HEALTH TIPS

ಡಾಕ್ಟರೇಟ್‍ನಲ್ಲಿ ಧರ್ಮ: ಕಾಂತಪುರಂ ಮತ್ತು ವೆಲ್ಲಾಪಳ್ಳಿ ಅವರಿಗೆ ಡಾಕ್ಟರೇಟ್ ನೀಡುವ ಕ್ರಮಕ್ಕೆ ಸದಸ್ಯರಿಂದ ಆಕ್ಷೇಪ


           ಮಲಪ್ಪುರಂ: ಕ್ಯಾಲಿಕಟ್ ವಿಶ್ವವಿದ್ಯಾನಿಲಯವು ಡಾಕ್ಟರೇಟ್‍ಗೆ ಧರ್ಮವನ್ನು ಸೇರಿಸುತ್ತಿದೆ. ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಮತ್ತು ವೆಲ್ಲಾಪಳ್ಳಿ ನಟೇಶನ್ ಅವರಿಗೆ ಡಾಕ್ಟರೇಟ್ ಗೌರವ (ಡಿ ಲಿಟ್) ನೀಡಲು ಕ್ಯಾಲಿಕಟ್ ವಿಶ್ವವಿದ್ಯಾಲಯದ ಸಿಂಡಿಕೇಟ್ ನಿರ್ಣಯವು ವಿವಾದಾಸ್ಪದವಾಗಿದೆ.
          ಎಡಪಂಥೀಯ ಸಿಂಡಿಕೇಟ್ ಸದಸ್ಯ ಇ ಅಬ್ದುರ್ ರಹಿಮಾನ್ ಪ್ರಸ್ತಾವನೆ ಮಂಡಿಸಿದರು. ಆದರೆ ಎಡರಂಗ  ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಈ ಘಟನೆ ವಿವಾದಕ್ಕೀಡಾಗುತ್ತಿದ್ದಂತೆ, ಯಾವುದೇ ಅಧಿಕೃತ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ವಿಶ್ವವಿದ್ಯಾಲಯ ಸ್ಪಷ್ಟಪಡಿಸಿದೆ. ಆದರೆ ಉಪಕುಲಪತಿಗಳ ಅನುಮತಿ ಮೇರೆಗೆ ನಿರ್ಣಯ ಮಂಡಿಸಲಾಯಿತು. ಇದು ಸದಸ್ಯರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
         ಮೊನ್ನೆಯಷ್ಟೇ ಇ.ಅಬ್ದುರ್ರಹಿಮಾನ್ ಅವರು ಕಾಂತಪುರಂ ಮತ್ತು ವೆಲ್ಲಾಪಳ್ಳಿ ಅವರನ್ನು ಪರಿಗಣಿಸುವ ಮನವಿ ಮಾಡುವ ನಿರ್ಣಯ ಮಂಡಿಸಿದ್ದರು. ನೇಮಕಗೊಂಡ ಉಪ ಸಮಿತಿಯು ವೆಲ್ಲಾಪಳ್ಳಿ ನಟೇಶನ್ ಮತ್ತು ಕಾಂತಪುರಂ ಮುಸ್ಲಿಯಾರ್ ಅವರು ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಳನ್ನು ಪರಿಗಣಿಸಬೇಕು ಮತ್ತು ಅವರ ಪೆÇ್ರಫೈಲ್‍ಗಳನ್ನು ವಿವೇಚಿಸಬೇಕು ಎಂದು ನಿರ್ಣಯದಲ್ಲಿ ಹೇಳಲಾಗಿದೆ.
         ವಿವಾದ ಕಾವೇರುತ್ತಿರುವಂತೆ, ಡಿ-ಲಿಟ್ ನೀಡಲು ಗಣ್ಯರನ್ನು ಹುಡುಕಲು ರಚಿಸಲಾದ ಸಿಂಡಿಕೇಟ್ ಉಪಸಮಿತಿಗೆ ನಿರ್ಣಯವನ್ನು ಶಿಫಾರಸು ಮಾಡಲು ಸಿಂಡಿಕೇಟ್ ನಿರ್ಧರಿಸಿತು. ಡಾ. ವಿಜಯರಾಘವನ್, ಡಾ.ವಿನೋದ್ ಕುಮಾರ್, ಡಾ.ರಶೀದ್ ಅಹಮದ್ ಅವರನ್ನೊಳಗೊಂಡ ಉಪ ಸಮಿತಿ ಪರಿಶೀಲನೆ ನಡೆಸಲಿದೆ.
 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries