ಬದಿಯಡ್ಕ: ಜ್ಞಾನ ಮಂದಾರ ಶೈಕ್ಷಣಿಕ ಮತ್ತು ಸಾಂಸ್ಕøತಿಕ ಅಕಾಡೆಮಿ ಬೆಂಗಳೂರು ಮತ್ತು ಆರ್. ಎನ್. ಎಸ್ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಗುರುವಾರ ಬೆಂಗಳೂರಿನಲ್ಲಿ ಡಾ.ಆರ್ ಎನ್ ಶೆಟ್ಟಿಯವರ ಕನಸಿನ ಕೂಸು ಸಭಾಂಗಣದಲ್ಲಿ ಜರುಗಿತು. ಅತಿಥಿಗಳಾಗಿ ಮಂಗಳೂರು ವಿ ವಿ ಉಪಕುಲಪತಿ ಡಾ. ಪಿಎಸ್ ಎಡಪಡಿತ್ತಾಯ, ಗೌರವಾನ್ವಿತ ಅತಿಥಿಗಳಾಗಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಇದರ ಮಾಜಿ ಅಧ್ಯಕ್ಷ ಡಾ. ದರ್ಮದರ್ಶಿ ಹರಿಕೃಷ್ಣ ಪುನರೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆರ್ ಎನ್ ಎಸ್ ಮುಖ್ಯ ಆಡಳಿತಾಧಿಕಾರಿ ಡಾ ಸುಧೀರ್ ಪೈ ಕೆ ಎಲ್ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ವಿವಿಧ ಸಾಧಕರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು. ವೈಷ್ಣವಿ ನಾಟ್ಯಾಲಯ ಪುತ್ತೂರು ಇದರ ನೃತ್ಯ ನಿರ್ದೇಶಕಿ ವಿದುಷಿ ಯೋಗೀಶ್ವರೀ ಜಯಪ್ರಕಾಶ್ ಇವರ ಶಿಷ್ಯೆ ವಿದುಷಿ ಕು. ಹರ್ಷಿತಾ ಎನ್ ಜೋಗಿ ಬದಿಯಡ್ಕ ಇವರಿಗೆ ಕರ್ನಾಟಕ ಕಲಾಶ್ರೀ ರಾಜ್ಯ ಪ್ರಶಸ್ತಿಯನ್ನು ನೀಡಿದರು. ಪ್ರಾಂಶುಪಾಲ ಪ್ರೊ. ರವಿಶಂಕರ್, ಜ್ಞಾನಮಂದಾರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಎಚ್.ಜೆ.ಸೋಮಶೇಖರ್ ಬೆಂಗಳೂರು ಉಪಸ್ಥಿತರಿದ್ದರು. ಎರಡು ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಿತು. ಹರ್ಷಿತಾ ಬದಿಯಡ್ಕ ಕನಕಪ್ಪಾಡಿಯ ಭಾಸ್ಕರ ಹಾಗೂ ರಾಜೇಶ್ವರಿ ಇವರ ಪುತ್ರಿಯಾಗಿದ್ದಾಳೆ.
ವಿದುಷಿ ಕು. ಹರ್ಷಿತಾಳಿಗೆ `ಕರ್ನಾಟಕ ಕಲಾಶ್ರೀ' ರಾಜ್ಯ ಪ್ರಶಸ್ತಿ ಪ್ರದಾನ
0
ಸೆಪ್ಟೆಂಬರ್ 25, 2022