ಪತ್ತನಂತಿಟ್ಟ: ವ್ಯಸನಮುಕ್ತ ಕೇಂದ್ರಕ್ಕೆ ಕರೆದೊಯ್ಯುವುದನ್ನು ತಪ್ಪಿಸಲು ಯುವಕನೊಬ್ಬ ತೆಂಗಿನ ಮರದ ಮೇಲೆ ಹತ್ತಿದ ಘಟನೆ ನಡೆದಿದೆ. ಪಂದಳಂ ಕಡೈಕ್ಕಾಡ್ ಮೂಲದ ರಾಧಾಕೃಷ್ಣನ್ (38) ತೆಂಗಿನ ಮರದ ಮೇಲೆ ಕುಳಿತು ಆತಂಕ ಮತ್ತು ಕುತೂಹಲ ಉಂಟುಮಾಡಿದ.
ನಿನ್ನೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮಾದಕ ವ್ಯಸನಕ್ಕೆ ಒಳಗಾದ ಆತನನ್ನು ಮಾದಕ ವ್ಯಸನ ಕೇಂದ್ರಕ್ಕೆ ಸ್ಥಳಾಂತರಿಸಲು ಆತನ ಕುಟುಂಬ ನಿರ್ಧರಿಸಿತ್ತು. ಆದರೆ ಅಂಬ್ಯುಲೆನ್ಸ್ ಹಿತ್ತಲನ್ನು ತಲುಪಿದಾಗ ರಾಧಾಕೃಷ್ಣನ್ ಕೆಳಗಿಳಿದು ಓಡಿದರು. ನೇರ ತೆಂಗಿನ ಮರ ಹತ್ತಿ ಬಿಕ್ಕಟ್ಟಿಗೆ ಕಾರಣನಾದ.
ಆತನನ್ನು ಕೆಳಗಿಳಿಸಲು ಪ್ರಯತ್ನಗಳು ಭಾರೀ ನಡೆಯಿತು. ಜಿಗಿದರೆ ಅಥವಾ ಬಿದ್ದರೆ ಗಾಯವಾಗುವುದನ್ನು ತಡೆಯಲು ದೊಡ್ಡ ಬಲೆ ಜೋಡಿಸಲಾಗಿತ್ತು. ಆತನ ಮನವೊಲಿಸಲು ಅಗ್ನಿಶಾಮಕ ದಳ, ಪೆÇಲೀಸರು ಹಾಗೂ ಸ್ಥಳೀಯರು ಪ್ರಯತ್ನ ನಡೆಸಿ ಕೊನೆಗೂ ಯಶಸ್ವಿಯಾದರು.
ಈ ಮಧ್ಯೆ ಸ್ಥಳೀಯ ವ್ಯಕ್ತಿಯೋರ್ವ ತೆಂಗಿನ ಮರವನ್ನು ಹತ್ತಲು ಪ್ರಯತ್ನಿಸಿದನು, ಆದರೆ ಮರವೇರಿದ್ದ ಯುವಕ ತೆಂಗಿನಕಾಯಿ ಇತ್ಯಾದಿಗಳನ್ನು ಕಿತ್ತು ಹತ್ತುತ್ತಿರುವವನ ಮೈಮೇಲೆ ಎಸೆದು ತಡೆ ನೀಡಿದ. ಕೈಯಲ್ಲಿ ಮೊಬೈಲ್ ಫೆÇೀನ್ ಇದ್ದರೂ ಯಾರು ಕರೆ ಮಾಡಿದರೂ ಸ್ಪಂದಿಸುತ್ತಿರಲಿಲ್ಲ.
ಮಾದಕ ವ್ಯಸನ ಕೇಂದ್ರಕ್ಕೆ ವರ್ಗಾಯಿಸಲು ಆಂಬ್ಯುಲೆನ್ಸ್ ಆಗಮಿಸುತ್ತಿರುವಂತೆ ತೆಂಗಿನ ಮರವೇರಿ ಕುಳಿತ ಯುವಕ
0
ಸೆಪ್ಟೆಂಬರ್ 12, 2022