ತಿರುವನಂತಪುರ: ಹಿಂದೂ ನಂಬಿಕೆಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ನಟ ಸೂರಜ್ ವೆಂಜಾರಮೂಡ್ ವಿರುದ್ಧ ಹಿಂದೂ ಐಕ್ಯವೇದಿ ದೂರು ದಾಖಲಿಸಿದೆ.
ನಟ ಹಿಂದೂ ನಂಬಿಕೆ ಮತ್ತು ಸಂಪ್ರದಾಯಗಳಿಗೆ ಧಕ್ಕೆ ತಂದಿದ್ದಾರೆ ಎಂದು ವೆಂಜಾರಮೂಡ್ ಪೋಲೀಸರಿಗೆ ದೂರು ನೀಡಲಾಗಿದೆ. ಹಿಂದೂ ಐಕ್ಯವೇದಿ ತಿರುವನಂತಪುರ ಜಿಲ್ಲಾಧ್ಯಕ್ಷ ಕಿಲಿಮಾನೂರು ಸುರೇಶ್, ಕಾರ್ಯದರ್ಶಿ ವಝೈಲ ಉಣ್ಣಿ ಮತ್ತು ಕಾರ್ಯದರ್ಶಿ ನೆಡುಮಾಂಗಾಡ್ ಶ್ರೀಕುಮಾರ್ ಅವರು ಪೋಲೀಸರಿಗೆ ದೂರು ನೀಡಿದ್ದಾರೆ.
ಹಿಂದೂ ಐಕ್ಯವೇದಿ ಸಲ್ಲಿಸಿರುವ ದೂರಿನ ಪ್ರಕಾರ, ಫ್ಲವರ್ಸ್ ಚಾನೆಲ್‍ನಲ್ಲಿ ನಡೆದ ಕಾಮಿಡಿ ಉತ್ಸವಂ ಕಾರ್ಯಕ್ರಮದ ವೇಳೆ ಸಂದರ್ಶಕಿ ಕೈಗೆ ದಾರವನ್ನು ಕಟ್ಟಿಕೊಂಡಿರುವುದು ಹೇಯಕರ ಎಂದು ಹೇಳಿರುವ ಸೂರಜ್, ಹಿಂದೂ ಭಕ್ತರು ಮತ್ತು ಶಬರಿಮಲೆ ದೇಗುಲದ ಸರಂಕುತ್ತಿಯಲ್ಲಿ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದಾರೆ ಎಂದಿದ್ದು ಇದು ಹಿಂದೂ ಸಂಪ್ರದಾಯ ಮತ್ತು ನಂಬಿಕೆಗಳಿಗೆ ಧಕ್ಕೆ ತಂದಿದೆ ಎನ್ನಲಾಗಿದೆ. ಸೂರಜ್ ವೆಂಜಾರಾಮಮೂಡ್ ವಿರುದ್ಧ ಐಪಿಸಿ ಸೆಕ್ಷನ್ 295ಎ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಹಿಂದೂ ಐಕ್ಯವೇದಿ ಆಗ್ರಹಿಸಿದೆ.
ಹಿಂದೂ ಸಂಪ್ರದಾಯಗಳನ್ನು ಅವಮಾನಿಸಿದ ಆರೋಪದ ಮೇಲೆ ಸುರಾಜ್ ವೆಂಜಾರಮ್ಮೂಡ್ ವಿರುದ್ಧ ಪೋಲೀಸರು ಈ ಮೂಲಕ ಎರಡನೇ ದೂರನ್ನು ಸ್ವೀಕರಿಸಿದ್ದಾರೆ. ಈ ಹಿಂದೆ, ಪತ್ತನಂತಿಟ್ಟ ಮೂಲದ ವಕೀಲ ಮಹೇಶ್ ರಾಮ್ ಎಂಬವರು ಕೂಡ ಈ ಸಂಬಂಧ ಪೋಲೀಸರನ್ನು ಸಂಪರ್ಕಿಸಿದ್ದರು. ಸೂರಜ್ ವೆಂಜಾರಮೂಡ್ ಅವರಲ್ಲದೆ, ಕಾರ್ಯಕ್ರಮ ಸಂಪಾದಕ ಮತ್ತು ಹಾಸ್ಯೋತ್ಸವದ ಮುಖ್ಯ ಸಂಪಾದಕರ ವಿರುದ್ಧವೂ ದೂರು ದಾಖಲಾಗಿದೆ.
ಕಾಮಿಡಿ ಉತ್ಸವಂ ಕಾರ್ಯಕ್ರಮದಲ್ಲಿ ನಿರೂಪಕಿ ಅಶ್ವತಿ ಶ್ರೀಕಾಂತ್ ಕೈಗೆ ದಾರ ಕಟ್ಟಿಕೊಂಡಿರುವುದಕ್ಕೆ ಸೂರಜ್ ವೆಂಜರಮ್ಮೂಡ್ ಮಾತನಾಡಿದ್ದರು. ಕೆಲವರು ಅನಾವಶ್ಯಕವಾಗಿ ಕೈಗಳಿಗೆ ದಾರಕಟ್ಟಿದಂತೆ ಎಂದು ನಟ ಸೂರಜ್ ಹೇಳಿದ್ದರು. ಶಬರಿಮಲೆ ಸರಂಕುತ್ತಿಯಲ್ಲೂ ಈ ರೀತಿಯ ಹಲವು ದಾರಗಳು ಕಾಣಿಸುತ್ತವೆ ಎಂದೂ ನಟ ಹೇಳಿದ್ದರು.
ಹಿಂದೂ ನಂಬಿಕೆಗಳ ಅವಹೇಳನಕಾರಿ ಉಲ್ಲೇಖ; ಸೂರಜ್ ವೆಂಜಾರಮೂಡು ವಿರುದ್ಧ ಹಿಂದೂ ಐಕ್ಯವೇದಿಯಿಂದ ದೂರು
0
ಸೆಪ್ಟೆಂಬರ್ 14, 2022