ತ್ರಿಶೂರ್: ತನ್ನ ತಂದೆಗೆ ಬೀದಿ ನಾಯಿ ಕಚ್ಚಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಯುವಕನ ಮನೆಗೆ ಮಾಧ್ಯಮ ಕಾರ್ಯಕರ್ತರು ಹಾಗೂ ಸ್ಥಳೀಯರು ದೌಡಾಯಿಸಿದ ಘಟನೆಯೊಂದು ನಡೆದಿದೆ.
ಇದು ಸುಳ್ಳು ಸುದ್ದಿ ಎಂದು ತಿಳಿದ ನಂತರ ಮಾಧ್ಯಮದ ಕಾರ್ಯಕರ್ತರು ಅವರ ವಿರುದ್ಧ ಪೋಲೀಸ್ ದೂರು ದಾಖಲಿಸಿದ್ದಾರೆ. ಇಂತಹ ಕಪೋಲಕಲ್ಪಿತ ಕಥೆ ಸೃಷ್ಟಿಯಾದುದು ತ್ರಿಶೂರ್ ಪುದುಕ್ಕಾಡ್ ನ ವರಂತರಪಿಲ್ಲಿಯಲ್ಲಿ. ಮನೆಯವರೊಂದಿಗೆ ಜಗಳವಾಡಿ ಕೆಲಸಕ್ಕೆ ಹೋಗಲು ಹಿಂದೇಟು ಹಾಕಿದ ಯುವಕನ ತಲೆಗೆ ಇಂಥದ್ದೊಂದು ಯೋಚನೆ ಹೊಳೆಯಿತು.
ಬಳಿಕ ತನ್ನ ತಂದೆಗೆ ಬೀದಿ ನಾಯಿ ಕಚ್ಚಿದ್ದು, ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಲೀಕ ಹಾಗೂ ಇತರರಿಗೆ ಸುಳ್ಳು ಹೇಳಿದ್ದ. ಆದರೆ ರಜೆ ಪಡೆಯಲು ಹೇಳಿದ ಸುಳ್ಳು ಕಥೆ ಅಷ್ಟೇ ವೇಗವಾಗಿ ಬಹಿರಂಗಗೊಂಡಿತು. ಸ್ಥಳೀಯರು ಮನೆಗೆ ಯುವಕನ ತಂದೆಯ ಆರೋಗ್ಯ ವಿಚಾರಿಸಲು ಬಂದಿದ್ದು ಈ ವೇಳೆ ಮಾಧ್ಯಮದವರಿಗೆ ಘಟನೆಯ ವಿವರ ತಿಳಿಯಿತು.
ಸೋಮವಾರ ಬೆಳಗ್ಗೆ ಎಂಟು ಗಂಟೆಗೆ ತನ್ನ ತಂದೆಗೆ ನಾಯಿ ಕಚ್ಚಿದೆ ಎಂದು ಉದ್ಯೋಗದಾತರಿಗೆ ನಂಬಿಸಿದ್ದ. ಮಾಹಿತಿ ಪಡೆದು ಕರೆ ಮಾಡಿದ ಸ್ಥಳೀಯ ವಾಹಿನಿ ಪ್ರತಿನಿಧಿಗಳಿಗೂ ಘಟನೆಯನ್ನು ವಿವರಿಸಿದ. ಆಗ ವಾಹಿನಿಗಳಲ್ಲಿ ಸುದ್ದಿ ಪ್ರಸಾರವಾಗತೊಡಗಿತ್ತು.
ಇದರೊಂದಿಗೆ ಯುವಕ ಸ್ಥಳೀಯರು ಹಾಗೂ ಸಂಬಂಧಿಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಕ್ಕೆ ಸುಳ್ಳು ಕಥೆ ಎಂದು ಮತ್ತೆ ನಂಬಿಸಲು ಯತ್ನಿಸಿ ಒಟ್ಟು ನಗೆಪಾಟಲಿಗೆ ಈಡಾದ ಘಟನೆ ಬಳಿಕ ಛೀಮಾರಿಗೆ ಕಾರಣವಾಯಿತು.
ತಂದೆಗೆ ಬೀದಿ ನಾಯಿ ಕಚ್ಚಿದೆಯೆಂದು ಮೇಲಧಿಕಾರಿಗೆ ಸುಳ್ಳು ಮಾಹಿತಿ: ಕಲಸಕ್ಕೆ ತೆರಳಲು ಹಿಂದೇಟು ಹಾಕಿದ ಯುವಕ ಕಥೆಯಿದು
0
ಸೆಪ್ಟೆಂಬರ್ 27, 2022