ತಿರುವನಂತಪುರ: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಕಿಸೆಗಳ್ಳರ ಗ್ಯಾಂಗ್ ವ್ಯಾಪಕವಾಗಿದೆ ಎಂಬ ಬಗ್ಗೆ ದೂರಲಾಗಿದೆ. ರಾಹುಲ್ ಗಾಂಧಿ ಅವರ ಪ್ರಯಾಣಕ್ಕೆ ತಮಿಳುನಾಡಿನ ತಂಡವೊಂದು ಸೇರಿಕೊಂಡಿರುವುದು ಸಂಶಯಕ್ಕೆ ಕಾರಣವಾಗಿದೆ.
ಇಂದು ಬೆಳಗ್ಗೆ ನೇಮಮ್ ವೆಲ್ಲಯಾಣಿ ಜಂಕ್ಷನ್‍ನಿಂದ ಪಟ್ಟಕ್ಕೆ ಪ್ರಯಾಣ ಬೆಳೆಸಲಾಯಿತು. ಅಷ್ಟರಲ್ಲಿ ಕಳ್ಳರು ಸೇರಿಕೊಂಡರು. ಪ್ರವಾಸದಲ್ಲಿ ಭಾಗವಹಿಸಿದವರ ವಸ್ತುಗಳು ಕಳ್ಳತನವಾದ ನಂತರ ಅವರು ಪೋಲೀಸರನ್ನು ಸಂಪರ್ಕಿಸಿದರು. ಇದಾದ ಬಳಿಕ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಹೆಚ್ಚಿನ ಮಾಹಿತಿ ಸಿಕ್ಕಿದೆ.
ಕಳ್ಳತನದ ತಂಡವನ್ನು ಶೀಘ್ರವೇ ಬಂಧಿಸಲಾಗುವುದು ಎಂದು ತಿರುವನಂತಪುರ ಪೋಲೀಸ್ ಆಯುಕ್ತರು ತಿಳಿಸಿದ್ದಾರೆ. ರಾಹುಲ್ ಗಾಂಧಿಯನ್ನು ನೋಡಲು ಬಂದವರ ಜೇಬಿಗೆ ಕನ್ನ ಹಾಕುವುದೇ ಅವರ ಉದ್ದೇಶವಾಗಿತ್ತು. ಗ್ಯಾಂಗ್‍ನ ನಾಲ್ವರು ಸದಸ್ಯರ ಚಿತ್ರಗಳನ್ನು ಪೆÇಲೀಸರು ಸಂಗ್ರಹಿಸಿದ್ದಾರೆ. ಅವರು ಪಿಕ್ ಪಾಕೆಟ್ಸ್ ಮಾಡುತ್ತಿರುವ ದೃಶ್ಯಗಳೂ ಸಿಕ್ಕಿವೆ. ಆರೋಪಿಗಳು ಈ ಹಿಂದೆಯೂ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಪೋಲೀಸರ ಪಟ್ಟಿಯಲ್ಲಿ ಅವರ ಹೆಸರು ಇರುವುದರಿಂದ ತನಿಖೆ ಚುರುಕುಗೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ.
ಭಾರತ್ ಜೋಡೋ ಯಾತ್ರೆಯ ವೇಳೆ ಕಿಸೆಗಳ್ಳರ ಹಾವಳಿ: ರಾಹುಲ್ ಭೇಟಿಗೆ ಬಂದವರ ಜೇಬುಗಳ್ಳತನ ಮಾಡಿದ ತಂಡ
0
ಸೆಪ್ಟೆಂಬರ್ 12, 2022