HEALTH TIPS

'ಚೀನಾ ಕ್ರಾಂತಿ' ಕುರಿತು ವಿಡಂಬನಾತ್ಮಕ ಟ್ವೀಟ್‌ಗಳನ್ನು ವಿಶೇಷ ಸುದ್ದಿಯನ್ನಾಗಿ ಪ್ರಸಾರಿಸಿದ ರಿಪಬ್ಲಿಕ್ ಭಾರತ್ ಟಿವಿ!

              ವದೆಹಲಿ:ಜರ್ಮನ್ ಸುದ್ದಿ ಜಾಲತಾಣ 'ಡೆರ್ ಸ್ಪಿಗೆಲ್'ನ ಬೀಜಿಂಗ್ ಪ್ರತಿನಿಧಿ ಜಾರ್ಜ್ ಫಹ್ರಿಯಾನ್ ಅವರು ಚೀನಾದ (China) ಅಧ್ಯಕ್ಷ ಕ್ಸಿ ಜಿನ್‌ಪಿಂಗ್( Xi Jinping) ವಿರುದ್ಧ ಬಂಡಾಯದ ವದಂತಿಗಳ ಕುರಿತು ತಮಾಷೆಗಾಗಿ ಬೀಜಿಂಗ್‌ನ ಸರಣಿ ಚಿತ್ರಗಳನ್ನೊಳಗೊಂಡ ವಿಡಂಬನಾತ್ಮಕ ಥ್ರೆಡ್‌ವೊಂದನ್ನು ಟ್ವೀಟಿಸಿದ್ದರು.

                  ಆದಾಗ್ಯೂ ಹಿಂದಿ ಸುದ್ದಿವಾಹಿನಿ ರಿಪಬ್ಲಿಕ್ ಭಾರತ್(Republic Bharat) ಅವರ ಟ್ವೀಟ್‌ಗಳು ಮತ್ತು ಚಿತ್ರಗಳನ್ನು ಬಳಸಿಕೊಂಡಿತ್ತು ಹಾಗೂ ಅವುಗಳನ್ನು ಬ್ರೇಕಿಂಗ್ ನ್ಯೂಸ್ ಮತ್ತು ವಿಶೇಷ ವರದಿಯನ್ನಾಗಿ ಪ್ರಸಾರಿಸುವ ಮೂಲಕ ಈ ವದಂತಿಗಳನ್ನು ಪುಷ್ಟೀಕರಿಸಿತ್ತು ಎಂದು thewire.in ವರದಿ ಮಾಡಿದೆ.

                   ವಾಹಿನಿಯು ಯೂ ಟ್ಯೂಬ್ ಮತ್ತು ಫೇಸ್‌ಬುಕ್‌ನಲ್ಲಿ 10 ನಿಮಿಷಗಳ ವರದಿಯೊಂದನ್ನು ಪೋಸ್ಟ್ ಮಾಡಿದ್ದು, ಫಹ್ರಿಯಾನ್‌ರ ಥ್ರೆಡ್‌ನಿಂದ ಚಿತ್ರಗಳನ್ನು ಬಳಸಿತ್ತು ಮತ್ತು ಕ್ಸಿ ಜಿನ್‌ಪಿಂಗ್ ವಾಸವಾಗಿರುವ ಝಿನುವಾ ಗೇಟ್‌ನಲ್ಲಿ ಉನ್ನತ ಪಡೆಗಳನ್ನು ನಿಯೋಜಿಸಲಾಗಿದೆ ಎಂಬ ವರದಿಗಳು ಬರತೊಡಗಿವೆ ಎಂದು ಹೇಳಿತ್ತು.

                  ಕಮ್ಯುನಿಸ್ಟ್ ಪಕ್ಷದ ನಾಯಕತ್ವ ಸಮಾವೇಶಕ್ಕೆ ಕೆಲವೇ ವಾರಗಳ ಮುನ್ನ, ಕ್ಸಿ ಜಿನ್‌ಪಿಂಗ್ ಅಧಿಕಾರವನ್ನು ಪ್ರಶ್ನಿಸಿದ್ದಕ್ಕಾಗಿ ಚೀನಾದ ಸಾರ್ವಜನಿಕ ಭದ್ರತಾ ಉಪಸಚಿವ ಸನ್ ಲಿಜುನ್‌ಗೆ ಜಾರಿಗೊಳಿಸಲು ಎರಡು ವರ್ಷಗಳ ಸಮಯಾವಕಾಶದೊಂದಿಗೆ ಮರಣದಂಡನೆಯನ್ನು ವಿಧಿಸಿದ ಮರುದಿನ ಚೀನಾದಲ್ಲಿ ದಂಗೆ(China Coup) ಮತ್ತು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಗೃಹಬಂಧನ ಕುರಿತು ವದಂತಿಗಳು ಅಂತರ್ಜಾಲದಲ್ಲಿ ಹರಡಲು ಆರಂಭಗೊಂಡಿದ್ದವು.

