HEALTH TIPS

ಅಸ್ಸಾಂ: ಎಲ್ಲ ಮದರಸಾಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸಾಧ್ಯತೆ

 

            ಗುವಾಹಟಿ: ಅಸ್ಸಾಂ ಸರ್ಕಾರವು ರಾಜ್ಯದಲ್ಲಿರುವ ಎಲ್ಲ ಖಾಸಗಿ ಮದರಸಾಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಶಿಕ್ಷಣ ಸಚಿವ ರನೋಜ್‌ ಪೆಗು ಬುಧವಾರ ತಿಳಿಸಿದ್ದಾರೆ.

                  ಉಗ್ರರ ಜೊತೆ ಸಂಪರ್ಕ ಹೊಂದಿರುವ ಆರೋಪದಡಿ ಹಲವು ಮದರಸಾಗಳ ಬೋಧಕರನ್ನು ಬಂಧಿಸಿರುವ ಹಿನ್ನೆಲೆ ಈ ಕ್ರಮಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.ಅಸ್ಸಾಂ ಸರ್ಕಾರೇತರ ಶಿಕ್ಷಣ ಸಂಸ್ಥೆಗಳ (ನಿಯಂತ್ರಣ ಮತ್ತು ನಿರ್ವಹಣೆ) ಕಾಯ್ದೆ, 2006ರ ಅಡಿ ಮದರಸಾಗಳನ್ನು ನಿಯಂತ್ರಣಕ್ಕೆ ಸಾಧ್ಯತೆ ಇದೆ. ಆದರೆ ಇದಕ್ಕೆ ಸಂಬಂಧಿಸಿ ಯಾವುದೇ ನಿರ್ದಿಷ್ಟ ಹೆಜ್ಜೆಯನ್ನು ಇಟ್ಟಿಲ್ಲ ಎಂದು ಪೆಗು ತಿಳಿಸಿದ್ದಾರೆ.

                  ಖಾಸಗಿ ಮದರಸಾಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, 'ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸರ್ಕಾರೇತರ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸುವ ಕಾನೂನು ಈಗಾಗಲೇ ಚಾಲ್ತಿಯಲ್ಲಿದೆ. ಆದರೆ ಎಲ್ಲ ಸರ್ಕಾರೇತರ ಶಿಕ್ಷಣ ಸಂಸ್ಥೆಗಳು ಈ ಕಾನೂನಿನಡಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

                 ಚಾಲ್ತಿಯಲ್ಲಿರುವ ಈ ಕಾಯ್ದೆ ಅಡಿ ಎಲ್ಲ ಸರ್ಕಾರೇತರ ಶಿಕ್ಷಣ ಸಂಸ್ಥೆಗಳನ್ನು ತರುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ. ಆದರೆ ಖಾಸಗಿ ಮದರಸಾಗಳು ಈ ವಿಭಾಗದಲ್ಲಿ ಬರುತ್ತವೆಯೋ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲಾಗುವುದು. ನಿಯಂತ್ರಣಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದು ತಿಳಿಸಿದ್ದಾರೆ.

                ಅಸ್ಸಾಂನಲ್ಲಿ 4 ಪ್ರಮುಖ ಮುಸ್ಲಿಂ ಸಂಘಟನೆಗಳು ಸುಮಾರು 3,000 ನೋಂದಾಯಿತ ಮತ್ತು ನೋಂದಾಯಿಸಲಾಗದ ಮದರಸಾಗಳು ಚಾಲ್ತಿಯಲ್ಲಿವೆ ಎಂದು ಪೊಲೀಸ್‌ ಮಹಾನಿರ್ದೇಶಕ ಭಾಸ್ಕರ್‌ ಜ್ಯೋತಿ ಮಹಾಂತ ಇತ್ತೀಚೆಗೆ ಹೇಳಿದ್ದರು. ಕಳೆದ ವರ್ಷ ಏಪ್ರಿಲ್‌ 1ರಂದು ಸರ್ಕಾರದಡಿ ನಡೆಸಲಾಗುತ್ತಿದ್ದ 610 ಮದರಸಾಗಳನ್ನು ಪ್ರಾಥಮಿಕ, ಪ್ರೌಢ ಶಾಲೆಗಳನ್ನಾಗಿ ಪರಿವರ್ತಿಸಲಾಗಿತ್ತು.

                 ಉಗ್ರಗಾಮಿ ಸಂಘಟನೆಗಳ ಜೊತೆ ಸಂಪರ್ಕ ಹೊಂದಿರುವ ಆರೋಪದಡಿ ಅಸ್ಸಾಂನಲ್ಲಿ ಮಾರ್ಚ್‌ ತಿಂಗಳಿನಿಂದ ಇಲ್ಲಿಯವರೆಗೆ ಮದರಸಾಗಳಲ್ಲಿ ಪಾಠ ಮಾಡುತ್ತಿದ್ದ 42 ಶಿಕ್ಷಕರನ್ನು ಬಂಧಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries