HEALTH TIPS

ಕಾಞಂಗಾಡ್ ನ ಮನೆ-ಮನೆಗಳ ಕಸ ಸಂಗ್ರಹಣೆ ಈಗ ಬಂದಿದೆ ಆ್ಯಪ್


           ಮುಳ್ಳೇರಿಯ: ಕಾಞಂಗಾಡು ನಗರಸಭೆಯ ಹಸಿರು ಕ್ರಿಯಾ ಸೇನೆ ತಂಡ ಇದೀಗ  ಡಿಜಿಟಲ್ ವ್ಯವಸ್ಥೆ ಮೂಲಕ ಗಮನ ಸೆಳೆಯುತ್ತಾರೆ. ಇದೀಗ ಡಿಜಿಟಲ್ ಆ್ಯಪ್ ಮೂಲಕ ಮನೆ ಬಾಗಿಲಿಗೆ ತ್ಯಾಜ್ಯ ಸಂಗ್ರಹಣೆ ಮಾಡುವ ನೂತನ ವ್ಯವಸ್ಥೆ ಜಾರಿಗೆ ತರಲಾಗಿದೆ. ಅಜೈವಿಕ ತ್ಯಾಜ್ಯ ಸಂಗ್ರಹದಿಂದ ಹಿಡಿದು ವಿಂಗಡಣೆ ಮತ್ತು ಮರುಬಳಕೆಯವರೆಗೂ ‘ಹರಿತಮಿತ್ರಂ’ ಆ್ಯಪ್ ಮೂಲಕ ಮೇಲ್ವಿಚಾರಣೆ ಮಾಡಬಹುದು. ಈ ನಿಟ್ಟಿನಲ್ಲಿ ಕಾಞಂಗಾಡು ನಗರಸಭೆ ಮಟ್ಟದಲ್ಲಿ ಹರಿತಮಿತ್ರಂ ಸೇವೆಯನ್ನು ನಗರಸಭಾ ಅಧ್ಯಕ್ಷೆ ಕೆ.ವಿ.ಸುಜಾತಾ ಇತ್ತೀಚೆಗೆ ಉದ್ಘಾಟಿಸಿದರು. ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ವಿ.ಸರಸ್ವತಿ ಅಧ್ಯಕ್ಷತೆ ವಹಿಸಿದ್ದರು.
        ಯೋಜನೆಯ ಭಾಗವಾಗಿ, ಎಲ್ಲಾ ಮನೆಗಳು ಮತ್ತು ಸಂಸ್ಥೆಗಳಲ್ಲಿ ಕ್ಯೂಆರ್ ಕೋಡ್ ನ್ನು ಅಳವಡಿಸಲಾಗುವುದು. ಅಜೈವಿಕ ತ್ಯಾಜ್ಯವನ್ನು ಸ್ಮಾರ್ಟ್ ಪೋನ್ ಮೂಲಕ ಸ್ಕ್ಯಾನ್ ಮಾಡಿ ಸಂಗ್ರಹಿಸಲಾಗುತ್ತದೆ. ರಾಜ್ಯ ಸರ್ಕಾರದ ಹರಿತಮಿತ್ರಂ ಆ್ಯಪ್ ಮೂಲಕ ಪ್ರತಿ ಮನೆಯವರು ತ್ಯಾಜ್ಯ ಸಂಗ್ರಹಣೆಗೆ ಸಂಬಂಧಿಸಿದ ದೂರುಗಳನ್ನು ಸಲ್ಲಿಸುವ ಮತ್ತು ಸಮಸ್ಯೆಗಳನ್ನು ಪೋಟೋ ಸಹಿತ ನಗರಸಭೆಗೆ ತಿಳಿಸುವ ಸೌಲಭ್ಯವಿದೆ.



