ಬದಿಯಡ್ಕ: ಓಣಂ ಕೇರಳದ ಸಾಂಪ್ರದಾಯಿಕ ಹಬ್ಬ. ಸಮೃದ್ಧಿ ಸೂಚಿಸುವುದರಿಂದ ನಾಡಿನ ಎಲ್ಲ ಜನರು ಸೌಹಾರ್ದದಿಂದ ಆಚರಿಸುವ ಹಬ್ಬ. ಮಕ್ಕಳಲ್ಲಿನ ಉತ್ತಮ ರೀತಿಯ ಚಟುವಟಿಕೆಗಳಿಂದ ಶುಭವಾಗಲಿ ಎಂದು ಬದಿಯಡ್ಕ ಗ್ರಾಮ ಪಂಚಾಯಿತಿಯ ಸದಸ್ಯ ಬಾಲಕೃಷ್ಣ ಶೆಟ್ಟಿ ಹೇಳಿದರು.
ಬದಿಯಡ್ಕದ ಪೆರಡಾಲ ಸರ್ಕಾರಿ ಪ್ರೌಢಶಾಲೆಯ ಓಣಂ ಹಬ್ಬ ಆಚರಣೆಯ ಸಂದರ್ಭ ಅವರು ಮಾತನಾಡುತ್ತಿದ್ದರು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಹಮ್ಮದ್ ಕರೋಡಿ,ಉಪಾಧ್ಯಕ್ಷ ರಾಮ,ಸದಸ್ಯರಾದ ಶರೀಫ್, ನೌಫಲ್, ಮೊಹಮದ್ ಶುಭ ಹಾರೈಸಿದರು.ಮುಖ್ಯೋಪಾಧ್ಯಾಯ ರಾಜಗೋಪಾಲ ಸ್ವಾಗತಿಸಿ, ಗೋಪಾಲಕೃಷ್ಣ ಭಟ್ ವಂದಿಸಿದರು. ಶ್ರೀಧರನ್ ನಿರೂಪಿಸಿದರು. ವಿವಿಧ ಹೂ ರಂಗೋಲಿ ರಚಿಸಲಾಯಿತು.ಮಹಾಬಲಿ ಮತ್ತು ವಾಮನ ವೇಷಧಾರಿಗಳು ವಿವಿಧೆಡೆ ಭೇಟಿಕೊಟ್ಟರು. ಮಕ್ಕಳಿಗೆ ಸಂಗೀತ ಕುರ್ಚಿ, ಹಗ್ಗ ಜಗ್ಗಾಟ ಮುಂತಾದ ಸ್ಪರ್ಧೆ ಏರ್ಪಡಿಸಲಾಯಿತು. ಮಧ್ಯಾಹ್ನ ವಿಶೇಷ ಔತಣ ವ್ಯವಸ್ಥೆ ಮಾಡಲಾಯಿತು.
ಪೆರಡಾಲ ಶಾಲೆಯಲ್ಲಿ ಓಣಂ ಆಚರಣೆ
0
ಸೆಪ್ಟೆಂಬರ್ 04, 2022
Tags