ಬದಿಯಡ್ಕ: ಸಮಗ್ರ ಶಿಕ್ಷಾ ಕೇರಳ, ಕುಂಬಳೆ ಬಿಆರ್‍ಸಿ(ಬ್ಲಾಕ್ ಸಂಪನ್ಮೂಲ ಕೇಂದ್ರ), ಕಾಸರಗೋಡು ಇದರ ಆಶ್ರಯದಲ್ಲಿ ಒಂದರಿಂದ ನಾಲ್ಕನೇ ತರಗತಿಯ ಮಕ್ಕಳಿಗೆ ಸ್ವತಂತ್ರ ಓದು ಮತ್ತು ಸ್ವತಂತ್ರ ಬರವಣಿಗೆಯನ್ನು ಬೆಳೆಸಲು ಓದುವ ತರಬೇತಿ ಕಾರ್ಯಕ್ರಮವನ್ನು ನಡೆಸಲಾಯಿತು. ಬೇಳ ಸೇಂಟ್ ಬಿಎಎಸ್ ಬಿಎಸ್ ಶಾಲೆಯಲ್ಲಿ ನಡೆದ ತರಬೇತಿ ಕಾರ್ಯಕ್ರಮವನ್ನು ಲೇಖಕಿ ಪ್ರಭಾವತಿ ಕೆದಿಲಾಯ ಉದ್ಘಾಟಿಸಿದರು. ಉಪಜಿಲ್ಲಾ ಶಿಕ್ಷಣಾಧಿಕಾರಿ ಯತೀಶ್ ಕುಮಾರ್ ರೈ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಬ್ಲಾಕ್ ನಿರೂಪಣಾಧಿಕಾರಿ ಜೆ.ಜಯರಾಮ್, ಮುಖ್ಯಶಿಕ್ಷಕಿ ಅಶ್ವಿನಿ, ಸಿಆರ್‍ಸಿ ಸಂಯೋಜಕಿ ಸುಪ್ರಿಯಾ ಟೀಚರ್ ಮಾತನಾಡಿದರು.
ಎಫ್.ಎ.ಎಲ್.ಪಿ.ಎಸ್ ನಾರಂಪಾಡಿಯಲ್ಲಿ ನಡೆದ ತರಬೇತಿ ಕಾರ್ಯಕ್ರಮವನ್ನು ಶಾಲಾ ಪ್ರಭಾರ ಮುಖ್ಯೋಪಾಧ್ಯಾಯ ಜಾನ್ ಕ್ರಾಸ್ತಾ ಉದ್ಘಾಟಿಸಿದರು. ಈಶ್ವರ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಬೇಕಲ ಬಿಆರ್ ಸಿಯ ತರಬೇತುದಾರ ಕೆ.ಸನಿಲ್ ಕುಮಾರ್ ಹಾಗೂ ಶ್ರುತಿ ಟೀಚರ್ ಮಾತನಾಡಿದರು. ಎರಡೂ ಕೇಂದ್ರಗಳಲ್ಲಿ ಕುಂಬಳೆ ವ್ಯಾಪ್ತಿಯ ವಿವಿಧ ಶಾಲೆಗಳ 91 ಶಿಕ್ಷಕರು ಭಾಗವಹಿಸಿದ್ದರು.
ಓದುವ ಗೆಳೆಯರ ತರಬೇತಿ ಕಾರ್ಯಕ್ರಮ
0
ಸೆಪ್ಟೆಂಬರ್ 22, 2022