಧಿಕಾರಿ ಶೀಬಾ ಮುಮ್ತಾಜ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪೆÇ್ರಬೇಷನ್ ಅಧಿಕಾರಿ ಪಿ.ಬಿಜು, ಸಾಮಾಜಿಕ ನ್ಯಾಯ ಇಲಾಖೆ ಹಿರಿಯ ಅಧೀಕ್ಷಕ ಎಂ.ಅಬ್ದುಲ್ಲಾ, ಬೆಟರ್ ಲೈಫ್ ಫೌಂಡೇಶನ್ ಪ್ರತಿನಿಧಿ ಮೋಹನ್ ದಾಸ್ ವಯಲಂಕುಜಿ ಉಪಸ್ಥಿತರಿದ್ದರು.