           ಡಿಜಿಟಲ್ ವ್ಯವಸ್ಥೆಯ ಆಗಮನದಿಂದ, ಅಜೈವಿಕ ತ್ಯಾಜ್ಯ ವಿಲೇವಾರಿ ಕಾರ್ಯಾಚರಣೆಯನ್ನು ಹೆಚ್ಚು ಪರಿಣಾಮಕಾರಿ ಮತ್ತು ಫಲಪ್ರದವಾಗಿ ಮಾಡಬಹುದಾಗಿದೆ.  ಕ್ಯೂಆರ್ ಕೋಡ್ ಮೂಲಕ ಮನೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಪಡೆಯಬಹುದು. ಆ್ಯಪ್ ಪ್ರಕಾರ, ಸಂಗ್ರಹಿತ ತ್ಯಾಜ್ಯಗಳ ಪ್ರಮಾಣ, ಸಂಗ್ರಹಿಸುವ ದಿನಾಂಕ, ವಿಲೇವಾರಿಗೆ ಗ್ರಾಹಕ ಪಾವತಿಸಿದ ಮೊತ್ತ, ಪಾವತಿಸದ ಮಾಲೀಕರ ವಿವರಗಳು ಮತ್ತು ಹಸಿರು ಕ್ರಿಯಾಸೇನೆಯ  ಕಾರ್ಯಕರ್ತರ ನಡವಳಿಕೆಯನ್ನು ದಾಖಲಿಸುವ ಸೌಲಭ್ಯವನ್ನು ಒದಗಿಸುತ್ತದೆ.
         ಫಲಾನುಭವಿಗಳು ಅಪ್ಲಿಕೇಶನ್ ಮೂಲಕ ಸೇವೆಗಳಿಗೆ ಅಪೇಕ್ಷಿಸಲು, ದೂರುಗಳನ್ನು ವರದಿ ಮಾಡಲು ಮತ್ತು ಚಂದಾದಾರಿಕೆಗಳನ್ನು ಪಾವತಿಸಲು ಸಾಧ್ಯವಾಗುತ್ತದೆ. ನಗರಸಭೆ ಅಧ್ಯಕ್ಷರು ಉದ್ಘಾಟಿಸಿ ಮಾತನಾಡಿ, ನಗರಸಭೆಯಿಂದ ನೇಮಕಗೊಂಡ ಜನಪ್ರತಿನಿಧಿಗಳು ತಮಗೆ ಬೇಕಾದ ಮಾಹಿತಿ ನೀಡಿ ಹರಿತಮಿತ್ರ ಅಂಗವಾಗಿ ಕ್ಯೂಆರ್ ಕೋಡ್ ಅಳವಡಿಸಲು ಅನುಕೂಲವಾಗುವಂತೆ ಸ್ಥಳ ಒದಗಿಸಿ ಸೀಲ್ ಮಾಡಲಾಗುತ್ತದೆ. ಆದರೆ ಈ ಕ್ಯೂಆರ್ ಕೋಡನ್ನು ಹಾಳುಎಡಹಬಾರದು ಎಂದರು.
º         ಹರಿತಮಿತ್ರಂ ಅರ್ಜಿ ಯೋಜನೆಯ ಸಂಯೋಜಕ ಸನೋಜ್ ಚಿರಮ್ಮಲ್ ಯೋಜನೆಯ ಬಗ್ಗೆ ವಿವರಿಸಿದರು. ನಗರÀಸಭೆ ಉಪಾಧ್ಯಕ್ಷ ಬಿಲ್ಟೆಕ್ ಅಬ್ದುಲ್ಲ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಲತಾ, ಪಿ.ಅಹಮದಲಿ, ಕೆ.ಅನೀಶನ್, ಕೆ.ವಿ.ಮಾಯಾಕುಮಾರಿ, ನೈರ್ಮಲ್ಯ ತ್ಯಾಜ್ಯ ನಿರ್ವಹಣೆ ಕಾರ್ಯಾಧ್ಯಕ್ಷ ಟಿ.ವಿ.ಸುಜಿತ್ ಕುಮಾರ್, ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ಸೂರ್ಯಜಾನಕಿ, ಸುಜಾನಿ, ಒಕ್ಕೂಟದ ಅಧ್ಯಕ್ಷೆ ಗೀತಾ, ನವಕೇರಳ ಮಿಷನ್ ನ ವಿ.ಜಿ.ವಿಘ್ನೇಶ್, ಮತ್ತು ನೈರ್ಮಲ್ಯ ಮಿಷನ್ ಆರ್ಪಿ ಟಿ.ವಿ.ಭಾಗೀರಥಿ ಮಾತನಾಡಿದರು. ಆರೋಗ್ಯ ಮೇಲ್ವಿಚಾರಕಿ ಶೈನ್.