ಕಾಸರಗೋಡು: ಪರಿಶಿಷ್ಟ ಜಾತಿಗೆ ಸೇರಿದ ಕನ್ನಡ ಸಾಹಿತಿಗಳಿಗೆ ಪುಸ್ತಕ ಪ್ರಕಟಣೆಗೆ ಹಣ ಮೀಸಲಿಡಬೇಕು ಎಂದು ಶಾಸಕ ಎನ್.ಎ.ನೆಲ್ಲಿಕುನ್ನು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪ್ರಸ್ತುತ, ಪರಿಶಿಷ್ಟ ಜಾತಿ ಸಮುದಾಯದ ಬರಹಗಾರರಿಗೆ ಅವರ ಪುಸ್ತಕಗಳನ್ನು ಪ್ರಕಟಿಸಲು ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆಯಿಂದ ಮಲಯಾಳ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಪುಸ್ತಕಗಳನ್ನು ಪ್ರಕಟಿಸಲು ಮಾತ್ರ ಹಣವನ್ನು ವಿತರಿಸಲಾಗುತ್ತಿದೆ. ಏಳು ಭಾಷೆಗಳ ಸಂಗಮ ಪ್ರದೇಶವಾಗಿರುವ ಕಾಸರಗೋಡು ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಐವತ್ತಕ್ಕೂ ಹೆಚ್ಚು ಕನ್ನಡ ಲೇಖಕರಿದ್ದಾರೆ. Âೀ ಸಮುದಾಯದ ಲೇಖಕರು ಆರ್ಥಿಕವಾಗಿ ಸಬಲರಲ್ಲದ ಕಾರಣ ಕನ್ನಡ ಲೇಖಕರಿಗೆ ಹಾಗೂ ಪುಸ್ತಕ ಪ್ರಕಟಣೆಗೆ ಹಣ ಮೀಸಲಿಡುವುದು ಅಗತ್ಯ ಎಂದು ಎನ್.ಎ.ನೆಲ್ಲಿಕುನ್ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಕನ್ನಡ ಪುಸ್ತಕ ಪ್ರಕಟಣೆಗೂ ಹಣ ಮೀಸಲಿರಿಸಬೇಕು: ಶಾಸಕ ಎನ್.ಎ ನೆಲ್ಲಿಕುನ್ನು ಆಗ್ರಹ
0
ಸೆಪ್ಟೆಂಬರ್ 23, 2022
Tags