ತಿರುವನಂತಪುರ: ರಿಕ್ಲೈಮಿಂಗ್ ದಿ ಸೋಲ್ ಆಫ್ ಇಂಡಿಯಾ ಹೆಸರಿನಲ್ಲಿ ನಡೆಸಲಾಗುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ತಮ್ಮ ದಿನಚರಿಯನ್ನು ತಪ್ಪಿಸಲಿಲ್ಲ.
ಕೇರಳಕ್ಕೆ ಪ್ರತಿ ಭೇಟಿಯಲ್ಲೂ ರಾಹುಲ್ ಗೂಡಂಗಡಿಗಳಿಗೆ ಭೇಟಿನೀಡಿ ಊಟ ಸವಿಯುತ್ತಿರುವ ಚಿತ್ರಗಳು ಮತ್ತು ದೃಶ್ಯಾವಳಿಗಳು ವೈರಲ್ ಆಗುತ್ತವೆ. ಈ ಬಾರಿಯೂ ಕಾಂಗ್ರೆಸ್ ನಾಯಕರು ಈ ಕ್ರಮಕ್ಕೆ ಚ್ಯುತಿಬಾರದತೆ ಮುನ್ನಡೆದರು.
ಪ್ರಯಾಣದ ವೇಳೆ ರಾಹುಲ್ ಟೀ ಅಂಗಡಿಗೆ ಭೇಟಿ ನೀಡಿ ಟೀ ಕುಡಿಯುತ್ತಿರುವ ವಿಡಿಯೋವನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ರಾಹುಲ್ ಟೀ ಅಂಗಡಿಯ ಮಾಲೀಕ ಜಯಕುಮಾರ್ ಬಳಿ ಪ್ರತಿದಿನ ಎಷ್ಟು ಸಂಪಾದನೆ ಮಾಡುತ್ತೀರಿ ಎಂದು ಕೇಳುತ್ತಿರುವ ದೃಶ್ಯವಿದೆ. ಕುಟುಂಬದ ವಿವರಗಳನ್ನೂ ರಾಹುಲ್ ಕೇಳಿದರು. ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಅವರ ಸಂವಾದಗಳನ್ನು ಹಂಚಿಕೊಳ್ಳುವುದರೊಂದಿಗೆ ಇದರ ವೀಡಿಯೊವನ್ನು ಸಹ ಹಂಚಿಕೊಳ್ಳಲಾಗಿದೆ.
ಇದಾದ ನಂತರ ಸ್ವತಃ ರಾಹುಲ್ ರತೀಶ್ ಎಂಬ ಕಾರ್ಯಕರ್ತನ ಮನೆಗೆ ಭೇಟಿ ನೀಡಿದ ಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ. ರತೀಶ್ ಮನೆಗೆ ಹೋಗಿ ಸಂಜೆ ಟೀ ಕುಡಿದು ಬಹಳಷ್ಟು ವಿಷಯಗಳ ಬಗ್ಗೆ ಮಾತನಾಡಿದ್ದನ್ನು ರಾಹುಲ್ ಹಂಚಿಕೊಂಡಿದ್ದಾರೆ. ಪ್ರತಿ ದಿನದಂತೆ ಕುಟುಂಬ ಸದಸ್ಯರೆಲ್ಲರೂ ಒಟ್ಟಿಗೆ ಇರುತ್ತಿದ್ದರು. ನಮ್ಮ ಭಾರತ ಒಂದು ಕುಟುಂಬ ಎಂದೂ ರಾಹುಲ್ ಹೇಳಿದ್ದಾರೆ. ಅವರು ಚಹಾದೊಂದಿಗೆ ಬಿಸ್ಕತ್ತುಗಳನ್ನು ತಿನ್ನುವ ಮತ್ತು ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳುವ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ.
ಯಾತ್ರೆಯ ಅಂಗವಾಗಿ ವೆಂಗನೂರು ಅಯ್ಯಂಕಾಳಿ ಸ್ಮಾರಕ ದೇವಸ್ಥಾನದಲ್ಲಿ ರಾಹುಲ್ ಪುμÁ್ಪರ್ಚನೆ ಮಾಡಿದರು.
ಪಾರಶಾಲದಿಂದ ನೇಮಂ ತಲುಪಿದ ಪಯಣ ನಿನ್ನೆ ಅಲ್ಲಿ ವಿಶ್ರಾಂತಿ ಪಡೆಯಿತು. ಇದೇ ವೇಳೆ ನೆಯ್ಯಟಿಂಕರದಲ್ಲಿ ಸಾಂಪ್ರದಾಯಿಕ ನೇಯ್ಗೆ ಕಾರ್ಮಿಕರೊಂದಿಗೆ ರಾಹುಲ್ ಸಂವಾದ ನಡೆಸಿದರು. ನೆಯ್ಯಟಿಂಕರ ಉರ್ತುಕಳದ ಡಾ.ಜಿ.ಆರ್.ಪಬ್ಲಿಕ್ ಶಾಲೆಯ ಮಕ್ಕಳೊಂದಿಗೆ ಸಂವಾದ ನಡೆಸಿದರು.
ಭಾರತ್ ಜೋಡೋ ಯಾತ್ರೆಯಲ್ಲಿ ಹಳೆಯ ಕ್ರಮಗಳಿಗೆ ಬದ್ದರಾದ ರಾಹುಲ್ ಗಾಂಧಿ: ಕಾರ್ಯಕರ್ತನ ಮನೆಗೆ ತೆರಳಿ ಚಹಾ ಸೇವನೆ: ಟೀ ಅಂಗಡಿಗೆ ಭೇಟಿ
0
ಸೆಪ್ಟೆಂಬರ್ 12, 2022