ಉಪ್ಪಳ: ಆಲ್ ಕೇರಳ ಪೋಟೋಗ್ರಾಫರ್ ಅಸೋಸಿಯೇಷನ್ (ಎ.ಕೆ.ಪಿ.ಎ) ಉಪ್ಪಳ ಘಟಕದ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ರಚನೆ ಮಂಗಳವಾರ ಉಪ್ಪಳ ಹೋಟೇಲ್ ಸತ್ಯನಾರಾಯಣ ಸಭಾಂಗಣದಲ್ಲಿ ನಡೆಯಿತು.
ಘಟಕದ ಅಧ್ಯಕ್ಷ ಅಬ್ದುಲ್ ಕರೀಂ ಅಧ್ಯಕ್ಷತೆ ವಹಿಸಿದರು. ವಲಯ ಸಮಿತಿ ಅಧ್ಯಕ್ಷ ಸುನಿಲ್ ಕುಮಾರ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಕೋಶಾಧಿಕಾರಿ ವೇಣು.ವಿ.ವಿ, ಜಿಲ್ಲಾ ಉಪಾಧ್ಯಾಕ್ಷ ವಿಜಯನ್ ಶೃಂಗಾರ್ ಉಪ್ಪಳ, ವಲಯ ಸಮಿತಿ ಕೋಶಾಧಿಕಾರಿ ವೇಣುಗೋಪಾಲ್ ನೀರ್ಚಾಲ್, ವಲಯ ಕಾರ್ಯದರ್ಶಿ ಸುರೇಶ್ ಆಚಾರ್ಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಸಂಘಟನೆಯ ಅಭಿವೃದ್ದಿಗೆ ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ರಚಿಸಲಾಯಿತು. ಹಾಗೂ ಹಿರಿಯ ಅನುಭವಿ ಛಾಯಾಗ್ರಹಕ ಸಂಸ್ಥೆಯ ಮಾಲಕರನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ಉಪ್ಪಳ ಘಟಕದ ಪ್ರಧಾನ ಕಾರ್ಯದರ್ಶಿ ಸಂದೇಶ್ ಐಲ್ ಸ್ವಾಗತಿಸಿ, ವರದಿ ವಾಚಿಸಿದರು. ಘಟಕದ ಕೋಶಾಧಿಕಾರಿ ರಾಜೇಶ್ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಾಕ್ಷ ಝಕರಿಯಾ ವಂದಿಸಿದರು.
ಎ.ಕೆ.ಪಿ.ಎ ಉಪ್ಪಳ ಘಟದ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ
0
ಸೆಪ್ಟೆಂಬರ್ 28, 2022