ಇವ್ನು ಯಾವಾಗ ನೋಡಿದ್ರು ವಿಡಿಯೋ ಗೇಮಿಂಗ್ ನಲ್ಲೇ ನೇತಾಡುತ್ತಿರುತ್ತಾನೆ ಎಂದು ಅನೇಕ ಪೋಷಕರು ಹೇಳುವುದುಂಟು. ಬಯ್ಯೋದು , ಹೊಡೆಯೋದು ಉಂಟು. ಆದರೆ ನಿಮಗೊಂದು ಗೊತ್ತಾ ವಿಡಿಯೋ ಗೇಮ್ ನಿಂದ ಅನೇಕ ಪ್ರಯೋಜನಗಳು ಮಕ್ಕಳಿಗೆ ಸಿಗುತ್ತದೆ ಎನ್ನುವುದು. ಹೌದು, ವೀಡಿಯೋ ಗೇಮ್‌ಗಳು ಮತ್ತು ಅವು ಮಾನಸಿಕ ಆರೋಗ್ಯದ ಮೇಲೆ ಬೀರುವ ಪ್ರಭಾವದ ಬಗ್ಗೆ ಅನೇಕ ತಪ್ಪು ಕಲ್ಪನೆಗಳು ನಮ್ಮಲ್ಲಿ ಇವೆ.
ಲೈಂಗಿಕ ಕಿರುಕುಳ ನೀಡಿದ ಆರೋಪವನ್ನು ಎದುರಿಸುತ್ತಿರುವ ಸ್ವಾಮೀಜಿಗಳ ಕಥೆ..!
ಸತ್ಯವೆಂದರೆ ವೀಡಿಯೊ ಗೇಮ್‌ಗಳು ಸಂಕೀರ್ಣವಾದ ಸಮಸ್ಯೆ-ಪರಿಹರಿಸುವ, ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಆನ್‌ಲೈನ್ ಗೇಮಿಂಗ್ ಮೂಲಕ ಸಾಮಾಜಿಕ ಸಂವಹನವನ್ನು ಉತ್ತೇಜಿಸುವುದು ಸೇರಿದಂತೆ ಹಲವು ಪ್ರಯೋಜನಗಳನ್ನು ಹೊಂದಿವೆ. ನಿಮ್ಮ ಮನಸ್ಸನ್ನು ಉತ್ತೇಜಿಸಲು ಮತ್ತು ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸಲು ವೀಡಿಯೊ ಗೇಮ್‌ಗಳು ಉತ್ತಮ ಮಾರ್ಗವಾಗಿದೆ.
ಈ ಬಗ್ಗೆ ಅನೇಕ ಅಧ್ಯಯನ, ಸಮೀಕ್ಷೆಗಳು ನಡೆದಿದ್ದು ಮಕ್ಕಳ ಮಾನಸಿಕ ಆರೋಗ್ಯಕ್ಕೆ ವಿಡಿಯೋ ಗೇಮ್ ಗಳು ಉತ್ತಮ ಎಂದು ಹೇಳಲಾಗಿದೆ. ಆದರೂ ಅತಿಯಾದರೆ ಅಮೃತವೂ ವಿಷ ಎನ್ನುವ ಹಾಗೇ ವ್ಯಸನ ರೀತಿಯ ವಿಡಿಯೋ ಗೇಮಿಂಗ್ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಇತಿ ಮಿತಿಯಲ್ಲಿರುವ ವಿಡಿಯೋ ಗೇಮ್ ಗಳಿಂದ ಏನು ಸಿಗುತ್ತದೆ? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.
ವಿಡಿಯೋ ಗೇಮ್‌ಗಳಿಂದ ಸಿಗುವ ಪ್ರಯೋಜನಗಳು!
ವಿಡಿಯೋ ಗೇಮ್‌ಗಳನ್ನು ಆಡುವುದರಿಂದ ನಿಮ್ಮ ಮಾನಸಿಕ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ವೀಡಿಯೊ ಗೇಮ್‌ಗಳು ಒತ್ತಡವನ್ನು ನಿವಾರಿಸಲು ಮತ್ತು ನಿಮ್ಮ ಮನಸ್ಸನ್ನು ಮುನ್ನಡೆಸಲು ಸಹಾಯ ಮಾಡುತ್ತದೆ. ಇದಲ್ಲದೇ ಹಲವಾರು ಪ್ರಯೋಜನಗಳು ತಿಳಿದುಕೊಳ್ಳಲು ಮುಂದೆ ಓದಿ.
ಮಾನಸಿಕ ಉತ್ತೇಜನ!
ಕೆಲವೊಂದು ವಿಡಿಯೋ ಗೇಮ್ ಗಳು ತುಂಬಾನೇ ಕಷ್ಟಕರವಾಗಿರುತ್ತದೆ. ನೀವು ಆ ಗೇಮ್ ಗಳನ್ನು ಆಡಲು ಅಥವಾ ಎದುರಾಳಿಯನ್ನು ಸೋಲಿಸಲು ಭಾರೀ ಯೋಚನೆ ಮಾಡಬೇಕಾಗುತ್ತದೆ. ಹೌದು, ಈ ಎಲ್ಲಾ ಕಾರಣಗಳಿಂದ ವಿಡಿಯೋ ಗೇಮ್‌ಗಳು ನಿಮ್ಮನ್ನು ಆಗಾಗ್ಗೆ ಯೋಚಿಸುವಂತೆ ಮಾಡುತ್ತದೆ. ನೀವು ವೀಡಿಯೋ ಗೇಮ್‌ಗಳನ್ನು ಆಡುವಾಗ, ನಿಮ್ಮ ಮೆದುಳಿನ ಪ್ರತಿಯೊಂದು ಭಾಗವು ಉನ್ನತ ಮಟ್ಟದ ಚಿಂತನೆಯನ್ನು ಸಾಧಿಸಲು ನಿಮಗೆ ಸಹಾಯ ಮಾಡಲು ಕೆಲಸ ಮಾಡುತ್ತದೆ. ಆಟದ ಸಂಕೀರ್ಣತೆಗೆ ಅನುಗುಣವಾಗಿ, ನೀವು ತ್ವರಿತವಾಗಿ ಯೋಚಿಸಬೇಕು, ಕಾರ್ಯತಂತ್ರ ರೂಪಿಸಬೇಕು ಮತ್ತು ವಿಶ್ಲೇಷಿಸಬೇಕಾಗುತ್ತದೆ. ವಿಡಿಯೋ ಗೇಮ್ ಆಟಗಳು ನಿಮ್ಮ ಮೆದುಳಿನ ಆಳವಾದ ಭಾಗಗಳೊಂದಿಗೆ ಕೆಲಸ ಮಾಡುತ್ತದೆ ಅದು ಅಭಿವೃದ್ಧಿ ಮತ್ತು ವಿಮರ್ಶಾತ್ಮಕ ಚಿಂತನೆಯ ಕೌಶಲ್ಯಗಳನ್ನು ಸುಧಾರಿಸುತ್ತದೆ. ಇದರಿಂದಾಗಿ ನಿಮ್ಮ ಮೆದುಳು ಚುರುಕಾಗಿರುತ್ತದೆ.
ಸಾಧಿಸಬೇಕು ಎನ್ನುವ ಮನೋಭಾವ
ಹಲವು ಗೇಮ್ ಗಳು ಗೆದ್ದಂತೆ ಖುಷಿ ಹೆಚ್ಚಿಸುತ್ತದೆ. ಇನ್ನಷ್ಟು ಸಾಧಿಸುವ ಎನ್ನುವ ಮನಸ್ಸು ಆಗುತ್ತದೆ. ಹೌದು, ಆಟದಲ್ಲಿ, ನೀವು ತಲುಪಲು ಗುರಿ ಮತ್ತು ಉದ್ದೇಶಗಳನ್ನು ಹೊಂದಿದ್ದೀರಿ. ಒಮ್ಮೆ ನೀವು ಅವುಗಳನ್ನು ಸಾಧಿಸಿದರೆ, ಅದರಿಂದ ನಿಮಗೆ ಸಾಕಷ್ಟು ತೃಪ್ತಿ ಸಿಗುತ್ತದೆ. ಈ ಮೂಲಕ ನಿಮ್ಮ ವೆಲ್ ಬಿಯೀಂಗ್ ಸುಧಾರಿಸುತ್ತದೆ. ಇನ್ನು ಕೆಲವು ಗುರಿಗಳಿಗಾಗಿ ಟ್ರೋಫಿಗಳು ಅಥವಾ ಬ್ಯಾಡ್ಜ್‌ಗಳನ್ನು ನೀಡುವ ಆಟಗಳನ್ನು ನೀವು ಆಡಿದಾಗ ಈ ಸಾಧನೆಯು ನಿಮ್ಮ ಪ್ರಜ್ಞೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಹೆಚ್ಚಿನ ಸಾಧನೆಗಳನ್ನು ಪಡೆಯಲು ನೀವು ಬಯಸುತ್ತೀರಿ. ಹಾಗೂ ಇದಕ್ಕೆ ಬೇಕಾಗಿ ಕೆಲಸ ಮಾಡಲು ನಿಮ್ಮ ಮನಸ್ಸು ತುಡಿಯುತ್ತದೆ. ಯಾವಾಗಲೂ ಅವಕಾಶಕ್ಕಾಗಿ ಕಾಯುತ್ತಿರುತ್ತೀರಿ.
ಮಾನಸಿಕ ಆರೋಗ್ಯ ಚೇತರಿಕೆ!
ವಿಡಿಯೋ ಗೇಮ್ ನಿಂದ ನಿಮ್ಮ ಮಾನಸಿಕ ಆರೋಗ್ಯ ಚೇತರಿಕೆಯಾಗುತ್ತದೆ. ಉದಾಹರಣೆಗೆ ನೀವು ಯಾವುದಾದರೂ ಆಘಾತಕ್ಕೊಳಗಾಗಿ ನಿಮ್ಮ ಮಾನಸಿಕತೆ ಸಮಸ್ಯೆಯಲ್ಲಿದ್ದರೆ ವಿಡಿಯೋ ಗೇಮ್ ಗಳು ಆಡುವುದು ಆಘಾತದ ಚೇತರಿಕೆಗೆ ಸಹಾಯ ಮಾಡುತ್ತದೆ. ವೀಡಿಯೋ ಗೇಮ್‌ಗಳು ನೋವು ಮತ್ತು ಮಾನಸಿಕ ಆಘಾತದಿಂದ ನಿಮಗೆ ರಿಲೀಫ್ ನೀಡುತ್ತದೆ. ನಿಮ್ಮನ್ನು ಗೇಮ್ ಗಳು ತಲ್ಲಿನರಾಗುವಂತೆ ಮಾಡುತ್ತದೆ. ಇದಲ್ಲದೆ ನಿಮಗಿರುವ ಆತಂಕ, ಖಿನ್ನತೆ, ಗಮನ ಕೊರತೆ ಹೈಪರ್ಆಕ್ಟಿವಿಟಿ ಡಿಸಾರ್ಡರ್ (ADHD), ಮತ್ತು ನಂತರದ ಆಘಾತಕಾರಿ ಒತ್ತಡದ ಅಸ್ವಸ್ಥತೆ (PTSD) ನಂತಹ ಮಾನಸಿಕ ಅಸ್ವಸ್ಥತೆಗಳೊಂದಿಗೆ ವ್ಯವಹರಿಸುತ್ತಿರುವ ಜನರಿಗೆ ವೀಡಿಯೊ ಆಟಗಳು ತುಂಬಾನೇ ಸಹಕಾರಿಯಾಗಲಿದೆ.
ಸಾಮಾಜಿಕವಾಗಿ ಸಂವಹನ!
ನಮ್ಮಲ್ಲಿರುವ ಅನೇಕ ವಿಡಿಯೋ ಗೇಮ್ ಗಳು ಹೇಗೆ ಅಂದರೆ ಸಾಮಾಜಿಕ ಸಂವನವನ್ನು ಸೃಷ್ಟಿ ಮಾಡುತ್ತಿದೆ. ಅಲ್ಲಿ ಗೆಳೆತನವನ್ನು ಸೃಷ್ಟಿ ಮಾಡಿಸುತ್ತಿದೆ. ಎಲ್ಲಿಂದಲೂ ಕೂತು ಎಲ್ಲಿಂದಲೋ ಇರುವ ವ್ಯಕ್ತಿ ಜೊತೆ ವಿಡಿಯೋ ಗೇಮ್ ಮೂಲಕ ಮಾತುಕತೆ ಹಾಗೂ ಸ್ನೇಹವನ್ನು ಗಳಿಸಲಾಗುತ್ತಿದೆ. ಇದರಿಂದ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪಾಸಿಟಿವ್ ಪರಿಣಾಮಗಳು ಬೀರುತ್ತಿವೆ. ಇನ್ನು ಗೇಮ್ ನಲ್ಲಿರುವ ಕೆಲವು ಆಟಗಳು ಸಮಾಜದಲ್ಲಿ ಹೇಗೆ ಬದುಕಬೇಕು, ಯಾವ ರೀತಿ ಎಚ್ಚರಿಕೆಯಿಂದ ಇರಬೇಕು? ಯಾರನ್ನು ನಂಬಬೇಕು ಎನ್ನುವ ನೀತಿ ಪಾಠಗಳನ್ನು ಕಲಿಸುತ್ತಿದೆ.
ಭಾವನಾತ್ಮಕ ಸ್ಥಿತಿಸ್ಥಾಪಕತ್ವ!
ಈ ಹಿಂದೆ ಎಲ್ಲ ಮಕ್ಕಳು ಯಾವುದಾದರೂ ಆಟದಲ್ಲಿ ಸೋತರೆ ತುಂಬಾನೇ ಬೇಸರ ಮಾಡಿಕೊಳ್ಳುತ್ತಿದ್ದರು. ಕೆಲವರು ಜೀವಕ್ಕೆ ಕುತ್ತು ತರುವಂತಹ ಕೆಲಸ ಮಾಡುತ್ತಿದ್ದರು. ಆದ್ರೆ ಈಗ ಹಾಗಿಲ್ಲ, ವಿಡಿಯೋ ಗೇಮ್ ಗಳ ಮೂಲಕ ಮಕ್ಕಳು ಮರಳಿ ಯತ್ನವನ್ನು ಮಾಡುತ್ತಿದ್ದಾರೆ. ವೈಫಲ್ಯವನ್ನು ಹೇಗೆ ನಿಭಾಯಿಸುವುದು ಮತ್ತು ಪ್ರಯತ್ನವನ್ನು ಮುಂದುವರಿಸುವುದು ಹೇಗೆ ಎಂಬುದನ್ನು ತಿಳಿಯಲು ವಿಡಿಯೋ ಗೇಮ್‌ಗಳು ಮಕ್ಕಳಿಗೆ ಸಹಾಯ ಮಾಡುತ್ತಿವೆ. ಮಾನಸಿಕವಾಗಿ ಮಕ್ಕಳು ಸದೃಢವಾಗುತ್ತಿದ್ದಾರೆ.