ಕಾಸರಗೋಡು: ಜಿಲ್ಲೆಯ ಡ್ರಾಗನ್‍ಫ್ರೂಟ್ ಬೆಳೆಸುವ ಕೃಷಿಕರಿಗೆ ರಾಜ್ಯ ತೋಟಗಾರಿಕಾ ಇಲಾಖೆಯಿಂದ ಸಹಾಯಧನ ನೀಡಲು ತೀರ್ಮಾನಿಸಲಾಗಿದೆ. 12 ಹೆಕ್ಟೇರ್ ಕೃಷಿಗೆ 3,60,000 ಮಂಜೂರಾಗಿದೆ. ಪ್ರತಿ ಹೆಕ್ಟೇರ್‍ಗೆ 30,000 ಸಹಾಯಧನ ನೀಡಲಾಗುವುದು.
ಡ್ರಾಗನ್‍ಫ್ರೂಟ್ ಕೃಷಿಯನ್ನು ವಿಸ್ತರಿಸುವ ಉದ್ದೇಶದಿಂದ ತೋಟಗಾರಿಕಾ ಮಿಷನ್ ಯೋಜನೆಯನ್ವಯ ಧನಸಹಾಯ ನೀಡಲಾಗುತ್ತದೆ. ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ಕೃಷಿಕರು ಡ್ರ್ಯಾಗನ್ ಫ್ರೂಟ್ ಕೃಷಿ ನಡೆಸುತ್ತಿದ್ದು, ಹಿಂದಿನ ವರ್ಷಕ್ಕಿಂತ ಹೆಚ್ಚಿನ ರೈತರು ಡ್ರ್ಯಾಗನ್ ಫ್ರೂಟ್ ಬೆಳೆಸಲು ಮುಂದೆ ಬರುತ್ತಿದ್ದಾರೆ. ಡ್ರಾಗನ್ ಫ್ರೂಟ್ ಸಸಿಗಳನ್ನು ಸಬ್ಸಿಡಿ ದರದಲ್ಲಿ ವಿತರಿಸಲಾಗುತ್ತದೆ. ಆಸಕ್ತ ರೈತರು ಆಯಾ ಕೃಷಿ ಭವನದಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
ಡ್ರ್ಯಾಗನ್ ಫ್ರೂಟ್ ಬೆಳೆಸುವ ಕೃಷಿಕರಿಗೆ ಆರ್ಥಿಕ ನೆರವು
0
ಸೆಪ್ಟೆಂಬರ್ 28, 2022