ಹೆಚ್ಚಿನವರಿಗೆ ಶೂ, ಚಪ್ಪಲಿ ಬಿಟ್ಟು ಒಂದು ಹೆಜ್ಜೆಯೂ ಇಡಲು ಅಸಾಧ್ಯ. ಆದರೆ, ಬರಿಗಾಲಲ್ಲಿ ಹುಲ್ಲಿನ ಮೇಲೆ ನಡೆಯುವುದು ಎಷ್ಟು ಆರೋಗ್ಯಕರ ಎಂಬುದು ತಿಳಿದಿದೆಯೇ? ಹೌದು, ಬರಿಗಾಲಲ್ಲಿ ನಡೆಯವುದರಿಂದ, ಅನೇಕ ಅರೋಗ್ಯ ಪ್ರಯೋಜನಗಳಿವೆ. ಆದರೆ ಇದ್ಯಾವುದನ್ನ ಲೆಕ್ಕಿಸದ ನಾವು, ತರತರಹದ ಶೂ, ಚಪ್ಪಲಿಗಳನ್ನ ಧರಿಸುತ್ತೇವೆ. ಇದರಿಂದ ನಿಮ್ಮ ಪಾದ ಸ್ವಚ್ಛವಾಗಿ, ಅಂದವಾಗಿ ಕಾಣಿಸಬಹುದೇ ಹೊರತು, ಆರೋಗ್ಯಕ್ಕೆ ಯಾವುದೇ ಪ್ರಯೋಜನವಿಲ್ಲ. ಬದಲಾಗಿ ಬರಿಗಾಲಲ್ಲಿ ನಡೆಯುವುದು ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು. ಹಾಗಾದರೆ, ಬರಿಗಾಲಲ್ಲಿ ನಡೆಯುವುದರಿಂದ ಏನೆಲ್ಲಾ ಲಾಭಗಳಿವೆ ಎಂಬುದನ್ನು ಇಲ್ಲಿ ನೋಡೋಣ.
ಬರಿಗಾಲಲ್ಲಿ ನಡೆಯುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಲಾಭಗಳಿವೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:
ದೇಹದ ಕಾರ್ಯನಿರ್ವಹಣೆಯನ್ನು ಸುಗಮಗೊಳಿಸುವುದು
ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯುವುದರಿಂದ ಮಾನಸಿಕವಾಗಿ ಶಾಂತಿ ದೊರೆಯುವುದು ಮಾತ್ರವಲ್ಲದೇ ಇದು ನಿಮ್ಮ ದೇಹಕ್ಕೆ ಅನೇಕ ಪ್ರಯೋಜನಗಳನ್ನು ಮಾಡುವುದು. ಜರ್ನಲ್ ಆಫ್ ಎನ್ವಿರಾನ್ಮೆಂಟಲ್ ಅಂಡ್ ಪಬ್ಲಿಕ್ ಹೆಲ್ತ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ , ಬರಿಗಾಲಿನಲ್ಲಿ ನಡೆಯುವುದು ನಿಮ್ಮ ದೇಹದಲ್ಲಿ ಉಂಟಾಗುವ ಘರ್ಷಣೆಗಳನ್ನು ಕಡಿಮೆ ಮಾಡುತ್ತದೆ. ಅಂದರೆ, ಇದು ನಿಮ್ಮ ದೇಹದ ಕಾರ್ಯನಿರ್ವಹಣೆಯನ್ನು ಸಾಮಾನ್ಯಗೊಳಿಸಲು ಸಹಾಯ ಮಾಡುತ್ತದೆ.
ಒತ್ತಡ ಕಡಿಮೆ ಮಾಡುವುದು
ಸಾಮಾನ್ಯವಾಗಿ ಸನ್ಯಾಸಿಗಳು ಒತ್ತಡ-ಮುಕ್ತ ಮತ್ತು ಶಾಂತಿಯುತವಾಗಿರಲು ಕಾರಣವೇನು ಎಂಬುದನ್ನು ಎಂದಾದರೂ ಯೋಚಿಸಿದ್ದೀರಾ? ಅವರು ಯಾವಾಗಲೂ ಬರಿಗಾಲಿನಲ್ಲಿ ಅಲೆದಾಡುವುದು ಭಾಗಶಃ ಕಾರಣವಾಗಿರಬಹುದು. ಹೌದು, ಬರಿಗಾಲಿನಲ್ಲಿ ನಡೆಯುವುದು ಒತ್ತಡವನ್ನು ಕಡಿಮೆ ಮಾಡುವುದು. ಮಲೇಷಿಯನ್ ಜರ್ನಲ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಒತ್ತಡವು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಹಲವಾರು ರೀತಿಯಲ್ಲಿ ಹಾನಿಯನ್ನುಂಟುಮಾಡುತ್ತದೆ. ಇದರಿಂದ ಕ್ಯಾನ್ಸರ್ ಅಪಾಯದಿಂದ ಹಿಡಿದು, ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀಳುವುದು. ಆದ್ದರಿಂದ ಬರಿಗಾಲಿನಲ್ಲಿ ನಡೆಯುವುದು ಮುಖ್ಯವಾಗಿ ನಿಮ್ಮ ಜೀವವನ್ನು ಉಳಿಸಬಹುದು.
