ಪೆರ್ಲ: ಸಾಮಾಜಿಕ ಕಾರ್ಯಕರ್ತ, ಕಾಂಗ್ರೆಸ್ ನಾಯಕ ಬೆದ್ರಂಪಳ್ಳ ಸಮೀಪದ ಕುಕ್ಕಿಲ ಅನಂತಕೃಷ್ಣ ನಾಯಕ್ (55) ಅವರ ಮೃತದೇಹವು ಮನೆಯ ಮಂಚದಲ್ಲಿ ಗುರುವಾರ ಬೆಳಿಗ್ಗೆ ಪತ್ತೆಯಾಗಿತ್ತು. ಸಂಶಯಾಸ್ಪದವಾಗಿ ಕಂಡುಬಂದ ಮೃತದೇಹದ ಮಹಜರಿಗಾಗಿ ಪರಿಯಾರಂ ಮೆಡಿಕಲ್ ಕಾಲೇಜಿಗೆ ಕೊಂಡೊಯ್ಯಲಾಗಿದೆ.ಅವಿವಾಹಿತರಾದ ಇವರು ಏಕಾಂಗಿಯಾಗಿ ಈ ಮನೆಯಲ್ಲಿ ವಾಸಿಸುತ್ತಿದ್ದರು. ಕಳೆದ ಕೆಲವು ತಿಂಗಳಿಂದ ವಯೋ ಸಹಜ ಅಸೌಖ್ಯಕ್ಕೊಳಗಾಗಿದ್ದ ಇವರು ನೊಂದು ಕೊಂಡಿದ್ದರು.ಕಳೆದೆರಡು ದಿನಗಳಿಂದ ಮನೆಯ ಹೊರಗೆ ಎಲ್ಲೂ ಕಾಣದ ಬಗ್ಗೆ ಸಮೀಪದಲ್ಲಿರುವ ಸಹೋದರ ಹುಡುಕಾಟ ನಡೆಸುತ್ತಿದ್ದಾಗ ಮನೆಯಲ್ಲಿಯೇ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದರು. ಮೃತರು ತಾಯಿ,ಸಹೋದರರು,ಸಹೋದರಿಯನ್ನು ಅಗಲಿದ್ದಾರೆ.
ಬೆದ್ರಂಪಳ್ಳ ಸಮೀಪ ಕಾಂಗ್ರೆಸ್ ಕಾರ್ಯಕರ್ತನ ಮೃತದೇಹ ಮನೆಯೊಳಗೆ ಪತ್ತೆ
0
ಸೆಪ್ಟೆಂಬರ್ 08, 2022