ಪಿ.ಜೋಸ್ ಸ್ವಾಗತಿಸಿ, ನಗರಸಭೆ ಕಾರ್ಯದರ್ಶಿ ರಾಯ್ ಮ್ಯಾಥ್ಯೂ ವಂದಿಸಿದರು.          ತ್ಯಾಜ್ಯ ನಿರ್ವಹಣೆಯಲ್ಲಿ ಡಿಜಿಟಲೀಕರಣವನ್ನು ಪರಿಚಯಿಸುವ ಭಾಗವಾಗಿ ಸ್ವಚ್ಛತಾ ಮಿಷನ್, ಕ್ಲೀನ್ ಕೇರಳ ಕಂಪನಿ ಮತ್ತು ನಗರಸಭೆ ಇಲಾಖೆ (ಎಲ್‍ಎಸ್‍ಜಿಡಿ) ಸಹಯೋಗದೊಂದಿಗೆ ಹಸಿರು ಕೇರಳಂ ಮಿಷನ್‍ನಿಂದ ರಾಜ್ಯಾದ್ಯಂತ ಸ್ಥಳೀಯ ಸಂಸ್ಥೆಗಳಲ್ಲಿ ಸ್ಮಾರ್ಟ್ ಕಸ ನಿಗಾ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ.
      ಈಲ್ಲೆಯ ಇತರ ನಗರಸಭೆ ಹಾಗೂ ಗ್ರಾ.ಪಂ. ಗಳ ವಾರ್ಡ್‍ಗಳಿಗೆ ಶೀಘ್ರದಲ್ಲೇ ಈ ವ್ಯವಸ್ಥೆಯನ್ನು ವಿಸ್ತರಿಸಲಾಗುವುದು ಎಂದು ಅಧಿಕಾರಿಗಳು ಹೇಳುತ್ತಾರೆ. ಒಮ್ಮೆ ಎಲ್ಲಾ ವಾರ್ಡ್‍ಗಳಲ್ಲಿ ಪ್ರಾರಂಭವಾದ ನಂತರ, ಹಸಿರು ಕ್ರಿಯಾಸೇನೆಯ ಸದಸ್ಯರಿಂದ ಮನೆ-ಮನೆಗೆ ತೆರಳಿ ಕಸಸಂಗ್ರಹಣೆ, ಸಂಗ್ರಹಣಾ ಸೌಲಭ್ಯಗಳಿಂದ ಸ್ಕ್ರ್ಯಾಪ್ ಆಯುವಿಕೆ  ಮತ್ತು ಮರು ಬಳಕೆಯ ವಸ್ತುಗಳ ಮರುಪಡೆಯುವಿಕೆ ಸೌಲಭ್ಯಗಳು ಸೇರಿದಂತೆ ಗೃಹ ಮತ್ತು ಸಾಂಸ್ಥಿಕ ನಿರ್ವಹಣೆಯೊಂದಿಗೆ ಘನ ತ್ಯಾಜ್ಯ ನಿರ್ವಹಣೆಯ ಸಂಪೂರ್ಣ ಪ್ರಕ್ರಿಯೆ ಸುಲಲಿತಗೊಳ್ಳಲಿದೆ.
        ಹರಿತ ಕೇರಳಂ ಮಿಷನ್ ಮೊದಲ ಹಂತದಲ್ಲಿ ಕಾಞಂಗಾಡ್ ನಗರಸಭೆ ವ್ಯಾಪ್ತಿಯಲ್ಲಷ್ಟೇ ಆರಂಭಗೊಂಡಿದ್ದು ಈ ವ್ಯವಸ್ಥೆಯನ್ನು ಪರಿಚಯಿಸುವ ಪ್ರಕ್ರಿಯೆಯಲ್ಲಿದೆ. ಸ್ಥಳೀಯ ಸಂಸ್ಥೆಗಳಲ್ಲಿರುವ ಎಲ್ಲಾ ಕುಟುಂಬಗಳು ಮತ್ತು ಸಂಸ್ಥೆಗಳ ವಿವರಗಳನ್ನು ಮೇಲ್ವಿಚಾರಣಾ ವ್ಯವಸ್ಥೆಯಲ್ಲಿ ಲಭ್ಯವಾಗುವಂತೆ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳುತ್ತಾರೆ.

         ಸಾರ್ವಜನಿಕರು ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಮೊಬೈಲ್ ಅಪ್ಲಿಕೇಶನ್ ಮೂಲಕ ದೂರುಗಳನ್ನು ಸಲ್ಲಿಸಬಹುದು.


     

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries