ಮುಳ್ಳೇರಿಯ: ಸಹಕಾರೀ ಸಂಸ್ಥೆಗಳು ಊರಿನ ಬೆನ್ನೆಲುಬಾಗಿದೆ. ಜನರಿಂದ ಜನರಿಗಾಗಿಯೇ ಸಹಕಾರಿ ಸಂಸ್ಥೆಗಳು ಆರಂಭವಾಗಿದ್ದು ಸರ್ಕಾರದ ಸಹಕಾರದೊಂದಿಗೆ ಕೇರಳದ ಜನರ ಆಶಾಕಿರಣವಾಗಿದೆ. ಇಂತಹ ಸಂಸ್ಥೆಗಳು ನಾಡಿ ಅಭಿವೃದ್ಧಿಯಲ್ಲಿ ಪ್ರಧಾನಪಾತ್ರ ವಹಿಸುತ್ತದೆ ಎಂದು ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿಜಿ ಮ್ಯಾಥ್ಯೂ ಹೇಳಿದರು.
ಜಯನಗರ ಮಾರ್ಪನಡ್ಕ ಪಾಂಚಜನ್ಯ ಸಾಂಸ್ಕøತಿಕ ಭವನದ ಕಟ್ಟಡದಲ್ಲಿ ಸುಸಜ್ಜಿತ ವ್ಯವಸ್ಥೆಗಳೊಂದಿಗೆ ಆರಂಭಗೊಂಡ ಕುಂಬ್ಡಾಜೆ ಪಂಚಾಯಿತಿ ಕರ್ಷಕ ಕ್ಷೇಮ ಸಹಕರಣ ಸಂಘದ ನೂತನ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕುಂಬ್ಡಾಜೆ ಗ್ರಾಮಪಂಚಾಯಿತಿ ಅಧ್ಯಕ್ಷ ಹಮೀದ್ ಪೊಸೊಳಿಗೆ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಕಾಸರಗೋಡು ಅಸಿಸ್ಟೆಂಟ್ ರಿಜಿಸ್ಟ್ರಾರ್ ಜನರಲ್ ರವೀಂದ್ರ ಎ. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಆಹಾರ ಧಾನ್ಯಗಳ ಬೆಲೆ ಸ್ಥಿರತೆಯನ್ನು ಕಾಯ್ದುಕೊಳ್ಳುವಲ್ಲಿ ಇತರ ರಾಜ್ಯಗಳಿಗಿಂತ ಕೇರಳ ರಾಜ್ಯವು ಮುಂದಿದೆ. ಸಹಕಾರಿ ಸಂಸ್ಥೆಗಳು ಈ ನಿಟ್ಟಿನಲ್ಲಿ ಉತ್ತಮವಾದ ಕಾರ್ಯವನ್ನು ಮಾಡಿದೆ ಎಂದರು. ಮಾಜಿ ಗ್ರಾಮಪಂಚಾಯಿತಿ ಅಧ್ಯಕ್ಷ ಅಬೂಬಕ್ಕರ್, ಮಾಜಿ ಸದಸ್ಯ ರವೀಂದ್ರ ರೈ ಗೋಸಾಡ, ಯಾದವ ಸೇವಾ ಸಂಘದ ಅಧ್ಯಕ್ಷ ಸುಧಾಮ ಪದ್ಮಾರು, ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಅಧ್ಯಕ್ಷ, ನಿವೃತ್ತ ಅಧ್ಯಾಪಕ ಬಾಬು ಮಾಸ್ತರ್ ಅಗಲ್ಪಾಡಿ, ನಿರ್ದೇಶಕರುಗಳಾದ ಸಿ.ಹೆಚ್.ರಾಮಚಂದ್ರ, ಟಿ.ನಾರಾಯಣನ್ ನಂಬಿಯಾರ್, ಸುವರ್ಣ ಮಾಸ್ತರ್ ಅಗಲ್ಪಾಡಿ, ಸುರೇಂದ್ರನ್ ಕೊರೆಕ್ಕಾನ, ನಿಶಾ ವಿ.ಜಿ., ಕಮಲಾಕ್ಷಿ ಕೆ., ಅನಿತಾ ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದು ತೇರ್ಗಡೆಯಾದ ಸಂಘದ ಸದಸ್ಯರ ಮಕ್ಕಳಾದ ಶ್ರೇಯಾ ರೈ ಹಾಗೂ ಪಾಹಿಮಾ ಇವರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು. ಕುಂಬಡಾಜೆ ಕರ್ಷಕ ಕ್ಷೇಮ ಸಹಕರಣ ಸಂಘದ ಅಧ್ಯಕ್ಷ ಅಶೋಕ ಮಾಸ್ತರ್ ಅಗಲ್ಪಾಡಿ ಸ್ವಾಗತಿಸಿ, ಕಾರ್ಯದರ್ಶಿ ಆಶಾ ರಮೇಶ್ ಪದ್ಮಾರು ವಂದಿಸಿದರು. ನಿರ್ದೇಶಕ ಪ್ರಕಾಶನ್ ಗಾಡಿಗುಡ್ಡೆ ನಿರೂಪಿಸಿದರು.
ಊರಿನ ಪ್ರಗತಿಗೆ ಸಹಕಾರಿ ಸಂಸ್ಥೆಗಳ ಕಾರ್ಯ ಶ್ಲಾಘನೀಯ - ಸಿಜಿ ಮ್ಯಾಥ್ಯೂ: ಕುಂಬ್ಡಾಜೆ ಕರ್ಷಕ ಕ್ಷೇಮ ಸಹಕರಣ ಸಂಘದ ನೂತನ ಕಚೇರಿ ಉದ್ಘಾಟನೆ
0
ಸೆಪ್ಟೆಂಬರ್ 04, 2022