ನವದೆಹಲಿಯಲ್ಲೂ ಬೆಂಬಿಡದ ನಾಯಿ!: ಮುಖ್ಯಮಂತ್ರಿ ಎದುರು ಓಡೋಡಿಬಂದ ಬೀದಿ ನಾಯಿ: ಭದ್ರತಾ ಅಧಿಕಾರಿಗಳಿಂದ ರಕ್ಷಣೆ
0
ಸೆಪ್ಟೆಂಬರ್ 15, 2022
ನವದೆಹಲಿ: ಒಂದೆಡೆ ಕೇರಳದಲ್ಲಿ ಬೀದಿ ನಾಯಿಗಳ ಸವಾಲು ತೀವ್ರಗತಿಯಲ್ಲಿರುವಂತೆಯೇ ತಮ್ಮ ವಾಹನದಿಂದ ಇಳಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬಳಿ ಬೀದಿ ನಾಯಿಯೊಂದು ಓಡಿ ಬಂದ ವಿದ್ಯಮಾನ ನವದೆಹಲಿಯಲ್ಲಿ ನಡೆದಿದೆ.
ಪಿಣರಾಯಿ ವಿಜಯನ್ ಅವರು ಪಿಬಿ(ಪಾಲಿಟ್ ಬ್ಯೂರೊ) ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಯ ಎಕೆಜಿ ಭವನಕ್ಕೆ ಇಂದು ಆಗಮಿಸಿದ ವೇಳೆ ಬೀದಿ ನಾಯಿಯೊಂದು ಅವರ ಬಳಿ ಓಡಿ ಬಂದಿದೆ. ಮುಖ್ಯಮಂತ್ರಿಯತ್ತ ಬಂದ ನಾಯಿಯನ್ನು ಭದ್ರತಾ ಅಧಿಕಾರಿ ಬಳಿಕ ಒದ್ದು ಓಡಿಸಿದರು.
ಇದೇ ವೇಳೆ, ಕೇರಳದಲ್ಲಿ ಬೀದಿನಾಯಿಗಳ ಹಾವಳಿ ವಿಪರೀತವಾಗಿದೆ. ರಾಜ್ಯದಲ್ಲಿ ನಾಯಿಗಳಿಗೆ ರೇಬಿಸ್ ಲಸಿಕೆ ಹಾಕುವ ಕಾರ್ಯ ಆರಂಭವಾಗಿದೆ. ಮೆಗಾ ವ್ಯಾಕ್ಸಿನೇಷನ್ ಯೋಜನೆಗಾಗಿ ಒಂದು ಮಿಲಿಯನ್ ಡೋಸ್ ಲಸಿಕೆಗಳನ್ನು ಸಂಗ್ರಹಿಸಲಾಗುತ್ತಿದೆ. ಮೊದಲ ಸುತ್ತಿನ ಇನಾಕ್ಯುಲೇಷನ್ 170 ಹಾಟ್ ಸ್ಪಾಟ್‍ಗಳ ಮೇಲೆ ಕೇಂದ್ರೀಕೃತವಾಗಿದೆ. ಬೀದಿ ನಾಯಿಗಳ ಸಂಖ್ಯೆ ಕೇವಲ ಎರಡು ಲಕ್ಷ ಎಂದು ಅಂದಾಜಿಸಲಾಗಿದೆ
ಪ್ರಸ್ತುತ ಸರ್ಕಾರದ ಲಕ್ಷ್ಯ:
ತುರ್ತು ಕ್ರಮ ಕೈಗೊಳ್ಳುವುದಾಗಿ ಹೇಳಿದರೂ ಬೀದಿಯಲ್ಲಿ ಅಲೆದಾಡುವ ನಾಯಿಗಳನ್ನು ಬಂಧಿಸಿ ತೆರವು ಮಾಡುವಲ್ಲಿ ವಿಳಂಬ ಮಾಡುತ್ತಿರುವುದರಿಂದ ಜನಸಾಮಾನ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯ ನಡುವೆಯೇ ಇಂದು ಬೀದಿ ನಾಯಿಗಳ ಹಾವಳಿಗೆ ಪರಿಹಾರ ಕಂಡುಕೊಳ್ಳಲು ಇಲಾಖೆ ಸಭೆ ನಡೆಸಿದೆ. ಸಚಿವೆ ಚಿಂಚು ರಾಣಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ರಕ್ಷಣಾ ಚಟುವಟಿಕೆಗಳ ಮೌಲ್ಯಮಾಪನ ನಡೆದಿದೆ. ಲಸಿಕೆ ಖರೀದಿ, ಸಿಬ್ಬಂದಿ ನಿಯೋಜನೆ, ಪೂರಕ ಸೌಲಭ್ಯಗಳು ಮತ್ತು ಬೀದಿ ನಾಯಿಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಮಾರ್ಗಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ವಿವರಗಳು ಇನ್ನಷ್ಟೇ ಲಭಿಸಬೇಕಿದೆ.
Tags