HEALTH TIPS

ಲಡಾಖ್ ಬಳಿ ಚೀನಾ ಗಡಿಯಿಂದ ಸೇನಾ ವಾಪಸಾತಿ- ಭಾರತಕ್ಕೆ ನಷ್ಟ ಆಯಿತೇ?

 

           ನವದೆಹಲಿ: ಭಾರತ- ಚೀನಾ ಗಡಿಯಲ್ಲಿನ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) 15ನೇ ಗಸ್ತು (ಪಿಪಿ -15) ತಾಣದಿಂದ ಉಭಯ ದೇಶಗಳು ಸೇನೆಯನ್ನೇನೋ ವಾಪಸ್‌ ಕರೆಸಿಕೊಂಡಿವೆ. ಆದರೆ ಇದರಿಂದ ಭಾರತವು ತನ್ನ ಪ್ರದೇಶದಲ್ಲಿ ನಿರ್ಮಿಸಿಕೊಳ್ಳಬಹುದಾದ 'ಬಫರ್‌ ವಲಯ'ವನ್ನು ಕೊನೆಗಾಣಿಸಿದಂತಾಗಿದೆ ಎಂದು 'ಲಡಾಕ್‌ ಅಟಾನಮಸ್‌ ಹಿಲ್‌ ಡೆವೆಲಪ್‌ಮೆಂಟ್‌ ಕೌನ್ಸಿಲ್‌' (ಎಲ್‌ಎಎಚ್‌ಡಿಸಿ) ಆರೋಪಿಸಿದೆ.

             ಭಾರತವು ಪಿಪಿ-15ರ ಜತೆಗೆ ಕರಂ ಸಿಂಗ್‌ ಬೆಟ್ಟದ ಪಿಪಿ-16 ಗಸ್ತು ಪ್ರದೇಶದಿಂದಲೂ ಸೇನೆಯನ್ನು ಹಿಂಪಡೆಯಲು ಒಪ್ಪಿಗೆ ನೀಡಿದೆ ಎಂದು ಎಲ್‌ಎಎಚ್‌ಡಿಸಿ ಕೌನ್ಸಿಲರ್‌ ಕೊಂಚೋಕ್‌ ಸ್ಟಾಂಜಿನ್‌ ಪ್ರತಿಕ್ರಿಯಿಸಿದ್ದಾರೆ.

                ದಶಕಗಳಿಂದ ಸೇನೆಯನ್ನು ನಿಯೋಜಿಸಿರುವ ಭಾರತ ಪಿಪಿ-16ರಲ್ಲಿ ತನ್ನ ಸೇನಾ ಪಡೆಯನ್ನು ವಾಪಸ್‌ ತೆಗೆದುಕೊಂಡರೆ, ಇಲ್ಲಿನ ಕ್ರುಗಾಂಗ್‌ ಕಣಿವೆಯು ವಿವಾದಿತ ಪ್ರದೇಶವಾಗಿ ಪರಿವರ್ತಿತವಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಜನರು ದನ, ಕರುಗಳನ್ನು ಮೇಯಿಸಲು ಈ ಪ್ರದೇಶವನ್ನು ಬಳಸುತ್ತಿರುವುದರಿಂದ ಇದು ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಹೇಳಿದ್ದಾರೆ.

                ಭಾರತವು ತನ್ನ ಈ ಭೂಪ್ರದೇಶವನ್ನು ಕಳೆದುಕೊಳ್ಳುವುದು ಈ ಕ್ಷೇತ್ರದ ಜನಗೆ ಸ್ವಲ್ಪವೂ ಇಷ್ಟವಿಲ್ಲ ಎಂದು ಅವರು ತಿಳಿಸಿದ್ದಾರೆ.

                ಈ ಕುರಿತು ಟ್ವೀಟ್‌ ಮಾಡಿರುವ ಬಿಜೆಪಿ ಮುಖಂಡ ಸುಬ್ರಮಣಿಯನ್‌ ಸ್ವಾಮಿ, 'ಚೀನಾವು ಭಾರತದ ನೆಲದಿಂದ ಹಿಂದೆ ಸರಿದಿದೆ ಮತ್ತು ಭಾರತವು ತನ್ನದೇ ನೆಲದಿಂದ ಹಿಂದೆ ಸರಿದಿದೆ' ಎಂದು ಟೀಕಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries