ಬದಿಯಡ್ಕ: ಬಿರುಸಿನ ಗಾಳಿಗೆ ಕುಂಬ್ಡಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಮನೆಗಳು ಕುಸಿದು ಹಾನಿಯುಂಟಾಗಿದೆ. ನಾಲ್ಕನೇ ವಾರ್ಡ್‍ನ ಏತಡ್ಕ, ಅನಂತಮೂಲೆ, ಮಲ್ಲಾರ ಮತ್ತು ಮೂರನೇ ವಾರ್ಡ್‍ನ ಪತ್ರೋಡಿಯಲ್ಲಿ ಮನೆಗಳಿಗೆ ಹಾನಿಯುಂಟಾಗಿದೆ. ಸೋಮವಾರ ನಸುಕಿಗೆ ಬೀಸಿದ ತೀವ್ರವಾದ ಗಾಳಿಗೆ ಮನೆಗಳು ಧ್ವಂಸಗೊಂಡಿವೆ. ಪಂಚಾಯಿತಿ ಅಧ್ಯಕ್ಷ ಹಮೀದ್ ಪೆÇಸೋಳಿಗೆ, ಪಂಚಾಯಿತಿ ಸದಸ್ಯ ಜಿ.ಕೃಷ್ಣ ಶರ್ಮ, ಕುಂಬ್ಡಾಜೆ ಗ್ರಾಮಾಧಿಕಾರಿ ಎಸ್. ಲೀಲಾ ಅವರು ಮನೆಗಳಿಗೆ ಭೇಟಿ ನೀಡಿ, ನಷ್ಟದ ಅಂದಾಜು ನಿಶ್ಚಯಿಸಿದರು.
ಕುಂಬ್ಡಾಜೆಯಲ್ಲಿ ಬಿರುಸಿನ ಗಾಳಿ: ಹಲವು ಮನೆಗಳಿಗೆ ಹಾನಿ
0
ಸೆಪ್ಟೆಂಬರ್ 12, 2022