ಕಾಸರಗೋಡು: ಭೂಗತ ದೊರೆಗಳು ನಿರ್ವಹಿಸುತ್ತಿರುವ ಡಾಕ್ ವೆಬ್ ಮೂಲಕ ಕೇರಳಕ್ಕೆ ಕೋಟ್ಯಂತರ ರೂ. ರವಾನೆಯಾಗುತ್ತಿರುವುದನ್ನು ಕೇಂದ್ರ ಸರ್ಕಾರದ ಇಕಾನಮಿಕ್ಸ್ ಬ್ಯೂರೋ(ಸಿಐಐಬಿ)ಪತ್ತೆಹಚ್ಚಿದೆ. ಇದರ ಹೊರತಾಗಿ ಡಿಜಿಟಲ್ ವ್ಯವಹಾರದ ಮೂಲಕವೂ ಕೇರಳಕ್ಕೆ ಭಾರಿ ಪ್ರಮಾಣದಲ್ಲಿ ಹಣ ರವಾನೆಯಾಗುವುದನ್ನು ಪತ್ತೆಹಚ್ಚಿದೆ.
ಈ ಹಣವನ್ನು ಕೇರಳದಲ್ಲಿ ಮಾದಕವಸ್ತು, ಶಸ್ತ್ರಾಸ್ತ್ರ, ಅಕ್ರಮ ಚಿನ್ನ ಕಳ್ಳಸಾಗಾಟ,ಆನ್‍ಲೈನ್ ಜೂಜಾಟ, ಪೋರ್ಣೋಗ್ರಫಿ, ಬೃಹತ್ ಫ್ಯಾಶನ್ ಉತ್ಪನ್ನಗಳ ವ್ಯವಹಾರಕ್ಕಾಗಿ ಬಳಸಲಾಗುತ್ತಿದೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ. ಡಾರ್ಕ್‍ವೆಬ್ ಮೂಲಕ ಕಾನೂನುಬಹಿರವಾಗಿ ಕೋಟ್ಯಂತರ ರೂ. ಮೊತ್ತದ ಅಕ್ರಮ ವ್ಯವಹಾರ ಕೇರಳದಲ್ಲಿ ಹೆಚ್ಚುತ್ತಿದ್ದು, ಭಯೋತ್ಪಾದಕತೆ, ರಾಷ್ಟ್ರದ್ರೋಹ ಹಾಗೂ ಉಗ್ರಗಾಮಿ ಚಟುವಟಿಕೆಗಳಿಗೂ ಬಳಸುತ್ತಿರುವ ಸಾಧ್ಯತೆ ಬಗ್ಗೆ ಗುಪ್ತಚರ ಇಲಾಖೆಯೂ ಮಾಹಿತಿ ನೀಡಿದೆ.
ಡಾರ್ಕ್‍ವೆಬ್ ಮೂಲಕ ಕೇರಳಕ್ಕೆ ಕೋಟ್ಯಂತರ ರೂ. ರವಾನೆ-ಇಕಾನಮಿಕ್ಸ್ ಬ್ಯೂರೋ
0
ಸೆಪ್ಟೆಂಬರ್ 11, 2022