ಹೃದಯರಕ್ತನಾಳದ ಅಪಾಯ ಕಡಿಮೆ ಮಾಡುವುದು
ಬರಿಗಾಲಲ್ಲಿ ನಡೆಯವುದು ವಾಸ್ತವವಾಗಿ ಹೃದಯರಕ್ತನಾಳದ ಕಾಯಿಲೆಯನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಜರ್ನಲ್ ಆಫ್ ಆಲ್ಟರ್ನೇಟಿವ್ ಅಂಡ್ ಕಾಂಪ್ಲಿಮೆಂಟರಿ ಮೆಡಿಸಿನ್‌ನಲ್ಲಿ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ, "ಬರಿಗಾಲಲ್ಲಿ ನಡೆಯುವುದರಿಂದ ರಕ್ತ ಸಂಚಾರ ಸುಗಮಗೊಳ್ಳುವುದು. ಇದರಿಂದ ರಕ್ತನಾಳಗಳ ಊತ, ಅಂಟಿಕೊಳ್ಳುವಿಕೆ ಸಮಸ್ಯೆ ಉಂಟಾಗಲಾರದು. ಇದರಿಂದ ಹೃದಯರಕ್ತನಾಳದ ಅಪಾಯ ಕಡಿಮೆಯಾಗುವುದು.
ನರಮಂಡಲವನ್ನು ನಿಯಂತ್ರಿಸುವುದು
ಬರಿಗಾಲಿನಲ್ಲಿ ನಡೆಯುವುದು ಅಭ್ಯಾಸವಾಗಲು ಸಮಯ ತೆಗೆದುಕೊಳ್ಳಬಹುದು. ಆ ಅವಧಿಯಲ್ಲಿ, ಅನಾನುಕೂಲವಾಗಬಹುದು. ಆದರೆ, ಇದು ಉತ್ತಮವಾಗಿದೆ. ಮೆಡಿಕಲ್ ಹೈಪೋಥೀಸಸ್ ಎಂಬ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಬರಿಗಾಲಲ್ಲಿ ನಡೆಯುವುದರಿಂದ ನರಮಂಡಲವನ್ನು ನಿಯಂತ್ರಿಸಬಹುದು. ಇದು ನ್ಯೂರೋಮಾಡ್ಯುಲೇಷನ್ ಎಂಬ ಪ್ರಕ್ರಿಯೆಯ ಮೂಲಕ ಮಾಡುತ್ತದೆ. ನೀವು ಬರಿಗಾಲಿನಲ್ಲಿ ನಡೆಯುವಾಗ, ಈ ವಿದ್ಯುತ್ ಪ್ರವಾಹಗಳು ಭೂಮಿಯಿಂದ ನಿಮ್ಮ ಪಾದಗಳ ಮೂಲಕ ಚಲಿಸುತ್ತವೆ. ಈ ಮೂಲಕ ನಿಮ್ಮ ನರಮಂಡಲ ನಿಯಂತ್ರಣದಲ್ಲಿರುವುದು.
ದೀರ್ಘಕಾಲದ ಉರಿಯೂತವನ್ನು ಪರಿಹರಿಸುವುದು
ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫಾರ್ಮೇಶನ್ ಪ್ರಕಾರ, ಉರಿಯೂತ ಎಂಬುದು, ಕೆಲವೊಮ್ಮೆ ಹಲವಾರು ತಿಂಗಳುಗಳಿಂದ ವರ್ಷಗಳವರೆಗೆ ಇರುತ್ತದೆ. ಇದು ಗಾಯದ ಕಾರಣ ಮತ್ತು ಗಾಯ ಗುಣವಾಗುವ ನಿಮ್ಮ ದೇಹದ ಸಾಮರ್ಥ್ಯದೊಂದಿಗೆ ಬದಲಾಗುತ್ತದೆ. ಏನೇ ಇರಲಿ, ದೀರ್ಘಕಾಲದ ಉರಿಯೂತವನ್ನು ಉತ್ತಮವಾಗಿ ಜಯಿಸಲು ಒಂದು ಖಚಿತವಾದ ಮಾರ್ಗವಿದೆ. ಅದೇನಂದ್ರೆ, ಬರಿಗಾಲಿನಲ್ಲಿ ನಡೆಯುವುದು.
ನೋವು ಕಡಿಮೆಯಾಗುವುದು
ಎನ್ವಿರಾನ್ಮೆಂಟಲ್ ಅಂಡ್ ಪಬ್ಲಿಕ್ ಹೆಲ್ತ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ವಿಮರ್ಶೆಯ ಪ್ರಕಾರ, ಬರಿಗಾಲಿನಲ್ಲಿ ನಡೆಯುವುದು ಸ್ನಾಯುಗಳು ಮತ್ತು ಕೀಲುಗಳಲ್ಲಿನ ನೋವು ಕಡಿಮೆಯಾಗಲು ಸಂಬಂಧಿಸಿದೆ. ಇದರಿಂದ ಉತ್ತಮ ನಿದ್ರೆಯ ಜೊತೆಗೆ ದೇಹದ ನೋವು ಕಡಿಮೆಯಾಗುವುದು. ಬರಿಗಾಲಿನಲ್ಲಿ ನಡೆಯುವಾಗ ಭೂಮಿಯ ಎಲೆಕ್ಟ್ರಾನ್‌ಗಳು ನೆಲದಿಂದ ದೇಹಕ್ಕೆ ವರ್ಗಾವಣೆಯಾಗಿ, ನೋವು ನಿವಾರಕಗಳಾಗಿ ಕಾರ್ಯ ನಿರ್ವಹಿಸುತ್ತವೆ.
ಗ್ಲೂಕೋಸ್ ನಿಯಂತ್ರಣವನ್ನು ಸುಧಾರಿಸುವುದು
ಹೆಲ್ತ್‌ಲೈನ್ ಪ್ರಕಾರ, ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ಗ್ಲೂಕೋಸ್ ಎಂದೂ ಕರೆಯುತ್ತಾರೆ, ಇದು ನಿಮ್ಮ ರಕ್ತದಲ್ಲಿ ಕಂಡುಬರುವ ಸಕ್ಕರೆಯ ಮುಖ್ಯ ವಿಧವಾಗಿದೆ. ಇದು ನೀವು ಸೇವಿಸುವ ಆಹಾರದಿಂದ ಬರುತ್ತದೆ ಮತ್ತು ಇದು ನಿಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಆದರೆ ನೀವು ರಕ್ತದಲ್ಲಿನ ಸಕ್ಕರೆಯ ಮಟ್ಟವು ತುಂಬಾ ಹೆಚ್ಚು ಅಥವಾ ತುಂಬಾ ಕಡಿಮೆಯಾಗಿದ್ದರೆ, ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಆದರೆ, ಗ್ಲೂಕೋಸ್ ಅನ್ನು ನಿಯಂತ್ರಿಸಲು ಬರಿಗಾಲಿನಲ್ಲಿ ನಡೆಯುವುದು ಸಹಾಯ ಮಾಡುವುದು ಎಂಬುದಾಗಿ ಸಂಶೋಧನೆ ಹೇಳಿದೆ.
ಪಾದಗಳು ಗಟ್ಟಿಯಾಗುತ್ತವೆ
ಬರಿಗಾಲಿನಲ್ಲಿ ನಡೆಯುವುದರಿಂದ ಪಾದಗಳು ಒರಟಾಗುತ್ತವೆ ಮತ್ತು ರೋಗಾಣುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಬರಿಗಾಲಿನಲ್ಲಿ ನಡೆಯುವುದು ಪಾದಗಳ ಕೆಳಭಾಗವನ್ನು ಗಟ್ಟಿಗೊಳಿಸುತ್ತದೆ, ಇದರಿಂದ ತಮ್ಮನ್ನು ತಾವು ಗಾಯಗೊಳಿಸಿಕೊಳ್ಳುವ ಸಾಧ್ಯತೆ ಕಡಿಮೆ ಎಂದು ತಜ್ಞರು ಹೇಳುತ್ತಾರೆ.