ಬದಿಯಡ್ಕ: ಖ್ಯಾತ ವೈದ್ಯ, ಸಾಹಿತಿ, ತಾಳಮದ್ದಳೆ ಅರ್ಥಧಾರಿ ಡಾ.ರಮಾನಂದ ಬನಾರಿ ಅವರ ರೋಗ ನಿದಾನ ಸರಳ ವಿಧಾನ ವಿಶಿಷ್ಟ ಕೃತಿ ಬಿಡುಗಡೆ ಇಂದು(ಗುರುವಾರ) ಶ್ರೀಮದ್ ಎಡನೀರು ಮಠದಲ್ಲಿ ಬೆಳಿಗ್ಗೆ 9.45 ರಿಂದ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಸಮಾರಂಭದಲ್ಲಿ ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಕೃತಿ ಬಿಡುಗಡೆಗೊಳಿಸುವರು. ಡಾ.ಬಿ.ಎಸ್.ರಾವ್ ಕಾಸರಗೋಡು ಅಧ್ಯಕ್ಷತೆ ವಹಿಸುವರು. ಕರ್ನಾಟಕ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮುಖ್ಯ ಅಭ್ಯಾಗತರಾಗಿ ಉಪಸ್ಥಿತರಿರುವರು. ಡಾ.ಎ.ಪಿ. ಭಟ್ ಪುತ್ತೂರು ಕೃತಿಪರಿಚಯ ನೀಡುವರು. ಮಂಜೇಶ್ವÀರ ಶಾಸಕ ಎಕೆಎಂ ಅಶ್ರಫ್, ಹಿರಿಯ ವೈದ್ಯ ಡಾ.ಜಿ.ಕೆ.ಭಟ್ ಸಂಕಬಿತ್ತಿಲು, ಐಎಂಎ ಕಾಸರಗೋಡು ಜಿಲ್ಲಾ ಘಟಕಾಧ್ಯಕ್ಷ ಡಾ.ನಾರಾಯಣ ನಾೈಕ್ ಶುಭಾಶಂಸನೆಗೈಯ್ಯುವರು. ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಮಂಗಳಾರತಿ, ಪ್ರಸಾದ ಭೋಜನ ನಡೆಯಲಿದೆ.
ಅಪರಾಹ್ನ 2 ರಿಂದ ಡಾ.ಅನ್ನಪೂರ್ಣೇಶ್ವರಿ ಏತಡ್ಕ ಮತ್ತು ತಂಡದವರಿಂದ ಕಾವ್ಯ ಗಾಯನ ನಡೆಯಲಿದೆ. 2.30 ರಿಂದ ಡಾ.ಬನಾರಿ ವಿರಚಿತ ಕಾಸರಗೋಡು ಸಮಸ್ಯೆ-ಒಂದು ವಿಶ್ಲೇಷಣೆ ಕೃತಿಯ ಅವಲೋಕನ ತಜ್ಞ ವೈದ್ಯ ಡಾ.ಮುರಳೀಮೋಹನ ಚೂಂತಾರು ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ವಿಷಯ ಮಂಡನೆ ನಡೆಸುವರು. ಪ್ರೊ.ಪಿ.ಎನ್.ಮೂಡಿತ್ತಾಯ, ನ್ಯಾಯವಾದಿ ಮುರಳೀಧರ ಬಳ್ಳುಕ್ಕುರಾಯ, ಪ್ರಮೀಳ ಮಾಧವ, ಎ.ಆರ್.ಸುಬ್ಬಯ್ಯಕಟ್ಟೆ, ಗೋಪಾಲ ಶೆಟ್ಟಿ ಅರಿಬೈಲು ಉಪಸ್ಥಿತರಿರುವರು. 3.45 ರಿಂದ ಕಾಸರಗೋಡಿನ ಹಿರಿಯ ಸಾಧಕರಾದ ನ್ಯಾಯವಾದಿ ಐ.ವಿ.ಭಟ್, ವೈ.ಸತ್ಯನಾರಾಯಣ, ಡಾ.ಸರ್ವೇಶ್ವರ ಭಟ್ ಕುಂಬಳೆ, ಎಂ.ತಿಮ್ಮಣ್ಣ ಭಟ್ ಧರ್ಮತ್ತಡ್ಕ, ಪಿ.ಎಸ್.ಪುಣಿಚಿತ್ತಾಯ, ನಾರಾಯಣ ಗಟ್ಟಿ ಮಾಸ್ತರ್ ಕುಂಬಳೆ, ಡಾ.ಗಣಪತಿ ಭಟ್ ಕುಳಮರ್ವ, ಬೆಳ್ಳಿಗೆ ನಾರಾಯಣ ಮಣಿಯಾಣಿ, ಡಾ.ಗಣಪತಿ ಭಟ್ ಮುಳ್ಳಂಕೊಚ್ಚಿ, ಶಕುಂತಲಾ ಭಟ್ ಕುಂಚಿನಡ್ಕ ಅವರಿಗೆ ಗೌರವಾರ್ಪಣೆ ನಡೆಯಲಿದ್ದು, ಎಡನೀರು ಶ್ರೀಗಳು ಉಪಸ್ಥಿತರಿರುವರು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸುವರು. ಕೇರಳ ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್.ಜಯಾನಂದ ಶುಭಹಾರೈಸುವರು.
ಡಾ.ಬನಾರಿಯವರ ರೋಗ ನಿದಾನ, ಸರಳ ವಿಧಾನ ಕೃತಿ ಬಿಡುಗಡೆ ಇಂದು
0
ಸೆಪ್ಟೆಂಬರ್ 07, 2022