ಉಪ್ಪಳ: ದೇಶಿಂiÀ ು ಅಧ್ಯಾಪಕ ಪರಿಷತ್ (ಎನ್.ಟಿ.ಯು ) ಮಂಜೇಶ್ವರ ಸಮಿತಿ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಪೆಲತಡ್ಕ ನಾರಾಯಣ ಭಟ್ (ನಿವೃತ್ತ ಮುಖ್ಯೋಪಾಧ್ಯಾಯರು, ಹೆದ್ದಾರಿ ಶಾಲೆ,ಹಿರಿಯ ನೇತಾರರು ಎನ್.ಟಿ.ಯು ಮಂಜೇಶ್ವರ ಉಪಜಿಲ್ಲೆ)ಇವರನ್ನು ಅವರ ಸ್ವಗೃಹದಲ್ಲಿ ಸೋಮವಾರ ಶಾಲು ಹೊದಿಸಿ, ಗಿಡ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭ ಎನ್.ಟಿ.ಯು ರಾಜ್ಯ ಉಪಾಧ್ಯಕ್ಷ ವೆಂಕಪ ಶೆಟ್ಟಿ, ಜಿಲ್ಲಾ ಸದಸ್ಯ ಅರವಿಂದಾಕ್ಷ ಭಂಡಾರಿ ಹಾಗೂ ಉಪಜಿಲ್ಲಾ ಅಧ್ಯಕ್ಷೆ ಚಂದ್ರಿಕಾ.ಕೆ.ಆರ್ ಉಪಸ್ಥಿತರಿದ್ದು ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಎನ್.ಟಿ.ಯು ಮಂಜೇಶ್ವರ ಉಪಜಿಲ್ಲಾ ಕಾರ್ಯದರ್ಶಿ ರಘುವೀರ್.ರಾವ್, ಸದಸ್ಯರಾದ ಶ್ರೀಧರ್ ಭಟ್, ಕೃಷ್ಣಮೂರ್ತಿ, ವರುಣ್ ಹಾಗೂ ಸುಕೃತ ಉಪಸ್ಥಿತರಿದ್ದರು.
ಎನ್.ಟಿ.ಯು ವತಿಯಿಂದ ಅಭಿನಂದನೆ
0
ಸೆಪ್ಟೆಂಬರ್ 07, 2022
Tags