ನವದೆಹಲಿ: ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ದೇಶದ 14ನೇ ಅಟಾರ್ನಿ ಜನರಲ್ (ಎ.ಜಿ) ಆಗಿ ನೇಮಿಸಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.
ರೋಹಟಗಿ ಅವರಿಗೆ ಇದು ಎರಡನೇ ಅವಧಿಯಾಗಿದ್ದು, ಇದಕ್ಕೂ ಮೊದಲು 2014ರ ಜೂನ್‌ನಿಂದ 2017ರ ಜೂನ್ ವರೆಗೆ ಸೇವೆ ಸಲ್ಲಿಸಿದ್ದರು.
ಬಳಿಕ ಆ ಸ್ಥಾನಕ್ಕೆ ಕೆ.ಕೆ. ವೇಣುಗೋಪಾಲ್ ನೇಮಕಗೊಂಡಿದ್ದರು. 91 ವರ್ಷದ ವೇಣುಗೋಪಾಲ್ ಅವರ ಕರ್ತವ್ಯದ ಅವಧಿ ಸೆಪ್ಟೆಂಬರ್ 30ಕ್ಕೆ ಮುಕ್ತಾಯವಾಗಲಿದೆ. ರೋಹಟಗಿ ಅಕ್ಟೋಬರ್ 1 ರಿಂದ ಸೇವೆ ಆರಂಭಿಸಲಿದ್ದಾರೆ.
ರೋಹಟಗಿ ಅವರು ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಶಿಶ್ ಮಿಶ್ರಾ ಮತ್ತು ಐಷಾರಾಮಿ ಹಡಗಿನ ಡ್ರಗ್ಸ್ ಪ್ರಕರಣದಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಪರ ವಕಾಲತ್ತು ವಹಿಸಿದ್ದರು.
Senior advocate Mukul Rohatgi is to be appointed as Attorney General for India.
This would be second stint for him as the term of incumbent A-G K K Venugopal is ending on September 30.
@DeccanHerald