ಕಾಕ್ಕನಾಡ: ಫ್ಲ್ಯಾಟ್ ಒಂದರ ಅಡುಗೆ ಕೋಣೆಯಲ್ಲಿ ಗಾಂಜಾ ಬೆಳೆದಿದ್ದ ಇಬ್ಬರು ವ್ಯಕ್ತಿಗಳನ್ನು ಕೇರಳದ ಜಿಲ್ಲಾ ಮಾದಕ ದ್ರವ್ಯ ವಿರೋಧಿ ವಿಶೇಷ ಕ್ರಿಯಾ ಪಡೆ ನಿನ್ನೆ (ಸೆ.16) ಬಂಧಿಸಿದೆ.
ಬಂಧಿತರನ್ನು ಕೊನ್ನಿ ಮೂಲದ ವಲ್ಯಾತೆಕ್ಕೆತ್ತಿಲ್ ಅಲನ್ (26) ಮತ್ತು ಕಾಯಮಕುಲಂ ಮೂಲದ ಪುತನಪುರಕ್ಕಲ್ ಅಪರ್ಣಾ (24) ಎಂದು ಗುರುತಿಸಲಾಗಿದೆ.
ಕಾಕ್ಕನಾಡ್‌ನ ನಿಲಂಪತಿಂಜಮುಗಲ್‌ನ ಫ್ಲಾಟ್‌ನಲ್ಲಿ ಗಾಂಜಾ ಗಿಡವನ್ನು ವಶಪಡಿಸಿಕೊಳ್ಳಲಾಗಿದೆ. ಗಾಂಜಾ ಗಿಡ ಒಂದೂವರೆ ಮೀಟರ್ ಎತ್ತರವಿದ್ದು, ಅಡುಗೆ ಮನೆಯಲ್ಲಿ ಬೆಳೆಸಲಾಗಿತ್ತು. ಅದಕ್ಕೆ ಪೂರಕವಾಗಿ ಎಲ್‌ಇಡಿ ಲೈಟ್ ಮತ್ತು ಎಕ್ಸಾಸ್ಟ್ ಫ್ಯಾನ್ ಅನ್ನು ಅಳಡಿಸಲಾಗಿತ್ತು. ಫ್ಲ್ಯಾಟ್ನಲ್ಲಿ ಗಾಂಜಾ ಸೇವನೆ ಬಗ್ಗೆ ರಹಸ್ಯ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಪೊಲೀಸ್ ಅಧಿಕಾರಿಗಳು ಆರೋಪಿ ಅಲನ್ ಅವರ ನೆರೆಹೊರೆಯವರಾದ ಅಮಲ್ ಅವರ ಹೇಳಿಕೆಯನ್ನು ಸಾಕ್ಷಿಯಾಗಿ ತೆಗೆದುಕೊಂಡಿದ್ದಾರೆ. ಅಮಲ್ ಅವರು ಅಲನ್ ಸಮೀಪದ ಫ್ಲ್ಯಾಟ್ನಲ್ಲಿ ವಾಸವಾಗಿದ್ದರು. ಅಲನ್ ಆತನ ವರ್ತನೆಯಿಂದ ಅನುಮಾನಗೊಂಡ ಪೊಲೀಸರು ಆತನಿಂದಲೂ ಗಾಂಜಾ ವಶಪಡಿಸಿಕೊಂಡಿದ್ದಾರೆ.