HEALTH TIPS

ಕನ್ನಡ ಭಾಷಾ ಅಲ್ಪಸಂಖ್ಯಾತರ ಎಲ್‍ಡಿಸಿ ಹುದ್ದೆಗಳನ್ನು ಸಾಮಾನ್ಯ ವರ್ಗಕ್ಕೆ ವರ್ಗಾವಣೆ : ದಕ್ಷಿಣ(ಣೆ)ದ ಲಾಬಿ ಎಂದು ಆರೋಪ


                 ಕುಂಬಳೆ   : ಜಿಲ್ಲೆಯ ಮಂಜೇಶ್ವರ ಹಾಗೂ ಕಾಸರಗೋಡು ತಾಲೂಕುಗಳ ಭಾಷಾ ಅಲ್ಪಸಂಖ್ಯಾತ ವಿಭಾಗಗಳಲ್ಲಿಯ ಮೀಸಲು ಹುದ್ದೆಗಳನ್ನು ಸರ್ಕಾರದ ವಿವಿಧ ಇಲಾಖೆಗಳು ಸಾಮಾನ್ಯ ವರ್ಗಕ್ಕೆ ವರ್ಗಾಯಿಸಿರುವುದಾಗಿ ಅಭ್ಯರ್ಥಿಗಳು ಆರೋಪಿಸಿದ್ದಾರೆ.
           ಕಂದಾಯ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಕೈಗಾರಿಕೆ ಇಲಾಖೆ ಹೀಗೆ ವಿವಿಧ ಇಲಾಖೆಗಳು ಸದ್ಯ ಪಟ್ಟಿಯಲ್ಲಿಲ್ಲ ಎಂಬ ಕಾರಣ ನೀಡಿ ಜನರಲ್ ಎಲ್ ಡಿ.ಗುಮಾಸ್ತ ಇಲಾಖೆಗೆ ವ್ಯಾಪಕವಾಗಿ ವರ್ಗಾವಣೆ ಮಾಡಲಾಗಿದೆ.
       ಇಂತಹ ಘಟನೆಗಳು ಭಾಷಾ ಅಲ್ಪಸಂಖ್ಯಾತ ಪ್ರದೇಶದಲ್ಲಿ ಸಾರ್ವಜನಿಕರಿಗೆ ವಿವಿಧ ಸೇವೆಗಳನ್ನು ಒದಗಿಸಲು ತೊಡಕನ್ನು ಎದುರಿಸುವಂತಾಗಿದೆ. ಕನ್ನಡ-ಮಲಯಾಳಂ ತಿಳಿಯದ ಅಭ್ಯರ್ಥಿಗಳು ಗಡಿನಾಡ ಪ್ರದೇಶದಿಂದ ವಲಸೆ ಹೋಗಬೇಕಾದ ಪರಿಸ್ಥಿತಿಯನ್ನು  ಎದುರಿಸುವುದರ ಜೊತೆಯಾಗಿ ಸಾರ್ವಜನಿಕರಿಗೆ ಸೇವೆಯನ್ನು ಲಭ್ಯವಾಗಿಸಲು ಭಾರೀ ಸಮಸ್ಯೆ ಯನ್ನು ಅನುಭವಿಸಬೇಕಾಗಿದೆ.
       ಎಲ್ ಡಿ ಕ್ಲರ್ಕ್ ಕನ್ನಡ ಮಲಯಾಳಂ ಹುದ್ದೆಯ ಕೊನೆಯ ನೇಮಕಾತಿಯನ್ನು 2015 ರಲ್ಲಿ ಮಾಡಲಾಗಿತ್ತು. 7 ವರ್ಷ ಕಳೆದರೂ 44 ಹುದ್ದೆಗಳನ್ನು ಮಾತ್ರ ವಿವಿಧ ಇಲಾಖೆಗಳು ಪಿಎಸ್‍ಸಿಗೆ ವರದಿ ಮಾಡಿರುವುದಾಗಿ ಹೇಳಲಾಗಿದೆ. ಎಲ್ ಡಿ ಸಿ ಕನ್ನಡ ಮಲಯಾಳಂ ಹುದ್ದೆಗಳನ್ನು ಕಂದಾಯ ಇಲಾಖೆಯು ವ್ಯಾಪಕವಾಗಿ ಮರುನಿಯೋಜನೆ ಮಾಡಿದೆ. 1999 ರಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಮಂಜೇಶ್ವರ ತಾಲೂಕು ರಚನೆಯಾದ ನಂತರ 42 ಹುದ್ದೆಗಳನ್ನು 53 ಹುದ್ದೆಗಳಿಗೆ ಹೆಚ್ಚಿಸಿ ಎಲ್ ಡಿ ಸಿ ಕನ್ನಡ ಮಲಯಾಳಂ ಹುದ್ದೆಗಳನ್ನು ನಿರ್ಧರಿಸಿ ಆದೇಶ ಹೊರಡಿಸಿತ್ತು.
         ಆದರೆ 2015ರಿಂದ 2021ರ ವರೆಗೆ ಸದರಿ ಹುದ್ದೆಗಳಿಗೆ ಪಟ್ಟಿ ಇಲ್ಲ ಎಂಬ ಕುಂಟು ನೆಪ ಹೇಳಿ ಜನರಲ್ ಎಲ್‍ಡಿಸಿಗೆ ಹುದ್ದೆಗಳನ್ನು ನೀಡುವ ಮೂಲಕ ಅಧಿಕಾರಿಗಳು ತಾರತಮ್ಯವನ್ನು ಪ್ರದರ್ಶಿಸಿದ್ದಾರೆ. ಸದ್ಯ ಕಂದಾಯ ಇಲಾಖೆಯಲ್ಲಿ 220 ಗುಮಾಸ್ತರ ಪೈಕಿ 6 ಮಂದಿ ಮಾತ್ರ ಎಲ್ ಡಿಸಿ ಕನ್ನಡ ಮಲೆಯಾಳ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 2015 ರಿಂದ 176 ಖಾಲಿ ಹುದ್ದೆಗಳನ್ನು ಸಾಮಾನ್ಯ ವಿಭಾಗಕ್ಕೆ ವರದಿ ಮಾಡಲಾಗಿದ್ದರೂ ಈ ತನಕ ಎಲ್‍ಡಿಸಿ ಕನ್ನಡ ಮಲಯಾಳಂ ಹುದ್ದೆಗೆ ಕೇವಲ 7 ಖಾಲಿ ಹುದ್ದೆಗಳನ್ನು ಮಾತ್ರ ವರದಿ ಮಾಡಲಾಗಿದೆ.
         6 ಫೆಬ್ರವರಿ 2022 ರಂದು, ಈ ವಿಷಯವನ್ನು ಗಮನಿಸಿದ  ಜಿಲ್ಲಾಧಿಕಾರಿಗಳು 10 ಖಾಲಿ ಹುದ್ದೆಗಳನ್ನು ಎಲ್ ಡಿ ಸಿ ಕನ್ನಡ ಮಲೆಯಾಳಂ ಬಲ್ಲವರಿಗೆ ವರದಿ ಮಾಡಲು ಸೂಚಿಸಿದರೂ ಆ 10 ಖಾಲಿ ಹುದ್ದೆಗಳನ್ನು ಸಾಮಾನ್ಯ ವಿಭಾಗಕ್ಕೆ ನೀಡಿ ಬುಡಮೇಲುಗೊಳಿಸಿರುವುದಾಗಿ ಆರೋಪಿಸಲಾಗಿದೆ.
        ಎಲ್ ಡಿಸಿ ಕನ್ನಡ ಮಲಯಾಳಂ ಹುದ್ದೆಗಳ ಸಂಖ್ಯೆ ನಿಗದಿ ಮಾಡಿ ಹುದ್ದೆಗಳ ವರದಿ ನೀಡುವಂತೆ ನ್ಯಾಯಾಲಯದ ಆದೇಶವಿದ್ದರೂ ಕನ್ನಡ ಭಾμÁ ಅಲ್ಪಸಂಖ್ಯಾತರ ಹುದ್ದೆಗಳು ಖಾಲಿ ಇದ್ದರೂ ವರದಿ ನೀಡದೆ ಸತಾಯಿಸುತ್ತಿರುವುದಾಗಿ ಅಭ್ಯರ್ಥಿಗಳು ಆರೋಪಿಸುತಿದ್ದಾರೆ. ಕಂದಾಯ ಇಲಾಖೆಯಲ್ಲಿ ಎಲ್ ಡಿ ಕ್ಲರ್ಕ್ ಕನ್ನಡ ಮಲಯಾಳಂ ಹುದ್ದೆಗೆ ವರದಿ ಮಾಡಲು 47 ಖಾಲಿ ಹುದ್ದೆಗಳಿವೆ. ಮುಂದೆಯೂ ನ್ಯಾಯ ನಿರಾಕರಣೆ ಕಂಡುಬಂದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಅಭ್ಯರ್ಥಿಗಳು ಎಚ್ಚರಿಕೆ ನೀಡಿದ್ದಾರೆ.
         ಕಾಸರಗೋಡು ಶಿಕ್ಷಣ ಇಲಾಖೆಯಲ್ಲಿ ನ್ಯಾಯಾಲಯದ ಆದೇಶವಿದ್ದರೂ ಎಲ್ ಡಿಸಿ ಕನ್ನಡ ಮಲಯಾಳಂ ಹುದ್ದೆ ನಿರ್ಧಾರವಾಗಿಲ್ಲ. 2005ರಲ್ಲಿ 11 ಹುದ್ದೆಗಳನ್ನು ಮಂಜೂರು ಮಾಡಲಾಗಿದ್ದರೂ ಸದ್ಯ 3 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ನಿರಂತರ ಮನವಿ ಮಾಡಿದರೂ 6 ಹುದ್ದೆಗಳನ್ನು ಸಾಮಾನ್ಯ ವರ್ಗಕ್ಕೆ ನೀಡಿರುವುದಾಗಿ ಅಭ್ಯರ್ಥಿಗಳು ಆರೋಪಿಸಿದ್ದಾರೆ.
       ಆರೋಗ್ಯ, ಲಾಟರಿ, ಕೈಗಾರಿಕೆ, ಗ್ರಾಮೀಣಾಭಿವೃದ್ಧಿ, ಕೃಷಿ, ನೋಂದಣಿ ಮತ್ತು ಜಿಎಸ್‍ಟಿಯಂತಹ ಇಲಾಖೆಗಳು ಕನ್ನಡ ಮಲೆಯಾಳಂ ಎಲ್‍ಡಿಸಿ ಹುದ್ದೆಗಳ ಖಾಲಿ ಹುದ್ದೆಗಳನ್ನು  ವರ್ಗಾಯಿಸಿರುವುದಾಗಿ  ಅಭ್ಯರ್ಥಿಗಳು ಆರೋಪಿಸಿದ್ದಾರೆ. ಪ್ರಸ್ತುತ ಪಟ್ಟಿಯನ್ನು ಪ್ರಕಟಿಸಿದ್ದರೂ ಎಲ್‍ಡಿಸಿ ಕನ್ನಡ ಮಲಯಾಳಂ ಹುದ್ದೆಗಳ ಖಾಲಿ ಹುದ್ದೆಗಳನ್ನು ಜನರಲ್ ಎಲ್‍ಡಿ ಕ್ಲರ್ಕ್ ಹುದ್ದೆಗೆ ವರದಿ ಮಾಡುವುದನ್ನು ಮುಂದುವರಿಸಿದರೆ ಕಾನೂನು ಕ್ರಮಕ್ಕೆ ಮುಂದಾಗಲಿರುವುದಾಗಿ  ಅಭ್ಯರ್ಥಿಗಳು ಎಚ್ಚರಿಸಿದ್ದಾರೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries