ಉಪ್ಪಳ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಸೆ. 04 ರಂದು ಭಾನುವಾರ ಬೆ.10.30ಕ್ಕೆ ಗೋಶಾಲೆಗೆ ಶಿಲಾನ್ಯಾಸ ಮತ್ತು ಅದೇದಿನ ಬೆಳಿಗ್ಗೆ 8. ರಿಂದ ಗೋಸೂಕ್ತ ಹವನ ಹಾಗೂ ಸಂಜೆ. 5. ರಿಂದ ಶ್ರೀಚಕ್ರ ಪೂಜೆ ಗಳು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ನೇತೃತ್ವದಲ್ಲಿ, ಕಟೀಲು ಕ್ಷೇತ್ರದ ಬ್ರಹ್ಮಶ್ರೀ ಕಮಲಾದೇವೀ ಪ್ರಸಾದ ಆಸ್ರಣ್ಣರವರ ಆಚಾರ್ಯತ್ವದಲ್ಲಿ ನಡೆಯಲಿದೆ.
ಪೂರ್ವಾಹ್ನ 11.00ಕ್ಕೆ ಸಭಾಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡುವರು. ಕಟೀಲು ಕ್ಷೇತ್ರದ ಬ್ರಹ್ಮಶ್ರೀ ಅನಂತಪದ್ಮನಾಭ ಆಸ್ರಣ್ಣರ ದಿವ್ಯ ಉಪಸ್ಥಿತಿಯಲ್ಲಿ, ರಾಜ್ಯಸಭಾ ಸದಸ್ಯ ಕೆ.ನಾರಾಯಣ್ ರವರ ಅಧ್ಯಕ್ಷತೆ ವಹಿಸುವರು. ಈ ಸಂದರ್ಭದಲ್ಲಿ ಬೆಂಗಳೂರಿನ ಆಕ್ಸ್‍ಫರ್ಡ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ರಮೇಶ್ ರಾಜುರವರಿಂದ ‘ಗೋಶಾಲೆಯ ಶಿಲಾಫಲಕ ಅನಾವರಣ’, ಕೆ.ನಾರಾಯಣ್‍ರವರಿಂದ ‘ವಿಂಶತಿ ಕಾರ್ಯಕ್ರವiದ ಲಾಂಛನ’ ಬಿಡುಗಡೆ, ಮುಂಬೈನ ಸದಾಶಿವ ಶೆಟ್ಟಿ ಕುಳೂರುರವರಿಂದ ‘ಅಗ್ನಿವೀರ್ ಉಚಿತ ದೈಹಿಕ ತರಬೇತಿ ಶಿಬಿರ’ದ ಉದ್ಘಾಟನೆ ಮತ್ತು ಮುಂಬೈಯ ಯದುನಾರಾಯಣ ಶೆಟ್ಟಿಯವರಿಂದ ಆಶ್ರಮದ “ಆಶ್ರಯ” ಯೋಜನೆಯ ‘34 ನೇ ಮನೆ ಕೀಲಿಕೈ ಹಸ್ತಾಂತರ’ವೂ ನಡೆಯಲಿದೆ. ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾಜಿ ರಾಜ್ಯಸಭಾ ಸದಸ್ಯ ಡಾ.ಕೆ.ಸಿ.ರಾಮಮೂರ್ತಿ, ಸಿದ್ಧಾಪುರದ ಉದ್ಯಮಿ ಗೋಪಿನಾಥ ಕಾಮತ್, ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ, ವಿಹಿಂಪ ಕೇಂದ್ರೀಯ ಸಮಿತಿ ಸದಸ್ಯ ಪ್ರೇಮಾನಂದ ಶೆಟ್ಟಿ, ಐಲ ದೇವಸ್ಥಾನದ ಮೊಕ್ತೇಸರ ಶಿವರಾಮ ಪಕಳ, ಮಂಗಳೂರಿನ ಮಧುಸೂದನ ಅಯರ್, ಹಾಗೂ ಬಲರಾಮ ಭಟ್ ಕಾಕುಂಜೆ ಉಪಸ್ಥಿತರಿರುವರು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೊಂಡೆವೂರು ಮಠದ ಆಡಳಿತಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ.
ಕೊಂಡೆವೂರು ಮಠದ ಗೋಶಾಲೆಗೆ ನಾಳೆ ಶಿಲಾನ್ಯಾಸ
0
ಸೆಪ್ಟೆಂಬರ್ 03, 2022