ಕಾಸರಗೋಡು: ಜಿಲ್ಲಾ ಗ್ರಂಥಾಲಯ ಪರಿಷತ್ ಅಭಿವೃದ್ಧಿ ಸಮಿತಿ ವತಿಯಿಂದ ನಡೆಯಲಿರುವ ಪುಸ್ತಕೋತ್ಸವದ ಅಂಗವಾಗಿ ಜಿಲ್ಲಾ ಗ್ರಂಥಾಲಯ ಪರಿಷತ್ತಿನ ಕಚೇರಿಯಲ್ಲಿ ಆರಂಭಿಸಲಾದ ಸಂಘಟನಾ ಸಮಿತಿ ಕಚೇರಿಯನ್ನು ಮಾಜಿ ಸಂಸದ ಪಿ.ಕರುಣಾಕರನ್ ಉದ್ಘಾಟಿಸಿದರು. ಸೆಪ್ಟೆಂಬರ್ 17, 18, 19ದಿನಾಂಕದಂದು ಕಾಞಂಗಾಡ್ ಅಲಮಿಪ್ಪಲ್ಲಿ ಹೊಸ ಬಸ್ ನಿಲ್ದಾಣ ಪ್ರದೇಶದಲ್ಲಿ ಪುಸ್ತಕೋತ್ಸವ ನಡೆಯಲಿದೆ. ಖ್ಯಾತ ಕಾದಂಬರಿಕಾರ ಎಂ.ಮುಕುಂದನ್ ಪುಸ್ತಕೋತ್ಸವ ಉದ್ಘಾಟಿಸುವರು. ರಾಜ್ಯದ ವಿವಿಧ ಭಾಗಗಳ 45 ಪ್ರಕಾಶಕರ ಸುಮಾರು 80 ಪುಸ್ತಕ ಮಳಿಗೆಗಳು ಇರಲಿದೆ. ಪುಸ್ತಕೋತ್ಸವದ ಅಂಗವಾಗಿ ಐತಿಹಾಸಿಕ ಕಥೆ ಪುಸ್ತಕ ಬಿಡುಗಡೆ, ಗ್ರಂಥಾಲಯ ಕಾರ್ಯಕರ್ತರ ಸಮಾವೇಶ, ಚಲನಚಿತ್ರ ಗಾಯನ ಸ್ಪರ್ಧೆ, ನಾಟಕ ರಾತ್ರಿ, ವಸಂತ ಗೀತೆ, ಕಥೆ ಹೇಳುವ ಕಾರ್ಯಕ್ರಮಗಳು ನಡೆಯಲಿವೆ.
ಇಂದು ಲಾಂಛನ ಬಿಡುಗಡೆ:
ಕಾಸರಗೋಡು ಜಿಲ್ಲಾ ಲೈಬ್ರರಿ ಕೌನ್ಸಿಲ್ ಅಭಿವೃದ್ಧಿ ಸಮಿತಿ ಆಯೋಜಿಸಿರುವ ಪುಸ್ತಕೋತ್ಸವದ ಲಾಂಛನ ಬಿಡುಗಡೆ ಸಮರಂಭ ಸೆ. 12ರಂದು ಸಂಜೆ 4 ಗಂಟೆಗೆ ಜಿಲ್ಲಾ ಗ್ರಂಥಾಲಯ ಪರಿಷತ್ತಿನ ಕಚೇರಿಯಲ್ಲಿ ನಡೆಯಲಿದೆ. ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸೂದನನ್ ಲಾಂಛನ ಬಿಡುಗಡೆಗೊಳಿಸುವರು. ಸೆಪ್ಟೆಂಬರ್ 17, 18, 19 ದಿನಾಂಕದಂದು ಕಾಞಂಗಾಡ್‍ನ ಅಲಮಿಪ್ಪಲ್ಲಿ ಹೊಸ ಬಸ್ ನಿಲ್ದಾಣ ಆವರಣದಲ್ಲಿ ಪುಸ್ತಕೋತ್ಸವ ನಡೆಯಲಿದೆ.
ಪುಸ್ತಕೋತ್ಸವ: ಸಂಘಟನಾ ಸಮಿತಿ ಕಛೇರಿ ಕಾರ್ಯಾರಂಭ
0
ಸೆಪ್ಟೆಂಬರ್ 11, 2022