ಹೆಣ್ಣುಮಕ್ಕಳ ನೆಚ್ಚಿನ ವಿಚಾರಗಳಲ್ಲಿ ಮೇಕಪ್ ಕೂಡ ಒಂದು. ನಮ್ಮ ಅಂದವನ್ನು ಹೆಚ್ಚಿಸಿ, ಮನದಲ್ಲಿ ಒಂದು ಆತ್ಮವಿಶ್ವಾಸವನ್ನು ತುಂಬುವ ಶಕ್ತಿ ಈ ಮೇಕಪ್‌ಗಿದೆ. ಆದರೆ, ಈ ಮೇಕಪ್ ಬಗ್ಗೆ ಕೂಡ ಹಲವಾರು ಸುಳ್ಳು ಪುರಾಣಗಳಿವೆ. ಇದನ್ನೇ ಜನ ನಿಜ ಎಂದು ನಂಬಿಕೊಂಡು, ಅದನ್ನು ಅನುಸರಿಸುವವರೂ ನಮ್ಮ ನಡುವೆ ಸಾಕಷ್ಟು ಜನರಿದ್ದಾರೆ.
ಹಾಗಾದರೆ, ಮೇಕಪ್‌ಗೆ ಸಂಬಂಧಿಸಿದಂತೆ ಇರುವ ಸುಳ್ಳು ಅಥವಾ ಅಪನಂಬಿಕೆಗಳು ಯಾವುವು ಎಂಬುದನ್ನು ನೋಡೋಣ ಬನ್ನಿ:
ಮೇಕಪ್ ಬಗ್ಗೆ ಇರುವ ಅಪನಂಬಿಕೆ ಅಥವಾ ಸುಳ್ಳುಗಳನ್ನು ಈ ಕೆಳಗೆ ನೀಡಲಾಗಿದೆ:
ಎಣ್ಣೆಯುಕ್ತ ತ್ವಚೆಗೆ ಮಾಯಿಶ್ಚರೈಸರ್ ಅಗತ್ಯವಿಲ್ಲ:
ನಿಮ್ಮ ತ್ವಚೆ ಡ್ರೈ ಆಗಿರಲಿ ಅಥವಾ ಎಣ್ಣೆಯುಕ್ತವಾಗಿರಲಿ, ಅದನ್ನು ನಿಯಮಿತವಾಗಿ ಹೈಡ್ರೀಕರಿಸುವುದು ಅತ್ಯಗತ್ಯ. ಚರ್ಮವು ಸೆಬಮ್ ಎಂಬ ನೈಸರ್ಗಿಕ ತೈಲವನ್ನು ಬಿಡುಗಡೆ ಮಾಡುತ್ತದೆ. ತ್ವಚೆಯನ್ನು ಹೈಡ್ರೇಟ್ ಆಗಿ ಇಡಲು ಇದು ಮುಖ್ಯವಾಗಿದ್ದು, ಚರ್ಮವು ಸ್ರವಿಸುವ ನೈಸರ್ಗಿಕ ತೈಲವನ್ನು ಸೆಬಮ್ ಎಂದು ಕರೆಯಲಾಗುತ್ತದೆ. ಮಾಯಿಶ್ಚರೈಸರ್ ಚರ್ಮದ ಹೊರ ಪದರದಲ್ಲಿ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ಮೇದೋಗ್ರಂಥಿಗಳ ಸ್ರಾವವನ್ನು ನಿಯಂತ್ರಿಸುತ್ತದೆ. ಏಕೆಂದರೆ, ಈ ಗ್ರಂಥಿಗಳ ಅತಿಯಾದ ಸ್ರಾವ ಅಥವಾ ಕಡಿಮೆ ಸ್ರಾವ ಎರಡೂ ಸಹ ಹಾನಿಕಾರಕವೇ...ಆದ್ದರಿಂದ ಇದನ್ನು ನಿಯಂತ್ರಿಸುವುದು ಮುಖ್ಯ. ಈ ಕಾರ್ಯಗಳಿಗೆ ಮಾಯಿಶ್ಚರೈಸರ್ ಅತ್ಯಗತ್ಯ.
ಮೇಕಪ್ ಮೊಡವೆಗೆ ಕಾರಣವಾಗಬಹುದು:
ಇದೊಂದು ಸಾಮಾನ್ಯವಾಗಿ ಹೆಚ್ಚಿನವರು ಸತ್ಯವೆಂದು ನಂಬಿಕೊಂಡಿರುವ ಸುಳ್ಳು. ಮೇಕಪ್ ಮೊಡವೆಗಳಿಗೆ ಕಾರಣವಾಗಬಹುದು, ಅದು ಯಾವಾಗ ಅಂದರೆ, ಮೇಕಪ್ ಮುಖದಲ್ಲಿ ಗಂಟೆಗಟ್ಟಲೆ ಬಿಡುವುದರಿಂದ ಜೊತೆಗೆ, ಮೇಕಪ್ ತೆಗೆಯದೇ ರಾತ್ರಿಯಿಡೀ ಬಿಡುವುದರಿಂದ ಮೊಡವೆಗಳು ಅಗಬಹುದು. ಜೊತೆಗೆ ಯಾವುದಾದರೂ ಉತ್ಪನ್ನಗಳಿಗೆ ಅಲರ್ಜಿಯನ್ನು ಹೊಂದಿದ್ದರೆ ಮಾತ್ರ ಮೊಡವೆ ಉಂಟಾಗಬಹುದೇ ಹೊರತು, ಫ್ರೆಶ್ ಮುಖವು ಎಂದಿಗೂ ಮೊಡವೆಗಳನ್ನು ಉಂಟುಮಾಡುವುದಿಲ್ಲ. ಇದರ ಜೊತೆಗೆ ಗಮನ ಕೊಡಬೇಕಾದ ಇನ್ನೊಂದು ವಿಷಯವೆಂದರೆ ನಿಮ್ಮ ಮೇಕಪ್ ಬ್ರಷ್‌ಗಳ ನೈರ್ಮಲ್ಯ.