                  ಫಹ್ರಿಯಾನ್ ತನ್ನ ಹಲವಾರು ಉತ್ತರಗಳಲ್ಲಿ ತನ್ನ ಥ್ರೆಡ್ ಕೇವಲ ಹುಡುಗಾಟಕ್ಕಾಗಿ ಆಗಿತ್ತು ಮತ್ತು ತಾನು ದಂಗೆಯ ಬಗ್ಗೆ ತಮಾಷೆ ಮಾಡಿದ್ದೆ, ನಿಜಕ್ಕೂ ಯಾವುದೇ ದಂಗೆ ಸಂಭವಿಸಿಲ್ಲ ಎಂದು ದೃಢಪಡಿಸಿದ್ದರು. ರಿಪಬ್ಲಿಕ್ ಭಾರತ್‌ನ ಪೋಸ್ಟ್‌ಗೆ ಲಿಂಕ್‌ನೊಂದಿಗೆ ಫಹ್ರಿಯಾನ್‌ರ ಥ್ರೆಡ್ ಕುರಿತು ಕಮೆಂಟ್ ಮಾಡಿದ್ದ ಭಾರತೀಯ ಲೇಖಕಿ ಹಾಗೂ ಪತ್ರಕರ್ತೆ ಅದಿತಿ ಮೆಹ್ರೋತ್ರಾ ಅವರು, ಪ್ರಮುಖ ಭಾರತೀಯ ಚಾನೆಲ್‌ವೊಂದು ಬ್ರೇಕಿಂಗ್ ನ್ಯೂಸ್ ಆಗಿ ನಿಮ್ಮ ಎಲ್ಲ ಫೋಟೊಗಳನ್ನು ಈಗ ಲೈವ್ ಆಗಿ ತೋರಿಸುತ್ತಿದೆ ಮತ್ತು 'ಉನ್ನತ ಪಡೆ'ಗಳಂತಹ ಪದಗಳನ್ನು ಬಳಸುತ್ತಿದೆ. ನಿಮ್ಮ ಪೋಸ್ಟ್‌ಗಳಲ್ಲಿಯ ವಿಡಂಬನೆಯು ಅವರಿಗೆ ಅರ್ಥವಾಗಿಲ್ಲ (ಅಥವಾ ಉದ್ದೇಶಪೂರ್ವಕ ಅಜ್ಞಾನ) ಎನ್ನುವುದು ಸ್ಪಷ್ಟವಾಗಿದೆ ಎಂದು ಬರೆದಿದ್ದರು. ಇದಕ್ಕೆ ಫಹ್ರಿಯಾನ್ 'ನಿಜಕ್ಕೂ? ಅದ್ಭುತ' ಎಂದು ಉತ್ತರಿಸಿದ್ದರು.

                        ಇನ್ನೊಂದು ಉತ್ತರದಲ್ಲಿಯೂ ಅವರು, ನಡೆಯದ ದಂಗೆಯ ಬಗ್ಗೆ ತಾನು ತಮಾಷೆ ಮಾಡಿದ್ದೆ ಎಂದು ತಿಳಿಸಿದ್ದರು.

                    ಅಂತಿಮವಾಗಿ ಅವರ ವಿಡಂಬನಾತ್ಮಕ ಥ್ರೆಡ್‌ನ್ನು 'ರಿಪಬ್ಲಿಕ್ ಭಾರತ್' ಹೇಗೆ ಬ್ರೇಕಿಂಗ್ ನ್ಯೂಸ್ ಆಗಿ ವರದಿ ಮಾಡಿತ್ತು ಎನ್ನುವುದನ್ನು ಹಲವಾರು ಬಳಕೆದಾರರು ಟೀಕಿಸಿದ ಬಳಿಕ ಫಹ್ರಿಯಾನ್, 'ಭಾರತೀಯ ಸುದ್ದಿವಾಹಿನಿಯೊಂದು ಈಗ ಈ ಥ್ರೆಡ್‌ನ ಮೇಲೆ ವರದಿ ಮಾಡುತ್ತಿರುವುದರಿಂದ ನಾನು ಪುನರಾವರ್ತಿಸುತ್ತಿದ್ದೇನೆ: ಎರಡು ವಿಷಯಗಳು ಅನಂತವಾಗಿವೆ, ಬ್ರಹ್ಮಾಂಡ ಮತ್ತು ಮನುಷ್ಯನ ಮೂರ್ಖತನ' ಎಂದು ಟ್ವೀಟಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries