ಕಾಸರಗೋಡು: ಜನರಲ್ ಆಸ್ಪತ್ರೆಗೆ ಕೆಎಎಸ್‍ಪಿ ಮತ್ತು ಮೆಡಿಸೆಪ್ ಯೋಜನೆಯನ್ವಯ ದಿನ ವೇತನ ಆಧಾರದ ಮೇಲೆ ಡಾಟಾ ಎಂಟ್ರಿ ಆಪರೇಟರ್ ಮತ್ತು ಅಟೆಂಡೆಂಟ್ ಹುದ್ದೆಗೆ ಸಂದರ್ಶನ ನಡೆಯಲಿರುವುದು.
ಡೇಟಾ ಎಂಟ್ರಿ ಆಪರೇಟರ್ ಹುದ್ದೆಗೆ ಪದವಿ, 6 ತಿಂಗಳಿಗಿಂತ ಕಡಿಮೆಯಿಲ್ಲದ ಕಂಪ್ಯೂಟರ್ ಕೋರ್ಸ್, ಅದೇ ಉದ್ಯೋಗದಲ್ಲಿ ಹಿಂದಿನ ಅನುಭವಕ್ಕೆ ಆದ್ಯತೆ ಹಾಗೂ ಮೆಡಿಕಲ್ ರೆಕಾರ್ಡ್ ಲೈಬ್ರರಿ ಅಟೆಂಡೆಂಟ್ ಹುದ್ದೆಗೆ ಪ್ಲಸ್ ಟು ಅಥವಾ ತತ್ಸಮಾನ, ಟೈಪ್ ರೈಟಿಂಗ್ ಅನುಭವಕ್ಕೆ ಆದ್ಯತೆ ವಿದ್ಯಾರ್ಹತೆಯಾಗಿರುತ್ತದೆ. ಸೆಪ್ಟೆಂಬರ್ 13ರಂದು ಬೆಳಗ್ಗೆ 10ಕ್ಕೆ ಡೇಟಾ ಎಂಟ್ರಿ ಆಪರೇಟರ್ ಸಂದರ್ಶನ ಹಾಗೂ ಅದೇ ದಿನ ಮಧ್ಯಾಹ್ನ 2ಕ್ಕೆ ಮೆಡಿಕಲ್ ರೆಕಾರ್ಡ್ ಲೈಬ್ರರಿ ಅಟೆಂಡೆಂಟ್ ಸಂದರ್ಶನ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಮೂಲ ಪ್ರಮಾಣ ಪತ್ರಗಳು ಮತ್ತು ಕೆಲಸದ ಅನುಭವದ ಪ್ರಮಾಣ ಪತ್ರದೊಂದಿಗೆ ಸರ್ಕಾರಿ ಜನರಲ್ ಆಸ್ಪತ್ರೆ ಕಚೇರಿಗೆ ಹಾಜರಾಗಬೇಕು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994 230080)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಡೇಟಾ ಎಂಟ್ರಿ ಆಪರೇಟರ್, ಅಟೆಂಡೆಂಟ್ ಹುದ್ದೆಗೆ ಸಂದರ್ಶನ
0
ಸೆಪ್ಟೆಂಬರ್ 07, 2022